ಮಾ.31ರೊಳಗೆ ಇ ಆಟೋಗಳ ಪರವಾನಿಗೆಗೆ ಅರ್ಜಿ ಸಲ್ಲಿಸಿ: ದ.ಕ. ಜಿಲ್ಲಾಧಿಕಾರಿ

KannadaprabhaNewsNetwork |  
Published : Mar 14, 2026, 02:30 AM IST
ಜಿಲ್ಲಾಧಿಕಾರಿ ದರ್ಶನ್‌ ಅಧ್ಯಕ್ಷತೆಯಲ್ಲಿ ಆಟೋ ರಿಕ್ಷಾ ಚಾಲಕ, ಮಾಲೀಕರ ಸಭೆ  | Kannada Prabha

ಸಾರಾಂಶ

ಪರವಾನಿಗೆ ಪಡೆಯಲು ಇಚ್ಚಿಸುವ ಎಲ್ಲ ಎಲೆಕ್ಟಿಕ್‌ ಆಟೋ (ಇ- ಅಟೋ) ರಿಕ್ಷಾ ಚಾಲಕ, ಮಾಲೀಕರು ಮಾ. 31ರೊಳಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದ್ದಾರೆ.

ಮಂಗಳೂರು: ಪರವಾನಿಗೆ ಪಡೆಯಲು ಇಚ್ಚಿಸುವ ಎಲ್ಲ ಎಲೆಕ್ಟಿಕ್‌ ಆಟೋ (ಇ- ಅಟೋ) ರಿಕ್ಷಾ ಚಾಲಕ, ಮಾಲೀಕರು ಮಾ. 31ರೊಳಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದ್ದಾರೆ.ಪಡೀಲ್‌ನ ಪ್ರಜಾಸೌಧದಲ್ಲಿ ಶುಕ್ರವಾರ ಆಟೋ ರಿಕ್ಷಾ ಸಂಘದ ಬೇಡಿಕೆಗಳು, ಇಆಟೋ ರಿಕ್ಷಾಗಳಿಗೆ ಪರವಾನಿಗೆ ಕುರಿತಂತೆ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರ್‌ಟಿಒ ಅಂಕಿ ಅಂಶಗಳ ಪ್ರಕಾರ ಇ ಆಟೋ ರಿಕ್ಷಾಗಳಿಂದ ಈವರೆಗೆ ಕೇವಲ 250 ಅರ್ಜಿಗಳು ಮಾತ್ರವೇ ಬಂದಿವೆ. ಸುಮಾರು 3, 000 ದಷ್ಟು ಇ ಆಟೋಗಳು ಸಂಚರಿಸುತ್ತಿದ್ದು, ರಾಜ್ಯ ಸರ್ಕಾರ ಈಗಾಗಲೇ ವಾಣಿಜ್ಯ ಬಳಕೆಯ ಇ ಆಟೋ ರಿಕ್ಷಾಗಳಿಗೆ ಪರವಾನಿಗೆಯನ್ನು ಕಡ್ಡಾಯಗೊಳಿಸಿದೆ. 2025ರ ಮೊದಲು ನೋಂದಣಿ ಆಗಿರುವ ಎಲ್ಲ ಇ ಆಟೋ ರಿಕ್ಷಾಗಳು ಪರವಾನಿಗೆಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದರು.ನಿವಾಸ ಪ್ರಮಾಣ ಪತ್ರ: ಸಭೆಯಲ್ಲಿ ವಿವಿಧ ಆಟೋ ರಿಕ್ಷಾ ಚಾಲಕ ಮಾಲೀಕರ ಸಂಘದ ಪ್ರತಿನಿಧಿಗಳು ಮಾತನಾಡಿ, ಪರವಾನಿಗೆಗೆ ಅರ್ಜಿ ಸಲ್ಲಿಕೆ ವೇಳೆ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ ಐದು ವರ್ಷಗಳ ವಾಸ್ತವ್ಯವನ್ನು ತೋರಿಸುವ ನಿವಾಸ ಪ್ರಮಾಣಪತ್ರವನ್ನು ಸಲ್ಲಿಸಬೇಕೆಂಬ ನಿಯಮವನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಆದರೆ ಬಹುತೇಕ ಆಟೋ ಚಾಲಕರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮನೆ ಮಾಲೀಕರು ಐದು ವರ್ಷಗಳ ಕಾಲ ನಿವಾಸ ಪ್ರಮಾಣಪತ್ರಗಳನ್ನು ನೀಡುವುದಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮನೆ ಮಾಲೀಕರಿಂದ ನಿವಾಸ ಪ್ರಮಾಣಪತ್ರವನ್ನು ಪಡೆಯಬೇಕಾಗಿಲ್ಲ. ಅರ್ಜಿದಾರರು ಮಂಗಳೂರು ನಗರ ವ್ಯಾಪ್ತಿಯಲ್ಲಿ ಕನಿಷ್ಠ ಐದು ವರ್ಷಗಳಿಂದ ವಾಸ್ತವ್ಯವನ್ನು ಸಾಬೀತುಪಡಿಸಲು ಎಲ್‌ಪಿಜಿ ಸಿಲಿಂಡರ್‌ ಖರೀದಿ ಅಥವಾ ವಿದ್ಯುತ್‌ ಬಿಲ್‌ಗಳಂತಹ ದಾಖಲೆಗಳನ್ನು ಸಹ ಸಲ್ಲಿಸಬಹುದು ಎಂದರು.

ವಲಯ 1ರ ಪರವಾನಿಗೆ ಬೇಡಿಕೆ: 2018ರಿಂದ 2022ರ ಅವಧಿಯಲ್ಲಿ ನೋಂದಣಿ ಮಾಡಲಾದ 688 ಇ-ಆಟೋಗಳಿಗೆ ಈಗಾಗಲೇ ನೀಡಿರುವಂತೆ ವಲಯ 1ರ ಅಡಿಯೇ ಪರವಾನಗಿ ನೀಡಬೇಕು ಎಂದು ಚಾಲಕರು ಆಗ್ರಹಿಸಿದರು. ಈ ಬಗ್ಗೆ ಬೇಡಿಕೆ ಸಲ್ಲಿಸಿದರೆ ಪರಿಶೀಲನೆ ಮಾಡಿ ಕ್ರಮ ವಹಿಸುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕುಮಾರ್‌ ತಿಳಿಸಿದರು.

ಇ ಆಟೋಗೆ ಬದಲಾಯಿಸಲು ಪರಿಗಣನೆ: ಸಾರಿಗೆ ಇಲಾಖೆಯಿಂದ ನೀಡಲಾಗುವ ವಲಯ ಪ್ರಮಾಣ ಪತ್ರಗಳಲ್ಲಿ ಕ್ಯೂಆರ್‌ ಕೋಡ್‌ಗಳನ್ನು ಅಳವಡಿಸಬೇಕು ಎಂದು ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು. ಅಲ್ಲಿಯ ಪರಿಸ್ಥಿತಿಗೆ ಅನುಗುಣವಾಗಿ ಆ ಕ್ರಮ ಮಾಡಲಾಗಿದೆ. ಇಲ್ಲಿಗೆ ಸಂಬಂಧಿಸಿ ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದು ಎಸ್ಪಿ ಹೇಳಿದರು.

ಎಲ್‌ಪಿಜಿ ಹಾಗೂ ಸಿಎನ್‌ಐ ಚಾಲಿತ ಆಟೋಗಳನ್ನು ಓಡಿಸುತ್ತಿವವರು ಇ ಆಟೋಗಳಿಗೆ ಬದಲಾಯಿಸಲು ಮುಂದಾದರೆ ಅವರ ಹಾಲಿ ಪರವಾನಿಗೆಯನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಆಟೋ ಚಾಲಕ- ಮಾಲೀಕರು ಆಗ್ರಹಿಸಿದರು. ಈ ಬಗ್ಗೆ ಅವಕಾಶಕ್ಕೆ ಅರ್ಜಿ ಹಾಕಿದರೆ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್‌ ತಿಳಿಸಿದರು.ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌, ಮಂಗಳೂರು ಆರ್‌ಟಿಒ ಅಧಿಕಾರಿ (ಪ್ರಭಾರ) ಮುರಗೇಂದ್ರ ಬಸವರಾಜ ಶಿರೋಳಕರ ಇದ್ದರು.

ನೋಂದಣಿ ಮಹಿಳೆಯರ ಹೆಸರಲ್ಲಿ, ಓಡಿಸೋದು ಗಂಡಸರು: ಜಿಲ್ಲೆಯಲ್ಲಿ ಪರ್ಮಿಟ್‌ ದಂಧೆ ನಡೆಯುತ್ತಿದ್ದು, ಒಂದಕ್ಕಿಂತ ಹೆಚ್ಚಿನ ಪರ್ಮಿಟ್‌ಗಳನ್ನು ಹೊಂದಿರುವವರ ವಿರುದ್ಧ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ ಆಟೋ ರಿಕ್ಷಾ ಚಾಲಕ- ಮಾಲೀಕರ ಸಂಘದ ಪ್ರತಿನಿಧಿಗಳು, ಮೋಟಾರು ವಾಹನ ಕಾಯ್ದೆ ಪ್ರಕಾರ ಯಾರ ಹೆಸರಿನಲ್ಲಿ ಆಟೋ ಇದೆಯೋ ಅವರೇ ಓಡಿಸಬೇಕು. ಆದರೆ ನಗರದಲ್ಲಿ ಮಹಿಳೆಯರ ಹೆಸರಿನಲ್ಲಿ ಸಾಕಷ್ಟು ಇ ಆಟೋರಿಕ್ಷಾಗಳು ನೋಂದಣಿಯಾಗಿದ್ದರೂ ಅವುಗಳನ್ನು ಬೇರೆಯವರು ಓಡಿಸುತ್ತಿದ್ದಾರೆ ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆಲವು ಆಟೋ ಚಾಲಕರು, ಬ್ಯಾಂಕ್‌ನಿಂದ ಆಟೋ ರಿಕ್ಷಾಗಳಿಗೆ ಸಾಲ ಪಡೆಯುವ ಸಂದರ್ಭ ಸಿಬಿಲ್‌ ಸ್ಕೋರ್‌ನ ಕಾರಣದಿಂದ ಸಾಲ ದೊರಕದಾಗ ಮನೆಯ ಮಹಿಳೆಯರ ಹೆಸರಿನಲ್ಲಿ ಅಥವಾ ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿ ಆಟೋ ಖರೀದಿಸಿ ದುಡಿಯಲಾಗುತ್ತಿದೆ ಎಂದರು.

ಪರವಾನಿಗೆಯ ಅರ್ಜಿ ಪರಿಶೀಲನೆಯ ಸಂದರ್ಭ ಇಂತಹ ಅರ್ಜಿದಾರರು ಸೂಕ್ತ ಕಾರಣ ಹಾಗೂ ದಾಖಲೆಗಳೊಂದಿಗೆ ಮಾಹಿತಿ ಒದಗಿಸಿದ್ದಲ್ಲಿ ಪರಿಗಣಿಸಲಾಗುವುದು ಎಂದು ಎಸ್ಪಿ ಡಾ. ಅರುಣ್‌ ಕುಮಾರ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಕಾಮಗಾರಿಗೆ ಶಾಸಕ ಗುದ್ದಲಿ ಪೂಜೆ
ಹರಪನಹಳ್ಳಿಯ 72 ಹಳ್ಳಿಗಳಲ್ಲಿ ಜೀವಜಲಕ್ಕೆ ಹಾಹಾಕಾರ