ಸಹಾಯಕ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

KannadaprabhaNewsNetwork |  
Published : Jul 25, 2026, 03:00 AM IST
16 | Kannada Prabha

ಸಾರಾಂಶ

ನಗರದ ವಿದ್ಯಾಗಿರಿಯ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯಲ್ಲಿ ಖಾಲಿವಿರುವ 3 ಪದವೀಧರ ಸಹಾಯಕ ಶಿಕ್ಷಕರನ್ನು (ಪ್ರೌಢಶಾಲೆ ವಿಭಾಗಕ್ಕೆ) ಮತ್ತು 3 ಪದವಿಪೂರ್ವ ಸಹಾಯಕ ಶಿಕ್ಷಕರನ್ನು (ಪ್ರಾಥಮಿಕ ವಿಭಾಗಕ್ಕೆ) ಅಂಶಕಾಲಿಕವಾಗಿ ಗೌರವಧನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪದವಿಧರ ಸಹಾಯಕ ಶಿಕ್ಷಕರಿಗೆ ಮಾಸಿಕ ಗೌರವಧನ ₹6 ಸಾವಿರದಂತೆ ಮತ್ತು 3 ಪದವಿಪೂರ್ವ ಸಹಾಯಕ ಶಿಕ್ಷಕರನ್ನು (ಪ್ರಾಥಮಿಕ ವಿಭಾಗಕ್ಕೆ) ಅಂಶಕಾಲಿಕವಾಗಿ ಮಾಸಿಕ ಗೌರವಧನ ₹5 ಸಾವಿರದಂತೆ ಗೌರವಧನ ನೀಡಲಾಗುವುದು. ಪ್ರಾಥಮಿಕ ವಿಭಾಗಕ್ಕೆ ವಿಶೇಷ ಶಿಕ್ಷಣದಲ್ಲಿ ಡಿ.ಇಡಿ(ಎಚ್ಐ) ಹಾಗೂ ಪ್ರೌಢಶಾಲಾ ವಿಭಾಗಕ್ಕೆ ವಿಶೇಷ ಶಿಕ್ಷಣದಲ್ಲಿ ಬಿ.ಎಡ್‌(ಎಚ್ಐ) ವಿದ್ಯಾರ್ಹತೆ ಮತ್ತು ಆರ್‌ಸಿಐ ಪ್ರಮಾಣ ಪತ್ರ ಹೊಂದಿರುವವರಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆಸಕ್ತರು ಆ.3 ರೊಳಗಾಗಿ ಅಧೀಕ್ಷಕರು ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆ ಅಜಮ್‌ ನಗರ, ವಿದ್ಯಾಗಿರಿ ಬೆಳಗಾವಿ-590010 ಅವರಿಗೆ ಅಗತ್ಯ ದೃಢೀಕೃತ ದಾಖಲಾತಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ದೂ.0831-2472250 ಅಥವಾ ಮೊ.6361636212 ಸಂಪರ್ಕಿಸಬಹುದಾಗಿದೆ ಎಂದು ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕ ಶಂಕರಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೆಹಲಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಕ್ಯಾಂಡಲ್ ಮಾರ್ಚ್
ಯುವಕರನ್ನು ಕೆಣಕಿದವರಾರೂ ಉದ್ಧಾರವಾಗಿಲ್ಲ: ಸುನೀಲಗೌಡ ಪಾಟೀಲ