ಕನ್ನಡಪ್ರಭ ವಾರ್ತೆ ಅಥಣಿ
ಬಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಸ್.ಜಿ.ಸುಶಿಲಮ್ಮ ಆಶಯ ನುಡಿಗಳನ್ನಾಡಿದರು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಉದ್ಘಾಟಿಸಿದರು. ನಿಜಶರಣ ತ್ಯಾಗರಾಜ ಗ್ರಂಥ ಲೋಕಾರ್ಪಣೆಯನ್ನು ಅಖಿಲಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವೆ, ಸಾಹಿತಿ ಡಾ.ಲೀಲಾದೇವಿ ಆರ್.ಪ್ರಸಾದ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾಡೋಜ ಡಾ.ವೂಡೇ ಪಿ.ಕೃಷ್ಣ, ಸಕಲೇಶಪುರ ಮತಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಚಿತ್ರ ಕಲಾವಿದ ಎ.ರಾಮಕೃಷ್ಣಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸಿ.ಮುನಿಕೃಷ್ಣ, ಪ್ರಜ್ವಲ್ ಭೂಪಾಲ್, ಕರ್ನಾಟಕ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ತ್ಯಾಗರಾಜ್ ಆಗಮಿಸಿದ್ದರು. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು, ಚಿಕ್ಕಬಳ್ಳಾಪುರ ಜಿಲ್ಲಾ ಕ.ವ.ಸಾ.ಪ ಅಧ್ಯಕ್ಷ ಕೆ.ಪಿ.ನವಮೋಹನ, ಕಲಬುರಗಿ ಜಿಲ್ಲಾ ಕ.ವ.ಸಾ.ಪ ಅಧ್ಯಕ್ಷ ಶರಣ ಶಾಂತಲಿಂಗ ಪಾಟೀಲ, ಬೀದರ ಜಿಲ್ಲಾ ಕ.ವ.ಸಾ.ಪ ಅಧ್ಯಕ್ಷ ಸುನಿತಾ ದಾಡಗೆ, ಕೋಲಾರ ಜಿಲ್ಲಾ ಕ.ವ.ಸಾ.ಪ ಅಧ್ಯಕ್ಷ ಡಾ.ನಾ.ಮುನಿರಾಜು, ಬೆಳಗಾವಿ ಜಿಲ್ಲಾ ಎ.ಸಿ.ಚಿಕ್ಕುಮ್ಮಿ, ಸಾಹಿತಿ ಜೆ.ಎಂ.ರಾಜಶೇಖರ ಉಪಸ್ಥಿತರಿದ್ದರು.ಸಾಹಿತಿ ಬಿ.ಶೃಂಗೇಶ್ವರ ಕೃತಿ ಸಂಪಾದಕರ ನುಡಿಗಳನ್ನಾಡಿದರು. ಹಿರಿಯ ಸಾಹಿತಿ ಇಂದಿರಾ ಕೃಷ್ಣಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೇಘಮೈತ್ರಿ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ರಮೇಶ ಎಂ.ಕಮತಗಿ ನಿರೂಪಿಸಿದರು. ಆಕಾಶವಾಣಿ ಗಾಯಕರಾದ ದೇವಿರಮ್ಮ ಪ್ರಾರ್ಥನಾ ಗೀತೆ ಹಾಡಿದರು. ಎಂ.ಎಸ್.ಪದ್ಮಲತಾ ವಂದನಾರ್ಪಣೆ ಸಲ್ಲಿಸಿದರು.