ನಾಡಿನ ಪ್ರತಿಯೊಂದು ಗ್ರಾಮದಲ್ಲಿ ಭಜನಾ ಸಂಘಗಳಿವೆ. ಅವುಗಳಿಂದ ಭಾರತೀಯ ಸಂಗೀತ ಸೊಗಡು ಉಳಿದುಕೊಂಡು ಬಂದಿದೆ. ಆದರೆ ಆಧುನಿಕತೆಯಿಂದ ಗ್ರಾಮೀಣ ಭಾಗದಲ್ಲಿ ಭಜನಾ ಸಂಘಗಳು ಮರೆಯಾಗುತ್ತಿರುವುದು ನೋವಿನ ಸಂಗತಿ. ಯುವಕರು ಭಜನಾ ಸಂಘಗಳನ್ನು ಉಳಿಸಿಕೊಂಡು ಹೋಗಲು ಮುಂದಾಗಬೇಕು ಎಂದರು.

ನರಗುಂದ: ಗ್ರಾಮೀಣ ಭಾಗದಲ್ಲಿ ಭಜನಾ ಸಂಗೀತವು ಒಂದು ಕಾಲದಲ್ಲಿ ಬಹಳಷ್ಟು ಸದ್ದು ಮಾಡಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳ ಸದ್ದು ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಗದುಗಿನ ಸೊರಟೂರ ಹಿರೇಮಠದ ಫಕೀರೇಶ್ವರ ಶ್ರೀಗಳು ತಿಳಿಸಿದರು.

ತಾಲೂಕಿನ ಹದಲಿ ಗ್ರಾಮದ ಅಲ್ಲಮ್ಮಪ್ರಭುದೇವರ ಬಯಲು ರಂಗಮಂದಿರದಲ್ಲಿ ಎಳ್ಳು ಅಮಾವಾಸ್ಯೆ ಅಂಗವಾಗಿ ಹಮ್ಮಿಕೊಂಡ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಡಿನ ಪ್ರತಿಯೊಂದು ಗ್ರಾಮದಲ್ಲಿ ಭಜನಾ ಸಂಘಗಳಿವೆ. ಅವುಗಳಿಂದ ಭಾರತೀಯ ಸಂಗೀತ ಸೊಗಡು ಉಳಿದುಕೊಂಡು ಬಂದಿದೆ. ಆದರೆ ಆಧುನಿಕತೆಯಿಂದ ಗ್ರಾಮೀಣ ಭಾಗದಲ್ಲಿ ಭಜನಾ ಸಂಘಗಳು ಮರೆಯಾಗುತ್ತಿರುವುದು ನೋವಿನ ಸಂಗತಿ. ಯುವಕರು ಭಜನಾ ಸಂಘಗಳನ್ನು ಉಳಿಸಿಕೊಂಡು ಹೋಗಲು ಮುಂದಾಗಬೇಕೆಂದರು.

ಭಜನಾ ಸ್ಪರ್ಧೆಯಲ್ಲಿ 18 ಭಜನಾ ತಂಡಗಳು ಭಾಗವಹಿಸಿದ್ದವು. ಇದೇ ಸಂದರ್ಭದಲ್ಲಿ ಗ್ರಾಮದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚನ್ನಬಸಯ್ಯ ಹಿರೇಮಠ, ಬಸಪ್ಪ ಬದ್ನಿಕಾಯಿ, ಅಶೋಕ ಕಲಹಾಳ, ರಾಜು ನರಗುಂದ, ಪ್ರಭುಲಿಂಗಪ್ಪ ಯಲಿಗಾರ, ಬಸವಂತಪ್ಪ ಹಾದಿಮನಿ, ಯಲ್ಲಪ್ಪ ಹದಲಿ, ಮಹಾಂತೇಶ ಹುರಳಿ, ಮಲ್ಲಪ್ಪ ಕರಿ, ವಿಜಯಪುರದ ಡಿವೈಎಸ್‌ಪಿ ಡಾ. ಬಸವರಾಜ ಯಲಿಗಾರ, ಪಿಎಸ್‌ಐ ಸಾಗರ ಬದ್ನಿಕಾಯಿ, ಗ್ರಾಮಸ್ಥರು ಇದ್ದರು. ಶ್ರವಣ ಸಾಧನ ಯಂತ್ರ ವಿತರಣೆ

ಗದಗ: ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು 2025- 26ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಜಗದೀಶ ಭಟ್ ಜೋಶಿ ಅವರಿಗೆ ಶ್ರವಣ ಸಾಧನ ಯಂತ್ರ ವಿತರಿಸಿದರು.ನಂತರ ಮಾತನಾಡಿದ ಅವರು, ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಸೌಲಭ್ಯ ಹಾಗೂ ಯೋಜನೆಗಳನ್ನು ನೀಡುತ್ತಿದೆ. ಅವುಗಳನ್ನು ಅರ್ಹರು ಇಲಾಖೆಗೆ ಅರ್ಜಿ ಸಲ್ಲಿಸುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಇಲಾಖಾಧಿಕಾರಿಗಳು ಬಂದಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಿಳಿಸಿದರು.ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಮಹಾಂತೇಶ್ ಕೆ. ಸೇರಿದಂತೆ ಇತರರು ಇದ್ದರು.