ಹರಿಹರ ನಗರಸಭೆಗೆ ಹೆಚ್ಚಿನ ಪೌರಸೇವಾ ನೌಕರರ ನೇಮಿಸಿ: ಎಂ.ರವಿ

KannadaprabhaNewsNetwork |  
Published : Jul 06, 2026, 02:00 AM IST
04 ಹೆಚ್.ಆರ್.ಆರ್ 01ಹರಿಹರ ಘಟಕಕ್ಕೆ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ, ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿರುವ ಎಂ, ರವಿ ಹಾಗೂ ಪದಾಧಿಕಾರಿಗಳೊಂದಿಗೆ ಪತ್ರಿಕಾಗೊಷ್ಠಿ ನಡೆಸಿದರು.  | Kannada Prabha

ಸಾರಾಂಶ

ದಿನದಿಂದ ದಿನಕ್ಕೆ ಹರಿಹರ ನಗರವು ಬೆಳೆಯುತ್ತಿದ್ದು, ಕಡಿಮೆ ಸಂಖ್ಯೆಯಲ್ಲಿ ಪೌರಸೇವಾ ನೌಕರರಿರುವ ಕಾರಣ, ನಗರದ ಸ್ವಚ್ಛತೆ, ಕುಡಿಯುವ ನೀರು ಸರಬರಾಜಿನಲ್ಲಿ ಸಮಸ್ಯೆ ತಲೆದೋರುತ್ತಿದೆ. ಕೂಡಲೇ ಹೊಸದಾಗಿ ಪೌರ ನೌಕರ ನೇಮಕಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಹರಿಹರ ಘಟಕಕ್ಕೆ ನೂತನ ಅಧ್ಯಕ್ಷ ಎಂ.ರವಿ ತಿಳಿಸಿದ್ದಾರೆ.

- 109 ನೌಕರರಿಂದ ನಗರ ಸ್ವಚ್ಛತೆ ಅಸಾಧ್ಯ । ಜಿಲ್ಲಾಡಳಿತ, ಸರ್ಕಾರಕ್ಕೆ ಮನವಿ

- - -

ಕನ್ನಡಪ್ರಭ ವಾರ್ತೆ ಹರಿಹರ

ದಿನದಿಂದ ದಿನಕ್ಕೆ ಹರಿಹರ ನಗರವು ಬೆಳೆಯುತ್ತಿದ್ದು, ಕಡಿಮೆ ಸಂಖ್ಯೆಯಲ್ಲಿ ಪೌರಸೇವಾ ನೌಕರರಿರುವ ಕಾರಣ, ನಗರದ ಸ್ವಚ್ಛತೆ, ಕುಡಿಯುವ ನೀರು ಸರಬರಾಜಿನಲ್ಲಿ ಸಮಸ್ಯೆ ತಲೆದೋರುತ್ತಿದೆ. ಕೂಡಲೇ ಹೊಸದಾಗಿ ಪೌರ ನೌಕರ ನೇಮಕಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಹರಿಹರ ಘಟಕಕ್ಕೆ ನೂತನ ಅಧ್ಯಕ್ಷ ಎಂ.ರವಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ ನಮ್ಮ ಸಂಘಕ್ಕೆ ಅಧ್ಯಕ್ಷರಾಗಿದ್ದ ಹುಚ್ಚೆಂಗೆಪ್ಪನವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ, ರಾಜ್ಯಾಧ್ಯಕ್ಷರು ನನ್ನನ್ನು ನೂತನವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಪೌರನೌಕರರ ಸಮಸ್ಯೆಗೆ ಪರಿಹಾರಕ್ಕಾಗಿ, ಸಂಘಟನೆಗೆ ಸ್ಪಂದಿಸಿ ಹೋರಾಟ ಮಾಡುತ್ತೇನೆ ಎಂದರು.

8 ವರ್ಷಗಳಿಂದೀಚೆಗೆ ನಗರವು ಬೃಹತ್ ಗಾತ್ರದಲ್ಲಿ ಬೆಳೆದಿದೆ. ಬೆಳೆಯುತ್ತಿರುವ ಈ ನಗರದಲ್ಲಿನ ಸ್ವಚ್ಛತೆಗೆ ನಿರೀಕ್ಷಿತ ಪ್ರಮಾಣದಲ್ಲಿ ಪೌರಕಾರ್ಮಿಕರಿಲ್ಲ. ಇರುವ 125 ಕಾಯಂ ಪೌರ ಕಾರ್ಮಿಕರಲ್ಲಿ ಈಗಾಗಲೇ ಹಲವರು ಸೇವಾ ನಿವೃತ್ತಿ ಹೊಂದಿದ್ದಾರೆ. ಉಳಿದ 109 ನೌಕರರ ನೆರವಿನಲ್ಲಿ ನಗರ ಸ್ವಚ್ಛತೆಗೆ ತುಂಬಾ ತೊಂದರೆಯಾಗುತ್ತಿದೆ. ಆದಕಾರಣ ಜಿಲ್ಲಾಡಳಿತ, ರಾಜ್ಯ ಪೌರಾಡಳಿತ ಇಲಾಖೆ ಹರಿಹರ ನಗರಸಭೆಗೆ ಹೆಚ್ಚಿನ ಪ್ರಮಾಣದಲ್ಲಿ ಪೌರ ಸೇವಾ ನೌಕರರನ್ನು ನೇಮಕ ಮಾಡಿಬೇಕೆಂದು ಒತ್ತಾಯಿಸಿದರು.

ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಹರಿಹರ ಘಟಕಕ್ಕೆ ನೂತನ ಅದ್ಯಕ್ಷ, ಉಪಾಧ್ಯಕ್ಷ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಸರ್ವರಿಗೂ ಅಭಿನಂದಿಸುತ್ತೇವೆ ಎಂದರು.

ಪ್ರಧಾನ ಕಾರ್ಯದರ್ಶಿಯನ್ನಾಗಿ ಡಿ.ಚಿರಂಜಿವಿ, ಕಾರ್ಯದರ್ಶಿಯನ್ನಾಗಿ ಗುರುಮೂರ್ತಿ, ಖಜಾಂಚಿಯಾಗಿ ಹನುಮಂತಪ್ಪ ಎಂ., ಉಪಾಧ್ಯಕ್ಷರಾಗಿ ಆರ್ ಚಂದ್ರಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ ಪಿ.ಎಚ್., ನಿರ್ದೇಶಕರಾಗಿ ಪಿ. ಗುಡ್ಡಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

- - - -04ಎಚ್.ಆರ್.ಆರ್ 01:

ಹರಿಹರ ಘಟಕಕ್ಕೆ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ, ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿರುವ ಎಂ.ರವಿ ಪದಾಧಿಕಾರಿಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಬೆಳಗಾವಿಗೆ ಆರ್‌ಎಸ್‌ಎಸ್‌ಸರಸಂಘಚಾಲಕ ಭಾಗವತ್‌
ಕಡೂರು ತಾಲೂಕು ಕಚೇರಿಗೆ ರಾಜೇಂದ್ರಕುಮಾರ್ ಕಠಾರಿಯಾ ಭೇಟಿ