ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಬೈಲಹೊಂಗಲ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ, ಶ್ರೀ ಉಳವಿ ಚನ್ನಬಸವೇಶ್ವರ ಪಾದಯಾತ್ರೆ ಹಾಗೂ ಚಕ್ಕಡಿ ಜಾತ್ರಾ ಸಮಿತಿ ಬೈಲಹೊಂಗಲ ಇವರ ಆಶ್ರಯದಲ್ಲಿ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು.
ರಾಯಣ್ಣ ಸಮಿತಿ ಅಧ್ಯಕ್ಷ ರಾಜು ಸೊಗಲ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಇಡೀ ವಿಶ್ವಕ್ಕೆ ಮಾದರಿಯಾದ ಬಸವಾದಿ ಶರಣರ ಪುಣ್ಯಪವಿತ್ರ ಕ್ಷೇತ್ರ ಹಾಗೂ ಉತ್ತರ ಕರ್ನಾಟಕ ಜನರ ಆರಾಧ್ಯ ದೈವ ಉಳವಿಯ ಶ್ರೀ ಚನ್ನಬಸವೇಶ್ವರ ಜಾತ್ರೆಗೆ ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕರ್ನಾಟಕದಿಂದ ಲಕ್ಷಾಂತರ ಜನರು ತೆರಳುತ್ತಾರೆ. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಉಳವಿಗೆ ತೆರಳುವ ರಸ್ತೆ ತೀರಾ ಹದಗೆಟ್ಟಿದೆ. ವಿಶೇಷವಾಗಿ ಪಾಟೊಳ್ಳಿ ಕ್ರಾಸ್ ನಿಂದ ಉಳವಿ ಕ್ಷೇತ್ರದವರೆಗೆ ತುಂಬಾ ಹಾಳಾಗಿದೆ. ತಾವು ಬುದ್ಧ, ಬಸವ, ಅಂಬೇಡ್ಕರ್ ಅವರ ಅಪ್ಪಟ ಅಭಿಯಾನಿಯಾಗಿದ್ದಿರಿ. ಉಳವಿ ಉತ್ತರ ಕರ್ನಾಟಕ ಜನರ ಪುಣ್ಯ ಕ್ಷೇತ್ರವಾಗಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಈ ರಸ್ತೆ ಸುಧಾರಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಚಿವರಲ್ಲಿ ವಿನಂತಿಸಿದರು.ಈ ಸಂದರ್ಭದಲ್ಲಿ ಶಿವಾನಂದ ತಂಬಕೆ, ರಾಜು ಕುಡಸೋಮಣ್ಣವರ, ಬಸವರಾಜ ಬೋಳಗೌಡರ, ರಾಜು ನಾಶಿಪುಡಿ, ರಮೇಶ ಯರಗಣ್ಣವರ, ಗಂಗಾರಾಮ ಶೀಗಿಹಳ್ಳಿ, ಬಾಲು ಜಾಡಗಿ, ಕುಮಾರ ಗಾಳಿ, ನಾಗರಾಜ ಲಕ್ಕಪ್ಪಗೌಡರ, ಜಗದೀಶ ಮಾಳಗಿ ಉಪಸ್ಥಿತರಿದ್ದರು.