ಕನ್ನಡಪ್ರಭ ವಾರ್ತೆ ಹಾಸನ
ಹಾಸನ ಮಹಾನಗರ ಪಾಲಿಕೆಯ ಆಯುಕ್ತರಿಗೆ ಹಾಸನ ಮಲೆನಾಡು ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷರಾದ ದರ್ಶನ್ ಮಲ್ನಾಡ್ ಮಾತನಾಡಿ, ನಗರದಲ್ಲಿ ಹಲವಾರು ವರ್ಷಗಳಿಂದ ಹಾಸನ ನಗರದ ಸೌಂದರ್ಯ ಹೆಚ್ಚಿಸುವ ಉದ್ದೇಶ ಹಾಗೂ ಪರಿಸರದ ಕಾಳಜಿಯಿಂದ ಸ್ವಚ್ಛ ಭಾರತ್ ಮಿಷನ್ ಹಾಗೂ ಹಲವಾರು ಯೋಜನೆಗಳ ಮುಖಾಂತರ ಹಾಸನದ ಪ್ರಮುಖ ರಸ್ತೆಗಳು ಹಾಗೂ ಹಾಸನ ನಗರ ಬಡಾವಣೆಯ ರಸ್ತೆಗಳಲ್ಲಿ ಸಾಲುಮರಗಳನ್ನು ನೆಟ್ಟಿದ್ದು, ಈ ಒಂದು ಗಿಡಗಳ ರಕ್ಷಣೆಗೆ ರಕ್ಷಣಾ ಬೇಲಿಯನ್ನು ಹಾಕಲಾಗಿತ್ತು ಎಂದರು.ಈಗ ಆ ಮರಗಳು ಈಗ ಹೆಮ್ಮರವಾಗಿ ಬೆಳೆದಿದ್ದು, ಆ ರಕ್ಷಣೆ ಬೇಲಿಗಳು ಮರದ ಬುಡ ಕಾಂಡದ ಒಳಗೆ ಸೇರಿಕೊಂಡಿದ್ದು, ಮರದ ಬೆಳವಣಿಗೆಗೆ ತೊಂದರೆಯಾಗುತ್ತಿದ್ದು, ಈ ಒಂದು ತಡೆ ರಿಂಗುಗಳನ್ನು ತೆರವು ಮಾಡಿಕೊಡಬೇಕೆಂದು ಹಾಸನ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ನಮ್ಮ ಮನವಿಗೆ ಸ್ಪಂದಿಸಿದ ಆಯುಕ್ತರು ಅತೀ ಶೀಘ್ರದಲ್ಲಿ ತೆರವು ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿರುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆ ಜಿಲ್ಲಾ ಸಂಘಟನೆಯ ಕಾರ್ಯಕಾರಿ ಮಂಡಳಿಯ ಜಿ.ಎಸ್. ಅವಿನಾಶ್, ಪಾಲಾಕ್ಷ, ಯತೀಶ್ ಕುಮಾರ್ ಶೆಟ್ಟಳ್ಳಿ, ಪವನ್ ಕಾಗಿನಾರೆ, ರಾಕೇಶ್ ಗೌಡ, ಶರತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.