ಐಪಿಎಲ್ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಲು ಮನವಿ

KannadaprabhaNewsNetwork |  
Published : Mar 16, 2026, 12:15 AM IST
೧೫ಕೆಎಲ್‌ಆರ್-೩ಲಕ್ಷಾಂತರ ರೈತ ಕೂಲಿ ಕಾರ್ಮಿಕರ ಹಾಗೂ ಯುವಕರ ಬೀದಿ ಪಾಲು ಮಾಡುತ್ತಿರುವ ಐ.ಪಿ.ಎಲ್. ಬೆಟ್ಟಿಂಗ್ ದಂದೆಗೆ ಹಾಗೂ ಮಾದಕದ್ರವ್ಯ ಕ್ಕೆಕಡಿವಾಣ ಹಾಕಲು ವಿಶೇಷ ಪೊಲೀಸ್ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ಕೋಲಾರದ ಎಸ್‌ಪಿಗೆ ಮನವಿಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಯುವ ಪೀಳಿಗೆ ತಮ್ಮ ಭವಿಷ್ಯವನ್ನೇ ಕ್ರಿಕೆಟ್ ಬೆಟ್ಟಿಂಗ್‌ಗೆ ದಾಸರಾಗಿ ಆಟವಾಡಿ ಗೆಲ್ಲಲಾಗದೆ ಸಲ ತೀರಸಲಾಗದೆ, ಸಮಾಜದಲ್ಲಿ ಬದುಕಲು ಮುಖವಿಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಕೋಲಾರ:ಲಕ್ಷಾಂತರ ರೈತ ಕೂಲಿ ಕಾರ್ಮಿಕರ ಹಾಗೂ ಯುವಕರ ಬೀದಿ ಪಾಲು ಮಾಡುತ್ತಿರುವ ಐಪಿಎಲ್. ಬೆಟ್ಟಿಂಗ್ ದಂಧೆಗೆ ಹಾಗೂ ಮಾದಕದ್ರವ್ಯಕ್ಕೆ ಕಡಿವಾಣ ಹಾಕಲು ವಿಶೇಷ ಪೊಲೀಸ್ ತಂಡ ರಚನೆ ಮಾಡಿ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸುವಂತೆ ರೈತ ಸಂಘದಿಂದ ಎಸ್‌ಪಿಗೆ ಮನವಿ ನೀಡಲಾಯಿತು.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕ್ರೀಡೆ ಎಂಬುದು ಇಂದು ಜೂಜಾಟವಾಗಿ ಮಾರ್ಪಟ್ಟು ದುಡಿಮೆ ಇಲ್ಲದೆ, ಅತಿ ಬೇಗ ಶ್ರೀಮಂತರಾಗುವ ಅಡ್ಡದಾರಿಯಾಗಿ ಕ್ರಿಕೆಟ್ ಐಪಿಎಲ್ ಕ್ರೀಡೆ ಮಾರ್ಪಟ್ಟಿರುವುದು ದುರಾದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.ಬರ ಹಾಗೂ ಬೆಳೆ ನಷ್ಟದಿಂದ ರೈತರು ತತ್ತರಿಸಿ ಕೂಲಿ ಕಾರ್ಮಿಕರಿಗೆ ದುಡಿಯಲು ಕೆಲಸವಿಲ್ಲದೆ, ಯುವಕರು ವಿದ್ಯಾಭ್ಯಾಸ ಮಾಡಿ, ಉದ್ಯೋಗ ವಿಲ್ಲದೆ, ಪರಿತಪ್ಪಿಸುತ್ತಿರುವ ಪರಿಸ್ಥಿತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಎಂಬ ಭೂತಕ್ಕೆ ದಾಸರಾಗಿ ರೈತರು ತೋಟಗಳನ್ನೇ ಅಡ ಇಟ್ಟರೆ, ಕೂಲಿ ಕಾರ್ಮಿಕರು, ಜಾನುವಾರುಗಳನ್ನು ಯುವ ಪೀಳಿಗೆ ತಮ್ಮ ಭವಿಷ್ಯವನ್ನೇ ಕ್ರಿಕೆಟ್ ಬೆಟ್ಟಿಂಗ್‌ಗೆ ದಾಸರಾಗಿ ಆಟವಾಡಿ ಗೆಲ್ಲಲಾಗದೆ ಸಲ ತೀರಸಲಾಗದೆ, ಸಮಾಜದಲ್ಲಿ ಬದುಕಲು ಮುಖವಿಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.ಮನವಿ ನೀಡುವಾಗ ರಾಜ್ಯ ಮುಖಂಡ ಕಾಮನೂರು ಚಲಪತಿ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ ಕಾಮನೂರು ಮಂಜುನಾಥ ಗೀರೀಶ ತಿಮ್ಮಣ್ಣ ಜನಾರ್ದನ ವಿಶ್ವ ಕುಮಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಸಿ ವ್ಯಾಲಿ, ಎಚ್ಎನ್ ವ್ಯಾಲಿ ನೀರು ನೇರ ಬಳಕೆಗಲ್ಲ
ಲಾರಿಗೆ ಕಾರು ಡಿಕ್ಕಿ: ಮೂವರು ಆರ್‌ಎಸ್‌ಐಗಳ ಸಾವು