ಒಟ್ಟು 22 ಸದಸ್ಯರ ಬಲ ಹೊಂದಿರುವ ಸಂಘದ ಎಲ್ಲ ಸದಸ್ಯರು ಹಾಜರಿದ್ದರು.

ಕೂಡ್ಲಿಗಿ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ರಾಜ್ಯ ಸಂಘದ ನಿರ್ಧೇಶನದಂತೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಒಟ್ಟು 22 ಸದಸ್ಯರ ಬಲ ಹೊಂದಿರುವ ಸಂಘದ ಎಲ್ಲ ಸದಸ್ಯರು ಹಾಜರಿದ್ದರು.

ಹೂಡೇಂ ಕೃಷ್ಣಮೂರ್ತಿ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಎಚ್. ವೀರಣ್ಣ, ಗೌರವಾಧ್ಯಕ್ಷರಾಗಿ ಭೀಮಣ್ಣ ಗಜಾಪುರ, ಉಪಾಧ್ಯಕ್ಷರಾಗಿ ಕೆ. ಸುನಿಲ್ ಗೌಡ, ಸೋಮಶೇಖರ ಆರಾಧ್ಯ, ಕಾರ್ಯದರ್ಶಿಗಳಾಗಿ ಅಂಗಡಿ ವೀರೇಶ್, ದಯಾನಂದ್ ಸಜ್ಜನ್, ಖಜಾಂಚಿಯಾಗಿ ಬಿ. ನಾಗರಾಜ ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿ. ಕರಿಬಸವರಾಜ, ಭೀಮಸಮುದ್ರ ರಂಗನಾಥ, ಕೆ. ನಾಗರಾಜ, ಹೂಡೇಂ ಮಂಜುನಾಥ, ಕಣೇಕಲ್ ಮಠ ವೀರೇಶ, ಮಂಜು ಮಯೂರ, ನಾಗರಹುಣಿಸೆ ದುರುಗೇಶ್, ಎಲೆ. ನಾಗರಾಜ, ಬಡಿಗೇರ ನಾಗರಾಜ, ತಿಪ್ಪೇಹಳ್ಳಿ ಮಾರೇಶ, ಇಬ್ರಾಹಿಂ ಕಲೀಲ್, ಲಿಂಬುನಾಯ್ಕ, ಶಿವಪ್ರಸಾದ್, ಬುಗುಡಿ ಬಾಲಪ್ಪ ಈ ಸಂದರ್ಭದಲ್ಲಿ ರಾಜ್ಯ ಸಂಘದ ಸದಸ್ಯ ವೆಂಕೋಬನಾಯಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಖಜಾಂಚಿ ಈ ನಾಡು ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಉಜ್ಜಿನಿ ರುದ್ರಪ್ಪ, ಸಿ.ಕೆ. ನಾಗರಾಜ, ಕಾರ್ಯದರ್ಶಿ ಕೆ. ಸುರೇಶ್ ಚೌಹಾಣ್, ಸಂಜಯ್ ಕುಮಾರ್ ಹಾಜರಿದ್ದು ಚುನಾವಣೆ ಪ್ರಕ್ರಿಯೆ ನಡೆಸಿದರು.

ಕೂಡ್ಲಿಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹೂಡೇಂ ಕೃಷ್ಣಮೂರ್ತಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಹೆಚ್. ವೀರಣ್ಣ ಅವರನ್ನು ಜಿಲ್ಲಾ ಸಂಘದ ಸದಸ್ಯರು ಹಾಗೂ ಕೂಡ್ಲಿಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಸನ್ಮಾನಿಸಿದರು.