ಕನ್ನಡಪ್ರಭ ವಾರ್ತೆ ಕುಶಾಲನಗರ
ಕೂಡಿಗೆ ಗ್ರಾಮ ಪಂಚಾಯಿತಿಗೆ ಒಳಪಡುವ ಹೆಗ್ಗಡಹಳ್ಳಿ ನಿವಾಸಿಯಾಗಿದ್ದ ಎಸ್ ಎನ್ ರಾಜಾರಾವ್ ಕುಟುಂಬ ಸದಸ್ಯರು ಗಿರಿಜನ ಸಮುದಾಯಕ್ಕೆ ಸೇರುವುದಿಲ್ಲವೆಂದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಸೆ. 16 ರಂದು ತೀರ್ಪು ನೀಡಿರುವುದರಿಂದ ತಕ್ಷಣ ಅವರ ಜಾತಿ ದೃಢೀಕರಣ ಪತ್ರವನ್ನು ರದ್ದುಗೊಳಿಸಿ ಆದಿವಾಸಿಗಳಿಗೆ ನ್ಯಾಯ ಒದಗಿಸಬೇಕು ಎಂದು ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಅವರಿಗೆ ಮನವಿ ಪತ್ರದಲ್ಲಿ ಕೋರಿದ್ದಾರೆ. ಜಿಲ್ಲಾ ಸೋಲಿಗ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಿ ಬಿ ಮಹೇಶ್, ಆದಿವಾಸಿ ಸಂಘಟನೆ ಒಕ್ಕೂಟ ಪ್ರಮುಖರಾದ ಆರ್ ಕೆ ಚಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಜೆ ಟಿ ಕಾಳಿಂಗ ಬಿಎನ್ ಮನು, ಆರ್ ಸಿ ಉದಯಕುಮಾರ್ ಬಿ ಆರ್ ಸುರೇಶ್, ಪ್ರಭಾಕರ್ ಮತ್ತಿತರರು ಇದ್ದರು.