ಚಿಕ್ಕ ವಯಸ್ಸಲ್ಲೆ ಅಪ್ಪು ಕೊಡುಗೆ ಅಪಾರ

KannadaprabhaNewsNetwork |  
Published : Oct 31, 2024, 12:51 AM IST
30ಶಿರಾ1: ಶಿರಾ ರಂಗನಾಥ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅಪುö್ಪ ಅವರ 3ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್ ವಿತರಣೆ ಮಾಡಲಾಯಿತು. ಕನಕ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ರಂಗನಾಥ್, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ದಸಂಸ ಅಧ್ಯಕ್ಷ ಟೈರ್ ರಂಗನಾಥ್ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಪುನೀತ್ ರಾಜ್‌ಕುಮಾರ್ ಅವರು ಯಾರೇ ಕಷ್ಟ ಎಂದು ಬಂದರೂ ಅವರಿಗೆ ಸಹಾಯ ಮಾಡಿ ಯಾರಿಗೂ ಹೇಳಬಾರದೆಂದು ಹೇಳುತ್ತಿದ್ದರು.

ಕನ್ನಡಪ್ರಭ ವಾರ್ತೆ ಶಿರಾಪುನೀತ್ ರಾಜ್‌ಕುಮಾರ್ ಅವರು ಯಾರೇ ಕಷ್ಟ ಎಂದು ಬಂದರೂ ಅವರಿಗೆ ಸಹಾಯ ಮಾಡಿ ಯಾರಿಗೂ ಹೇಳಬಾರದೆಂದು ಹೇಳುತ್ತಿದ್ದರು. ಸದಾ ಕ್ರಿಯಾಶೀಲರಾಗಿರುತ್ತಿದ್ದ ಅವರು ಕನ್ನಡ ಚಿತ್ರರಂಗಕ್ಕೆ ಅತೀ ಚಿಕ್ಕ ವಯಸ್ಸಿನಲ್ಲೇ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ನಗರಸಭೆ ಸದಸ್ಯ ಎಸ್.ಎಲ್. ರಂಗನಾಥ್ ಹೇಳಿದರು.ಇಲ್ಲಿನ ರಂಗನಾಥ ನಗರದ ಅಪ್ಪು ಅಭಿಮಾನಿ ಬಳಗ ಮತ್ತು ಅಪ್ಪು ಯೂತ್ ಬ್ರಿಗೇಡ್ " ವತಿಯಿಂದ ಅಪ್ಪು ಅವರ 3ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ "ಅಪ್ಪು ನಮನ " ಹಾಗೂ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪುನೀತ್ ರಾಜ್‌ಕುಮಾರ್ ಕರ್ನಾಟಕ ಕಂಡ ಅಪ್ರತಿಮೆ ನಟ, ಸಮಾಜ ಸೇವಕ, ಪುನೀತ್ ಅವರ ಸಾವು ಇಡೀ ರಾಜ್ಯಕ್ಕೆ ತುಂಬಲಾದರ ನಷ್ಟ. ಪುನೀತ್ ರಾಜ್‌ಕುಮಾರ್ ಅವರು ಸಾವನಪ್ಪಿದ್ದರೂ ಅವರು ಇನ್ನು ನಮ್ಮ ನಡುವೆ ಇದ್ದಾರೆ ಎಂದರು.ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ಸರಳ ಸಜ್ಜನಿಕೆಯ ಮಾನವೀಯ ಮೌಲ್ಯ ಉಳ್ಳ ಮೇರು ನಟರಾಗಿದ್ದರು, ಅವರು ಜಾತಿ ಧರ್ಮ ಮೀರಿ ಜನಸೇವೆ ಮಾಡಿದ್ದಾರೆ ಎಂದರು. ದಸಂಸ ತಾಲೂಕು ಅಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರ ಸವಿ ನೆನಪಿಗಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್‌ಬುಕ್ ವಿತರಿಸುತ್ತಿರುವುದು ಶ್ಲಾಘನೀಯ ಎಂದರು. ಪೂಜಾರ ಮುದ್ದನಹಳ್ಳಿಯ ಚಿದಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಪುನೀತ್ ದಾನಿಯಾಗಿ, ಜ್ಞಾನಿಯಾಗಿ, ನೊಂದವರ ಕಣ್ಣಿರ ಒರೆಸುತ್ತ ನಾಡಿನ ಸೇವೆ ಮಾಡಿದ್ದಾರೆ. ಅವರ ಸ್ಮರಣೆ ಅತ್ಯಂತ ಆದರಣೀಯ. ಅವರ ರೀತಿ ನಾವು ಬದುಕಲು ಸಂಕಲ್ಪ ಮಾಡಬೇಕು ಎಂದರು. ನಗರಸಭೆ ಸದಸ್ಯರಾದ ಗಿರಿಜ ವಿಜಯಕುಮಾರ್, ಕೃಷ್ಣಪ್ಪ, ನಗರಸಭಾ ಮಾಜಿ ಸದಸ್ಯರಾದ ಬಸವರಾಜು, ಶಿಕ್ಷಕರಾದ ಬಿ.ಟಿ.ರಂಗನಾಥ್, ಸುಮ, ಮುಖಂಡರಾದ ಸೋಮಶೇಖರ್, ರಂಗನಾಥ್ (ಅಪ್ಪಿ), ಶ್ರೀರಂಗ, ಸುರೇಶ್, ಹೇಂತ್, ಡಾ. ಚಂದನ್, ನಿರ್ಮಲದೇವಿ, ಮೊಹಮ್ಮದ್ ಜಾಫರ್, ಆರ್.ಕಂಬಣ್ಣ, ಹನುಮಂತ, ಹೆಚ್.ಸತೀಶ್, ಮಂಜುನಾಥ್, ಜಯರಾಮಕೃಷ್ಣ, ವ್ಯವಸ್ಥಾಪಕರಾದ ಸಚಿನ್, ತಿಪ್ಪೇಶ್ ಕೆ.ಕೆ., ಕಿರಣ್ ನಾದೂರು, ಶ್ರೀರಂಗ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!