ಕನ್ನಡಪ್ರಭ ವಾರ್ತೆ ಬಕವಿ-ಬನಹಟ್ಟಿ
ಶನಿವಾರ ಬೆಳಗ್ಗೆ ಮಾತಾಜಿಯ ಉಸಿರಾಟದಲ್ಲಿ ಗಣನೀಯ ಕ್ಷೀಣತೆ ಕಂಡುಬಂದಿದ್ದು, ಕಳೆದ ೧೨೦ ದಿನಗಳ ಹಿಂದೆ ಭದ್ರಗಿರಿ ಬೆಟ್ಟದ ಜೈನ ಮುನಿ ಆಚಾರ್ಯ ಶ್ರೀ ೧೦೮ ಕುಲರತ್ನಭೂಷಣ ಮಹಾರಾಜರಿಂದ ಸಲ್ಲೇಖನ ವೃತ ಪಡೆದಿದ್ದರು. ಈಗ ಮಾತಾಜಿಯ ಅಂತಿಮ ದಿನಗಳ ಕ್ಷಣಗಣನೆ ಪ್ರಾರಂಭವಾಗಿದ್ದು, ಸಾವಿರಾರು ಭಕ್ತರು ಇವರ ಅಂತಿಮ ಯಾತ್ರೆಯ ಮೋಕ್ಷದ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ.
ಮಾತಾಜಿಯವರ ಪಕ್ಕದಲ್ಲಿಯೇ ಕುಳಿತು ಆಚಾರ್ಯ ಶ್ರೀಗಳು ಮಂತ್ರೋಪದೇಶ ಮಾಡುತ್ತಿದ್ದಾರೆ. ಅವರ ಶ್ರೇಷ್ಠ ಆತ್ಮಪರಮಾತ್ಮವಾಗಲಿದೆ. ಇಂಥ ಅಂತಿಮ ದರ್ಶನ ಪಡೆಯುವುದು ಬಹುಶ್ರೇಷ್ಠ. ಅವರ ೧೦೩ನೇ ವಯೋಮಾನದಲ್ಲಿ ಅವರು ಆರಿಕಾ ಆಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂಬ ಅವರ ಇಚ್ಛೆ ನೆರವೇರಿದೆ. ಅವರ ಆತ್ಮಕ್ಕೆ ಆ ಮಹಾವೀರ ಭಗವಾನರು ಶಾಂತಿ ನೀಡಲಿ ಎಂದು ೧೦೮ ಶ್ರೀ ಕುಲರತ್ನಭೂಷಣ ಮಹಾರಾಜರು ಆಶೀರ್ವದಿಸಿದರು.