ಪುತ್ತೂರು ಗೇರು ಸಂಶೋಧನಾ ಕೇಂದ್ರ ಸಂಸ್ಥಾಪನಾ ದಿನಾಚರಣೆ -೨೦೨೫

KannadaprabhaNewsNetwork |  
Published : Jun 21, 2025, 12:49 AM IST
ಫೋಟೋ:೧೯ಪಿಟಿಆರ್-ಡಿಸಿಆರ್ಪುತ್ತೂರಿನ ಡಿಸಿಆರ್‌ನಲ್ಲಿ ಸಂಸ್ಥಾಪಕರ ದಿನಾಚರಣೆ ನಡೆಯಿತು | Kannada Prabha

ಸಾರಾಂಶ

ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿರುವ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ (ಡಿಸಿಆರ್)ದಲ್ಲಿ ಸಂಸ್ಥೆಯ ೪೦ನೇ ಸಂಸ್ಥಾಪನಾ ದಿನವನ್ನು ಬುಧವಾರ ಆಚರಿಸಲಾಯಿತು.

ಕನ್ನಡಪ್ರಭವಾರ್ತೆ ಪುತ್ತೂರು

ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿರುವ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ (ಡಿಸಿಆರ್)ದಲ್ಲಿ ಸಂಸ್ಥೆಯ ೪೦ನೇ ಸಂಸ್ಥಾಪನಾ ದಿನವನ್ನು ಬುಧವಾರ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನವದೆಹಲಿಯ ಕೃಷಿ ವಿಜ್ಞಾನಿಗಳ ನೇಮಕಾತಿ ಸಂಸ್ಥೆ (ಎ.ಎಸ್.ಆರ್.ಬಿ) ಅಧ್ಯಕ್ಷ ಡಾ. ಸಂಜಯ್ ಕುಮಾರ್ ಅವರು ‘ಸುಸ್ಥಿರ ಜೈವಿಕ ಆರ್ಥಿಕತೆಗೆ ತೋಟಗಾರಿಕೆ: ನಾವೀನ್ಯತೆ ಮತ್ತು ಉದಯೋನ್ಮುಖ ಅವಕಾಶಗಳು’ ಎನ್ನುವ ವಿಷಯದ ಬಗ್ಗೆ ಮಾತನಾಡಿ ಆಧುನಿಕ ತಂತ್ರಜ್ಞಾನದಿಂದ ಬೆಳೆಸಲಾದ ತೋಟಗಾರಿಕಾ ಬೆಳೆಗಳು ಹೇಗೆ ರೈತರಿಗೆ ಉಪಯುಕ್ತವಾಗಲಿದೆ. ಆಧುನಿಕ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಿಗೆ ಬೇಕಾದ ಆರಂಭೀಕರಣ ಯೋಜನೆಗಳನ್ನು ಪ್ರಾರಂಭಿಸಬಹುದು ಹಾಗೂ ಇಂತಹ ಯೋಜನೆಗಳಿಂದ ತೋಟಗಾರಿಕಾ ಬೆಳೆಗಾರರನೂ ಕೂಡ ಉತ್ತೇಜಿಸಬಹುದು ಎಂದು ಮಾಹಿತಿ ನೀಡಿದರು.

ತೋಟಗಾರಿಕಾ ಬೆಳೆಗಳ ಉಪ ಮಹಾನಿರ್ದೇಶಕ ಡಾ. ಎಸ್.ಕೆ. ಸಿಂಗ್ ಮಾತನಾಡಿ, ಗೇರು ಒಂದು ವಾಣಿಜ್ಯ ಬೆಳೆಯಾಗಿದ್ದು ಇದು ಗ್ರಾಮೀಣ ಭಾಗದ ರೈತರ ಮೂಲಸಂಪತ್ತು. ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಲಾದ ತಂತ್ರಜ್ಞಾನಗಳು ರೈತರಿಗೆ ತಲುಪುವ ನಿಟ್ಟಿನಲ್ಲಿ ವಿಜ್ಞಾನಿಗಳು ಕೆಲಸ ಮಾಡಬೇಕು ಎಂದು ತಿಳಿಸಿದರು.ಸಂಸ್ಥೆಯ ಹಣ್ಣು ಮತ್ತು ತೋಟಗಾರಿಕಾ ಬೆಳೆಗಳ ಮಹಾ ನಿರ್ದೇಶಕ ಡಾ. ವಿ.ಬಿ.ಪಾಟೇಲ್, ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ನಿದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಮತ್ತಿತರರು ಶುಭ ಹಾರೈಸಿದರು. ಸಂಸ್ಥೆಯ ವಿಜ್ಞಾನಿ ಡಾ. ಮಂಜುನಾಥ ಕೆ. ತಂಡ ಮತ್ತು ಡಾ. ಶಂಸುದ್ದೀನ್, ಎಂ ತಂಡಕ್ಕೆ ಅತ್ಯುತ್ತಮ ಸಂಶೋಧನಾ ಲೇಖನಕ್ಕಾಗಿ ಪ್ರಶಸ್ತಿ ವಿತರಿಸಲಾಯಿತು. ಆಂಧ್ರಪ್ರದೇಶದ ಪಾರ್ವತೀಪುರಂ ಪ್ರಾಂತ್ಯದ ಪುನರ್ವಿ ಸಂಸ್ಥೆಗೆ ಗೇರು ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಗೊಳಿಸಲಾದ ಗೇರು ಹಣ್ಣಿನ ಮೌಲ್ಯವರ್ಧನೆಯ ತಂತ್ರಜ್ಞಾನ ಹಸ್ತಾಂತರಗೊಳಿಸಲಾಯಿತು. ಸಂಸ್ಥೆಯಲ್ಲಿ ಮುದ್ರಿಸಲಾದ ಹಲವು ಪ್ರಕಟಣೆಗಳನ್ನು ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ನಿರ್ದೇಶಕ ಡಾ. ದಿನಕರ ಅಡಿಗರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ಬೆಳೆದು ಬಂದ ರೀತಿಯ ಬಗ್ಗೆ, ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಲಾದ ವಿವಿಧ ಗೇರು ತಳಿಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಡಿ. ಬಾಲಸುಬ್ರಮಣಿಯನ್ ಸ್ವಾಗತಿಸಿದರು. ಹಿರಿಯ ವಿಜ್ಞಾನಿ ಡಾ. ವಿ. ತೊಂಡೈಮಾನ್ ವಂದಿಸಿದರು. ವಿಜ್ಞಾನಿ ಡಾ. ಅಶ್ವಥಿ ಸಿ. ನಿರೂಪಿಸಿದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ