ಕನ್ನಡಪ್ರಭ ವಾರ್ತೆ ಮಂಡ್ಯ
ನಮ್ಮ ಸಹಕಾರರ ಸಂಘದಲ್ಲಿ ಅವ್ಯವಹಾರ ನಡೆದು ಹಿಂದಿನ ಆಡಳಿತ ಮಂಡಳಿಯವರು ಸರಿಯಾದ ಸಮಯಕ್ಕೆ ಸೊಸೈಟಿಗೆ ಗೊಬ್ಬರ ತರಿಸದಿರುವುದರಿಂದ ಗ್ರಾಮದಲ್ಲಿ ಗೊಬ್ಬರದ ಅಭಾವ ಎದುರಾಗಿದೆ. ರೈತರು ನಮ್ಮ ಸೊಸೈಟಿಯಿಂದ ಯೂರಿಯಾ ಗೊಬ್ಬರವನ್ನು ಕೇಳುತ್ತಿದ್ದಾರೆ. ಗೊಬ್ಬರ ಇಲ್ಲ ಎಂದು ಹೇಳಿದರೆ ಸೊಸೈಟಿಗೆ ಬೀಗ ಹಾಕಿಕೊಂಡು ಹೋಗಿ ಎಂದು ಜಗಳವಾಡುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೂಡಲೇ ನಮ್ಮ ಸಹಕಾರ ಸಂಘಕ್ಕೆ ಗೊಬ್ಬರವನ್ನು ದೊರಕಿಸಿಕೊಡುವಂತೆ ಶಾಖಾ ವ್ಯವಸ್ಥಾಪಕ ವೈನ್.ತೇಜಸ್ ಅವರಿಗೆ ಮನವಿ ಸಲ್ಲಿಸಿದರು. ಸದಸ್ಯರಾದ ಸುರೇಶ, ಟಿ.ಸಿ.ಶಂಕರಗೌಡ, ಚಿಕ್ಕತಾಯಮ್ಮ, ನಿಂಗರಾಜು, ಟಿ.ಎ.ಕೃಷ್ಣ ಇತರರಿದ್ದರು.ಪ್ರಾಂಶುಪಾಲರ ಸಂಘಕ್ಕೆ ಕೆಂಪರಾಜು ನೂತನ ಅಧ್ಯಕ್ಷ
ತಾಲೂಕು ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ನೂತನ ಅಧ್ಯಕ್ಷರಾಗಿ ಬೂಕನಕೆರೆ ಕಾಲೇಜಿನ ಪ್ರಾಂಶುಪಾಲ ಕೆಂಪರಾಜು ಆಯ್ಕೆಯಾಗಿದ್ದಾರೆ.
ಭಾರೀ ಮಳೆಗೆ ಸಂಪೂರ್ಣ ನೆಲಕ್ಕುರುಳಿದ ಮನೆ
ಕಳೆದ 3 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ಹಿರಿಕಳಲೆ ಗ್ರಾಪಂ ವ್ಯಾಪ್ತಿಯ ಗಾಂಧಿನಗರದಲ್ಲಿ ಮನೆ ಸಂಪೂರ್ಣ ನೆಲಕ್ಕುರುಳಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಮನೆ ಕೋಣೆಯಲ್ಲಿ ಮಲಗಿ ನಿದ್ರಿಸುತ್ತಿದ್ದರಿಂದ ಈ ಕುಟುಂಬವು ಅಪಾಯದಿಂದ ಪಾರಾಗಿದೆ. ಘಟನೆ ನಡೆದ ಸ್ಥಳಕ್ಕೆ ರಾಜಸ್ವ ನಿರೀಕ್ಷರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿಯನ್ನು ನೀಡಿ ಮಹಜರು ನಡೆಸಿದ್ದಾರೆ.
ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಮಳೆಯು ಎಡೆ ಬಿಡದೆ ಸುರಿಯುತ್ತಿದೆ. ಗೋಡೆಗಳು ಒಣಗಲು ಕೂಡಾ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಣ್ಣಿನ ಗೋಡೆಯಿಂದ ಕಟ್ಟಿರುವ ಹೆಂಚಿನ ಮನೆಗಳು ಅಪಾಯವನ್ನು ಎದುರಿಸುತ್ತಿವೆ. ಇದರ ಬಗ್ಗೆ ಕಂದಾಯ ಇಲಾಖೆ ಮನೆ ಮನೆ ಸಮೀಕ್ಷೆ ನಡೆಸಿ ಎಚ್ಚರಿಕೆ ನೀಡಬೇಕು. ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳಿಗೆ ಹೆಚ್ಚಿನ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಒತ್ತಾಯಿಸಿದ್ದಾರೆ.