ತೆಂಬಾ ಅರಣ್ಯ ಪ್ರದೇಶದಲ್ಲಿ ಮತ್ತೇ ಹುಲಿ ಪ್ರತ್ಯೇಕ್ಷ

KannadaprabhaNewsNetwork |  
Published : Aug 28, 2026, 02:30 AM IST
27ುಲು1 | Kannada Prabha

ಸಾರಾಂಶ

ಅರಣ್ಯ ಇಲಾಖೆಯವರು ವಿವಿಧ ಅರಣ್ಯ ಪ್ರದೇಶದಲ್ಲಿ 25ಕ್ಕೂ ಹೆಚ್ಚು ಸಿಸಿ ಕ್ಯಾಮೇರಾ ಅಳವಡಿಸಿದ್ದು, ತೆಂಬಾ ಪ್ರದೇಶದಲ್ಲಿ ಸಿಸಿ ಕ್ಯಾಮೇರಾ ಜತೆಗೆ ಎರಡು ಬೋನ್ ಇಡಲಾಗಿದೆ.

ಗಂಗಾವತಿ: ಕಳೆದ ವಾರದ ಹಿಂದೆ ತೆಂಬಾ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಹುಲಿ ಈಗ ಮತ್ತೇ ಅದೇ ಸ್ಥಳದಲ್ಲಿ ಬುಧವಾರ ರಾತ್ರಿ ಸಿಸಿ ಕ್ಯಾಮೆರಾದಲ್ಲಿ ಪ್ರತ್ಯೇಕ್ಷವಾಗಿದೆ.

ಗಂಗಾವತಿ ತಾಲೂಕಿನ 7 ಗುಡ್ಡಗಳ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಹುಲಿ ಕಡೇಬಾಗಿಲೂ, ಸಾಣಾಪುರ, ಸಂಗಾಪುರ, ಹಿರೇಬೆಣಕಲ್, ಜಂಗ್ಲಿ, ರಂಗಾಪುರ ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಂಡಿತ್ತು. ಅಲ್ಲದೇ ನಾಲ್ಕು ಆಕಳಗಳನ್ನು ತಿಂದು ಹಾಕಿತ್ತು. ಈಗ ಹುಲಿ ಸೆರೆ ಹಿಡಿಯುವದಕ್ಕಾಗಿ ನಾಗರಹೊಳೆ, ದಾಂಡೇಲಿ ಅರಣ್ಯ ಪ್ರದೇಶದ (ಇಟಿಎಫ್‌) ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿದೆ.

ಸಿಸಿ ಕ್ಯಾಮೇರಾದಲ್ಲಿ ಪ್ರತ್ಯೇಕ್ಷ: ಅರಣ್ಯ ಇಲಾಖೆಯವರು ವಿವಿಧ ಅರಣ್ಯ ಪ್ರದೇಶದಲ್ಲಿ 25ಕ್ಕೂ ಹೆಚ್ಚು ಸಿಸಿ ಕ್ಯಾಮೇರಾ ಅಳವಡಿಸಿದ್ದು, ತೆಂಬಾ ಪ್ರದೇಶದಲ್ಲಿ ಸಿಸಿ ಕ್ಯಾಮೇರಾ ಜತೆಗೆ ಎರಡು ಬೋನ್ ಇಡಲಾಗಿದೆ. ಬುಧವಾರ ರಾತ್ರಿ 12 ರ ಸುಮಾರಿಗೆ ಸಿಸಿ ಕ್ಯಾಮೇರಾದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

ತೆಂಬಾ ಅರಣ್ಯ ಪ್ರದೇಶದಲ್ಲಿ ಆಕಳುಗಳನ್ನು ಅರ್ಧಮರ್ಧಾ ತಿಂದು ಹಾಕಿದ್ದು, ಮತ್ತೇ ಪೂರ್ಣವಾಗಿ ತಿನ್ನುವುದಕ್ಕೆ ಹುಲಿ ಬರುತ್ತದೆ ಎನ್ನುವದು ಅರಣ್ಯ ಇಲಾಖೆಯ ಲೆಕ್ಕಾಚಾರವಾಗಿದೆ.ಇದರಿಂದ ಹುಲಿ ತೆಂಬಾ ಅರಣ್ಯ ಪ್ರದೇಶದಲಿದ್ದು, ಇನ್ನೂ 2-3 ದಿನದೊಳಗೆ ಹುಲಿ ಬೋನಿಗೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಗಂಗಾವತಿ ಪ್ರದೇಶಕ್ಕೆ ಹುಲಿ ಹೊಸದಲ್ಲ: ಗಂಗಾವತಿ ಪ್ರದೇಶಕ್ಕೆ ಹೊಂದಿಕೊಂಡಿರುವ ತೆಂಬಾ ಅರಣ್ಯ ಪ್ರದೇಶದ ಏಳು ಗುಡ್ಡಗಳಲ್ಲಿ ಹುಲಿ ಕಾಣಿಸಿಕೊಂಡಿರುವುದು ಹೊಸದೇನಲ್ಲ ಎಂದು ಎಚ್.ಆರ್.ಸರೋಜಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ರವಿ ಎನ್ ಚವ್ಹಾಣ ಅಭಿಪ್ರಾಯಿಸಿದ್ದಾರೆ.

ಶಿವಮೊಗ್ಗ ಪಶ್ಚಿಮ ಘಟ್ಟಗಳಿಂದ ತುಂಗಭದ್ರಾ ನದಿಯುವುದಕ್ಕೂ ಗಂಗಾವತಿ ಮಾರ್ಗವಾಗಿ ಶ್ರೀಶೈಲಂವರೆಗೂ ಎರಡು ಬದಿಯಲ್ಲಿ ಹುಲಿ ಸಂತತಿ ಇತ್ತು. ಹಂಪಿ ಪ್ರದೇಶದಲ್ಲಿ ಮೊದಲಿನಿಂದಲೂ ಹುಲಿ ಇದ್ದವು ಎಂಬುದಕ್ಕೆ ಸಾಕ್ಷಿ ಈ ಭಾಗದಲ್ಲಿ ಹುಲಿ ಹೆಸರಿನಲ್ಲಿರುವ ಹುಲಿಕೆರೆ, ಹುಲಿ ಹೈದರ್, ಹುಲಿಗೇರಾ, ಹುಲ್ಕಿಹಾಳ, ಹುಲಿಯಾಪುರ, ಹುಲಗಿ, ಹುಲಕುಂಟಿ ಇನ್ನಿತರ ಗ್ರಾಮದ ಹೆಸರುಗಳಿವೆ ಎಂದು ಅಭಿಪ್ರಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡ ಅಂತಾಪುರದಲ್ಲಿ ಮತ್ತೆರಡು ಜಿನ ಶಾಸನಗಳ ಅನ್ವೇಷಣೆ
ಓದುಗರನ್ನು ಗೆಲ್ಲುವಂತಹ ಸಾಹಿತ್ಯ ಸೃಷ್ಟಿಯಾಗಲಿ: ಸತೀಶ ಕುಲಕರ್ಣಿ