ಗುರುಪುರ ಗ್ರಾಮದವರಿಗೆ ಹಕ್ಕು ಪತ್ರ ನೀಡಲು ಮನವಿ

KannadaprabhaNewsNetwork |  
Published : Nov 11, 2025, 01:15 AM IST
ಗುರುಪುರ ಗ್ರಾಮವನ್ನು ಕಂದಾಯ /ಉಪ ಕಂದಾಯ ಗ್ರಾಮವೆಂದು ಪರಿಗಣಿಸಿ ಹಕ್ಕು ಪತ್ರ ನೀಡುವ ಬಗ್ಗೆ ಮನವಿ ಪತ್ರ ಸಲ್ಲಿಕೆ | Kannada Prabha

ಸಾರಾಂಶ

ತರೀಕೆರೆ ತಮ್ಮ ಗ್ರಾಮವನ್ನು ಕಂದಾಯ /ಉಪ ಕಂದಾಯ ಗ್ರಾಮವೆಂದು ಪರಿಗಣಿಸಿ ಹಕ್ಕು ಪತ್ರ ನೀಡುವಂತೆ ಗುರುಪುರ ಗ್ರಾಮಸ್ಥರು ಸೋಮವಾರ ತಾಲೂಕು ತಹಸೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಎಸ್‌ ಸಿ (ಅದಿ ದ್ರಾವಿಡ) ಜನಾಂಗದಿಂದ ತಾಲೂಕು ತಹಸೀಲ್ದಾರ್, ಉಪ ವಿಭಾಗಾಧಿಕಾರಿಗೆ ಕೋರಿಕೆ

ಕನ್ನಡಪ್ರಭ ವಾರ್ತೆ, ತರೀಕೆರೆ

ತಮ್ಮ ಗ್ರಾಮವನ್ನು ಕಂದಾಯ /ಉಪ ಕಂದಾಯ ಗ್ರಾಮವೆಂದು ಪರಿಗಣಿಸಿ ಹಕ್ಕು ಪತ್ರ ನೀಡುವಂತೆ ಗುರುಪುರ ಗ್ರಾಮಸ್ಥರು ಸೋಮವಾರ ತಾಲೂಕು ತಹಸೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.ತರೀಕೆರೆ ತಾಲೂಕು ಲಕ್ಕವಳ್ಳಿ ಹೋಬಳಿ ಗುರುಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿ (ಅದಿ ದ್ರಾವಿಡ) ಜನಾಂಗಕ್ಕೆ ಸೇರಿದ ಸುಮಾರು 90 ಕುಟುಂಬಗಳ ಸುಮಾರು 500-00 ಜನರು ಕಳೆದ 60 ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದೇವೆ., ನಮ್ಮ ಮನೆಗಳಿಗೆ ನಾವು ಕಂದಾಯ ಕಟ್ಟಿ, ಸರ್ಕಾರದ ಸವಲತ್ತುಗಳಾದ ಆಶ್ರಯ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕಳೆದ 30 ವರ್ಷಗಳ ಹಿಂದೆಯೇ ಮನೆ ನಿರ್ಮಿಸಿಕೊಂಡಿದ್ದೇವೆ. ಈ ಮನೆಗಳಿಗೆ ವಿದ್ಯುತ್ ಸೌಲಭ್ಯವಿದ್ದು ಕಾಲ ಕಾಲಕ್ಕೆ ವಿದ್ಯುತ್ ಬಿಲ್ಲುಗಳನ್ನು ಕಟ್ಟಿಕೊಂಡು ಬಂದಿರುತ್ತೇವೆ. ನಮ್ಮ ಗ್ರಾಮಕ್ಕೆ ಪ್ರಾಥಮಿಕ ಶಾಲೆ ಮತ್ತು ಅಂಗನ ವಾಡಿ ಕೇಂದ್ರ ಮತ್ತು ಸರ್ಕಾರದ ಇತರೆ ಮೂಲಭೂತ ಸೌಲಭ್ಯ ಒದಗಿಸಲಾಗಿದೆ.

ಆದರೆ ನಮ್ಮ ವಾಸದ ಮನೆಗಳಿಗೆ ಹಕ್ಕು ಪತ್ರ ನೀಡಿಲ್ಲದ ಕಾರಣ ಗುರುಪುರ ಗ್ರಾಮ ಸ.ನಂ. 08ರಲ್ಲಿದ್ದು, ಈ ಸ.ನಂ.ನಲ್ಲಿ 498 ಎಕರೆ ವಿಸ್ತೀರ್ಣವಿದ್ದು ಇದರಲ್ಲಿ 315 ಎಕರೆ ಅರಣ್ಯ, 180 ಎಕರೆ ಕಂದಾಯ ಜಾಗವಿದೆ. 03 ಎಕರೆ ಹಿಂದೂ ಸ್ಮಶಾನ ವಿದ್ದು, ಈ ಎರಡೂ ಜಾಗಗಳು ಅಂದರೆ 180 ಎಕರೆ ಮತ್ತು 03 ಎಕರೆ ಜಾಗ ಎಲ್ಲಿದೆ ಎಂದು ಗುರ್ತಿಸದೆ, ಏಕಪಕ್ಷೀಯವಾಗಿ ಅರಣ್ಯವೆಂದು ಪರಿಗಣಿಸಿ ಗುರುಪುರ ಗ್ರಾಮವನ್ನು ಕಂದಾಯ/ ಉಪಕಂದಾಯ ಗ್ರಾಮವಾಗಿ ರಚಿಸುವ ಪಟ್ಟಿಯಿಂದ ಕೈಬಿಡಲಾಗಿದೆ.ಇದರಿಂದ ನಾವು ಇಷ್ಟು ವರ್ಷವಾಗಿದ್ದರೂ ನಮಗೆ ಸೊತ್ತಿನ ಹಕ್ಕು-ಪತ್ರ ಮತ್ತು ಖಾತಾ ದೊರತಿಲ್ಲ. ಹಾಗಾಗಿ ನಮ್ಮ ಗ್ರಾಮ ವನ್ನು ಕಂದಾಯ /ಉಪ ಕಂದಾಯ ಗ್ರಾಮವನ್ನಾಗಿ ರಚಿಸುವ ಮೂಲಕ ನಮ್ಮ ಸ್ವತ್ತಿಗೆ ಹಕ್ಕು ಪತ್ರ ಮತ್ತು ಇ-ಖಾತವನ್ನು ಒಂದು ತಿಂಗಳ ಅವಧಿಯೊಳಗೆ ಮಾಡಿಸಿಕೊಡಲು ವಿನಂತಿಸುತ್ತೇವೆ, ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮುನಿರಾಜು, ಉಪಾದ್ಯಕ್ಷೆ ಜಯಲಕ್ಷ್ಮೀ. ಸದಸ್ಯರಾದ ಪುರುಷೋತ್ತಮ್, ಪದ್ಮಮ್ಮ, ಮೀನಾಕ್ಷಿ, ಚೇತನ್, ಮುಖಂಡರಾದ ಬಾಲಕೃಷ್ಣ, ಧರ್ಮಲಿಂಗ, ಮಣಿ, ಕರ್ನಾಟಕ ರಕ್ಷಣಾ ವೇದಿಕೆ ನಾಗರಾಜು ಮತ್ತು ಇತರೆ ಗ್ರಾಮಸ್ಥರು ಉಪಸ್ಥಿತರಿದ್ದರು.

--

10ಕೆಟಿಆರ್.ಕೆ.1ಃ ಮನವಿ ಪತ್ರವನ್ನು ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ