ಲಕ್ಷ್ಮೇಶ್ವರ: ಕಳೆದ 4- 5 ತಿಂಗಳಿಂದ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 10 ಜನರನ್ನು ಪೌರಕಾರ್ಮಿಕರು ಎಂದು ತೆಗೆದುಕೊಳ್ಳಲಾಗಿತ್ತು. ಆದರೆ ಏಕಾಏಕಿ ನಾಲ್ವರು ಪೌರಕಾರ್ಮಿಕರನ್ನು ವಜಾ ಮಾಡಿದ್ದು, ಅವರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಗುತ್ತಿಗೆ ನೌಕರ ನೀಲಪ್ಪ ಶಿರಹಟ್ಟಿ ಹಾಗೂ ಇತರರು ಸೇರಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮಹಾಂತೇಶ ಬೀಳಗಿ ಅವರಿಗೆ ಮನವಿ ಮಾಡಿದರು.
ಮುಂದಿನ ಒಂದು ವಾರದಲ್ಲಿ ಅವರನ್ನು ಮರು ನೇಮಕ ಮಾಡಿಕೊಳ್ಳದೆ ಹೋದಲ್ಲಿ ಉಳಿದ ನಾವು ಕೆಲಸಕ್ಕೆ ಗೈರಾಗುತ್ತೇವೆ. ಅಲ್ಲದೆ ಪುರಸಭೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುವ ಮೂಲಕ ಹೋರಾಟ ಮಾಡುವುದಾಗಿ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪರಮೇಶ ಗಡದವರ, ಅರುಣ ನಂದೆಣ್ಣವರ, ರವಿ ಗಾಜಿ, ಕಲ್ಯಾಣಕುಮಾರ ಹಾದಿಮನಿ, ಅಜಿತ ನಂದೆಣ್ಣವರ, ರಾಮಪ್ಪ ಅಯ್ಯಮ್ಮನವರ, ಪ್ರಕಾಶ ಗಡದವರ, ಹೊನ್ನಪ್ಪ ಮೇಗಲಮನಿ, ಮಂಜುನಾಥ ದೊಡ್ಡಮನಿ, ಯಲ್ಲವ್ವ ಗಡದವರ, ದುರ್ಗವ್ವ ಶಿರಹಟ್ಟಿ, ಕಮಲವ್ವ ನಂದೆಣ್ಣವರ, ಮಲ್ಲವ್ವ ಗಡದವರ, ಹನುಮವ್ವ ಗಡದವರ, ದ್ಯಾಮಕ್ಕ ನಂದೆಣ್ಣವರ, ಕರಿಯವ್ವ ಶಿರಹಟ್ಟಿ ಮೊದಲಾದವರು ಇದ್ದರು.ಅರ್ಚಕರ ಸಮಿತಿ ಅಧ್ಯಕ್ಷರ ನೇಮಕ
ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ಸಮಸ್ತ ಅರ್ಚಕರು ಇತ್ತೀಚೆಗೆ ಹಿರಿಯ ಮಧುಕರ ಪೂಜಾರ, ಶ್ರೀನಿವಾಸ ಪೂಜಾರ, ಪ್ರಕಾಶ ಪೂಜಾರ ಅವರ ಸಮ್ಮುಖದಲ್ಲಿ ಸಭೆ ಸೇರಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅರ್ಚಕರ ಸಮಿತಿಯ ನೂತನ ಅಧ್ಯಕ್ಷರಾಗಿ ದಿಗಂಬರ ಮುರಲೀಧರ ಪೂಜಾರ ಅವರನ್ನು ಸರ್ವಾನುಮತದಿಂದ ಘೋಷಿಸಲಾಯಿತು. ರಾಘವೇಂದ್ರ ಸೋಮನಾಥ ಪೂಜಾರ(ಉಪಾಧ್ಯಕ್ಷರು), ಸಮೀರ ಕೃಷ್ಣಾಜಿ ಪೂಜಾರ(ಕಾರ್ಯದರ್ಶಿ) ಹಾಗೂ ಕೃಷ್ಣ ದತ್ತಾತ್ರೇಯ ಪೂಜಾರ(ಖಜಾಂಚಿ)ಯಾಗಿ ಸರ್ವಸಮ್ಮತದಿಂದ ಆಯ್ಕೆ ಮಾಡಲಾಯಿತು. ಬರುವ ಶಿವರಾತ್ರಿಯ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಸಹ ಮಾಡಲು ನಿರ್ಧರಿಸಲಾಯಿತು.ಸಭೆಯ ಆರಂಭದಲ್ಲಿ ಅರ್ಚಕರ ಸಮಿತಿ ಅಧ್ಯಕ್ಷರಾಗಿ ಎರಡು ದಶಕಗಳ ಕಾಲ ಯಶಸ್ವಿಯಾಗಿ ಸಂಘವನ್ನು ಮುನ್ನಡೆಸಿದ್ದ ದಿ. ವಿ.ಎಲ್. ಪೂಜಾರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಈ ವೇಳೆ ರಮಾಕಾಂತ ಪೂಜಾರ, ಶಾಮಸುಂದರ ಪೂಜಾರ, ದತ್ತಾತ್ರೇಯ ಪೂಜಾರ, ರಾಜೇಶ ಪೂಜಾರ, ಉದಯಕುಮಾರ ಪೂಜಾರ, ನಾಗರಾಜ ಪೂಜಾರ, ಪರಶುರಾಮ ಪೂಜಾರ, ಉಮೇಶ ಕುಲಕರ್ಣಿ, ಮಹೇಶ ಕುಲಕರ್ಣಿ, ರವಿ ಕುಲಕರ್ಣಿ, ಸುಂದರ ಕುಲಕರ್ಣಿ, ಚಿಕ್ಕರಸಯ್ಯ ಪೂಜಾರ, ಸತೀಶ ಕುಲಕರ್ಣಿ, ಪ್ರಕಾಶ ಡಿ. ಪೂಜಾರ, ಬಾಲಕೃಷ್ಣ ಪೂಜಾರ, ರಮೇಶ ಪೂಜಾರ, ಸೋಮನಾಥ ಪೂಜಾರ ಅನೇಕರು ಇದ್ದರು.