ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಮನವಿಯಲ್ಲಿ, ಈಗಾಗಲೇ ತಾಲೂಕಿನ ರಾವೂರು ಗ್ರಾಮ, ಶಿರಿಗಳಲೆ ಗ್ರಾಮ ಹಾಗೂ ನಾಗಲಾಪುರ ಗ್ರಾಮದಲ್ಲಿ ದಲಿತರ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಲಾಗಿತ್ತು. ಸರ್ಕಾರ 2010 ರ ಮಾರ್ಚ್ 3 ರಂದು ಮಾಡಿದ ಆದೇಶದಂತೆ ಅರಣ್ಯ ಇಲಾಖೆ ಜಮೀನನ್ನು ಬಿಟ್ಟು ಉಳಿದ ಲಭ್ಯ ಇರುವ ಜಮೀನನ್ನು ಗ್ರಾಮ ಲೆಕ್ಕಿಗರು ಹಾಗೂ ಅರಣ್ಯ ಇಲಾಖೆ, ತಾಲೂಕು ಸರ್ವೇಯರ್ ಸ್ಥಳ ಪರಿಶೀಲನೆ ಮಾಡಿ ನಕ್ಷೆ ತಯಾರಿಸಿರುತ್ತಾರೆ.
ಅದರಂತೆ ಶಿರಗಳಲೆ ಗ್ರಾಮದಲ್ಲಿ 10 ಎಕರೆ, ನಾಗಲಾಪುರ ಗ್ರಾಮದಲ್ಲಿ 38 ಎಕ್ರೆ ಲಭ್ಯ ಇರುತ್ತದೆ.ಅದರಂತೆ ಕಡತ ತಯಾರಿಸಿ ಜಮೀನು ಮಂಜೂರು ಮಾಡಿಸಿಕೊಡಬೇಕು ಎಂದು ಆಗ್ರಹಿಸಿ 4.10.2025 ರಂದು ಮನವಿ ಮಾಡಿರುತ್ತೇವೆ. ಆದರೂ ಕಡತ ತಯಾರಿಸದೆ ಇರುವುದರಿಂದ 16.2.2026 ರಿಂದ ತಾಲೂಕು ಕಚೇರಿ ಎದುರು ಆಹೋ ರಾತ್ರಿ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಮನವಿ ನೀಡುವ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ತರೀಕೆರೆ ವೆಂಕಟೇಶ್,ಎಂ.ವಿ.ಭವಾನಿ, ಎಸ್.ರಾಜೇಶ್, ಎಂ.ಜೆ.ಸಿಜು, ಎಸ್.ರಾಜು, ಮಡಬೂರು ಜೈ ರಾಮ್, ಸೈಯ್ಯದ್ ಖದೀರ್ ಮತ್ತಿತರರು ಇದ್ದರು.