- ಹೆಸರಿಗೆ ನೆಲ್ಲಿಗಳ ಹಾಕಿಸಿ ಜೆಜೆಎಂ ಬೋರ್ಡ್: ಆರೋಪ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಅರಳಿಕಟ್ಟೆ ಗ್ರಾಮದಲ್ಲಿ ಸಮರ್ಪಕ ಗಿ ಕುಡಿಯುವ ನೀರು ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪಟ್ಟಣದ ತಾಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ರೈತ ಮುಖಂಡ ಜಕಲಿ ನಾಗರಾಜ್ ಮಾತನಾಡಿ, ಪ್ರಸ್ತುತ ಬೇಸಿಗೆ ಆರಂಭಗೊಂಡಿದೆ. ಗ್ರಾಪಂ ವತಿಯಿಂದ 15 ದಿನಗಳಿಗೆ ಒಂದು ಬಾರಿ ಕುಡಿಯುವ ನೀರನ್ನು ವಿತರಣೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಜೆಜೆಎಂ ಯೋಜನೆಯಲ್ಲಿ ಕುಡಿಯುವ ನೀರಿನ ನೆಲ್ಲಿಗಳನ್ನು ಅಳವಡಿಸಿದ್ದು, ಇವು ಕಳಪೆ ಗುಣಮಟ್ಟದಿಂದ ಕೂಡಿವೆ. ಈ ನೆಲ್ಲಿಗಳಲ್ಲಿ ಇದುವರೆಗೂ ಒಂದು ಹನಿಯೂ ನೀರು ಬಂದಿಲ್ಲ. ಹೆಸರಿಗೆ ಮಾತ್ರ ಎಲ್ಲ ಮನೆಗಳ ಮುಂದೆ ನೆಲ್ಲಿಗಳನ್ನು ಹಾಕಿಸಿ, ಜೆಜೆಎಂ ಎಂದು ಬೋರ್ಡ್ ಹಾಕಿದ್ದಾರೆ. ಇದು ಸರ್ಕಾರದ ಹಣ ಲಪಟಾಯಿಸುವ ಹುನ್ನಾರ ಎಂದು ದೂರಿದರು.ಗ್ರಾಮವು ಹೆಬ್ಬಳಗೆರೆ ಗ್ರಾಪಂ ವ್ಯಾಪ್ತಿಗೆ ಬರಲಿದೆ. ಸರಿಯಾಗಿ ನೀರು ವಿತರಣೆ ಮಾಡುತ್ತಿಲ್ಲ ಎಂದು ಪಿಡಿಒ, ನೀರುಗಂಟಿಗೆ ಕರೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದರು.
ಗ್ರಾಮಸ್ಥೆ ರತ್ನಮ್ಮ ಮಾತನಾಡಿ, 15 ದಿನಗಳಿಂದ ನೀರು ಪೂರೈಸಿಲ್ಲ. ಪ್ರತಿದಿನ ನೀರಿಗಾಗಿ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ದೈನಂದಿನ ಕೆಲಸಗಳನ್ನು ಬಿಟ್ಟು ಮನೆಯ ಎಲ್ಲ ಸದಸ್ಯರು ನೀರನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಈ ಸಂದರ್ಭ ಗ್ರಾಮದ ಪ್ರಮುಖರಾದ ಶಿವಮೂರ್ತಿ, ಮೀನಾಕ್ಷಿ, ಪದ್ಮಾವತಿ, ದೇವಿರಮ್ಮ, ಬಾಬಣ್ಣ, ಶಾರದಮ್ಮ, ವಿಶಾಲಾಕ್ಷಮ್ಮ, ಮಂಜುಳಾ, ರೇಣುಕಮ್ಮ, ಶಾಂತಮ್ಮ. ಗ್ರಾಮಸ್ಥರು ಪಾಲ್ಗೊಂಡಿದ್ದರು.
- - -(** ಈ ಪೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)
-20ಕೆಸಿಎನ್‌ಜಿ1:ಚನ್ನಗಿರಿ ತಾಲೂಕಿನ ಅರಳಿಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರನ್ನು ಸಮರ್ಪಕ ವಿತರಣೆ ಮಾಡುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.