ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದಿದರೆ ಇಡೀ ದೇಶವೇ ಪ್ರಗತಿಯತ್ತ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ನನ್ನ ಅವಧಿಯಲ್ಲಿ ಯಾವುದೇ ಪಕ್ಷಬೇಧ ಮಾಡದೆ ಮಂಡ್ಯ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳ ರಸ್ತೆಗಳು ಮತ್ತು ಚರಂಡಿಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದೇನೆ ಎಂದರು.
ಹೊಸಬೂದನೂರು ಮತ್ತು ಹಳೇಬೂದನೂರು ಎರಡೂ ಗ್ರಾಮಗಳ ನಡುವೆ ಇರುವ ಕೆರೆಯನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರನ್ನು ಸೆಳೆಯಲು ದೋಣಿ ವಿಹಾರ ಮಾಡಲಾಗುವುದು. ಇದಕ್ಕೆ ಈಗಾಗಲೇ ನೀಲನಕ್ಷೆ ತಯಾರಾಗಿದೆ ಎಂದರು.ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಾಸಕರ ಅನುದಾನದಡಿ ೩ ಲಕ್ಷ ರು.ಗಳನ್ನು ಶ್ರೀರಾಮ ಮಂದಿರ ಬಳಗದ ಪದಾಧಿಕಾರಿಗಳಿಗೆ ನೀಡಿ, ಮುಂದಿನ ದಿನಗಳಲ್ಲಿ ೨ ಲಕ್ಷ ರು.ಗಳನ್ನು ದೇಣಿಗೆಯಾಗಿ ನೀಡಲಾಗುವುದು ಎಂದರು.
ಹೊಸಬೂದನೂರು ಸಹಕಾರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ರಘು, ಉಪಾಧ್ಯಕ್ಷ ಮಂಚದಾಸ್, ಸದಸ್ಯರಾದ ಬಿ.ಎಸ್.ಚೈತ್ರೇಶ್, ಬಿ.ಆರ್.ಮಂಜು, ರಾಜಶೇಖರ್, ಲಕ್ಷ್ಮಮ್ಮ, ರಾವಳ, ಗ್ರಾಪಂ ಸದಸ್ಯರಾದ ನಾಗೇಶ್, ಶಿಲ್ಪ, ಮಾಜಿ ಸದಸ್ಯರಾದ ರಾಮರಾಜ್, ಶಿವಲಿಂಗು, ಮುಖಂಡರಾದ ಚಂದ್ರಪ್ಪ, ಮರಿಗೌಡ, ಶಿವಕುಮಾರ್, ಶಂಕರ್, ರವಿ ಇತರರಿದ್ದರು.