ಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯ ವಿಜ್ಞಾನ ಪರಷತ್ತಿಗೆ ಜಮೀನು ನೀಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ರಾಯಚೂರಿನ ಎನ್.ಎಸ್. ಬೋಸರಾಜು ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಭೇಟಿ ಮಾಡಿ ಮನವಿ ಸಲ್ಲಿಸಿ ಅಭಿನಂದನೆಗಳು ತಿಳಿಸಲಾಯಿತು.ರಾಯಚೂರಿನ ಸಚಿವರ ನಿವಾಸದಲ್ಲಿ ಬೇಟಿ ಮಾಡಿದ ನಿಯೋಗವು ಸಚಿವರಿಗೆ ಮನವಿ ಸಲ್ಲಿಸಿ, ಯಾದಗಿರಿ ಜಿಲ್ಲಾ ವಿಜ್ಞಾನ ಪರಿಷತ್ತುಗೆ 3 ಎಕರೆ ಜಮೀನು ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿದ ಸಂಶೋಧನಾ ಪರಿಷತ್ ಜಿಲ್ಲಾದ್ಯಕ್ಷ ಗುಂಡಪ್ಪ ಕಲ್ಬುರ್ಗಿ, ಈಗಾಗಲೇ ಒದಗಿಸಿದ ಜಮೀನು ವಿವಾದಿತ ಜಮೀನು ಆಗಿದೆ ಎಂದರು.
ಕಳೆದ 6-7 ದಶಕದ ಹಿಂದಿನಿಂದಲೂ ಬೇರೆಯವರು ಆ ಜಮೀನಿನಲ್ಲಿ ಅನಧಿಕೃತ ಕಬ್ಜೆಯಲ್ಲಿದ್ದಾರೆ. ನ್ಯಾಯಾಲಯದಲ್ಲಿಯೂ ಪ್ರಕರಣಗಳು ವಿಚಾರಣೆ ಹಂತಲ್ಲಿದ್ದು, ಕೆಲವು ಬಾರಿ ಪ್ಲಾಟ್‌ಗಳ ಮಾಲೀಕರ ಪರವಾಗಿ ತೀರ್ಪುಗಳೂ ಬಂದಿವೆ. ಹೀಗಾಗಿ ವಿವಾದಿತ ಸ್ಥಳವನ್ನುಹೊರತು ಪಡಿಸಿ ಬೇರೆಡೆ ಜಮೀನು ನೀಡುವಂತೆ ಮನವಿ ಮಾಡಿ, ಈಗಾಗಲೇ ಜಾಗೆಗೆ ಅನುದಾನ ಬಿಡುಗಡೆ ಮಾಡಿದ್ದು, ಇರುತ್ತದೆ ಆದರೆ ಯಾವುದು ಪ್ರಯೋಜನವಾಗದೇ ಎಲ್ಲವೂ ನೆನೆಗುದಿಗೆ ಬಿದ್ದಿರುತ್ತದೆ. ಆದ್ದರಿಂದ ತಕ್ಷಣ ಪರ್ಯಾಯ ಜಮೀನು ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಿದರು.ಸಚಿವರಿಗೆ ಭೇಟಿಗೆ ತೆರಳಿದ ನಿಯೋಗದಲ್ಲಿ ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಗೌರವಾಧ್ಯಕ್ಷರಾದ ಗುರುಮಠಕಲ್ ಖಾಸಾಮಠದ ಶ್ರೀ ಮರುಘರಾಜೇಂದ್ರ ಶರಣರು, ಜಿಲ್ಲಾ ಪ್ರಾಂತ ರೈತ ಸಂಘ ಜಿಲ್ಲಾದ್ಯಕ್ಷ ಚೆನ್ನಪ್ಪ ಆನೆಗುಂದಿ, ನಿವೃತ್ತ ಶಿಕ್ಷಕ ವೆಂಕಪ್ಪ ಅಲೆಮನಿ, ಹಿರಿಯ ಸಾಹಿತಿ ವಿಶ್ವನಾಥಡ್ಡಿ ಗೊಂದಡಗಿ, ಡಾ. ಭೀಮರಾಯ ಲಿಂಗೇರಿ, ಡಾ. ಎಸ್.ಎಸ್. ನಾಯಕ ಇದ್ದರು.
-18ವೈಡಿಆರ್6 : ರಾಜ್ಯ ವಿಜ್ಞಾನ ಪರಷತ್ತಿಗೆ ಜಮೀನು ನೀಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ರಾಯಚೂರಿನ ಎನ್.ಎಸ್. ಬೋಸರಾಜು ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಭೇಟಿ ಮಾಡಿ ಮನವಿ ಸಲ್ಲಿಸಿ ಅಭಿನಂದನೆಗಳು ತಿಳಿಸಲಾಯಿತು.