ರಾಮನಗರ: ನಗರದ ಅರ್ಕಾವತಿ ಬಡಾವಣೆಯಲ್ಲಿನ ಉದ್ಯಾನವನ ನಿರ್ವಹಣೆ ಹೊಣೆಯನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮತ್ತು ಆಯುಕ್ತ ಡಾ.ಜಯಣ್ಣರವರು ಸ್ವಾಭಿಮಾನಿ ಸೇವಾ ಸಮಿತಿಗೆ ಶುಕ್ರವಾರ ಹಸ್ತಾಂತರಿಸಿದರು.
ಬಹುತೇಕ ಅನಧಿಕೃತ ಬಡಾವಣೆಗಳು ರಸ್ತೆ, ಚರಂಡಿ, ಉದ್ಯಾನವನ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಅಲ್ಲದೆ, ನಗರದಲ್ಲಿ ಶೇಕಡ 52ರಷ್ಟು ಭಾಗದಲ್ಲಿ ಯುಜಿಡಿ ಸಂಪರ್ಕವೇ ಇಲ್ಲ ಎಂದರು.
ನಗರದ ಎಲ್ಲಾ ಭಾಗಕ್ಕೂ ಯುಜಿಡಿ ಸಂಪರ್ಕ ಕಲ್ಪಿಸಲು ಸುಮಾರು 200 ಕೋಟಿ ಬೇಕಾಗುತ್ತದೆ. ನಾನು ಅಧ್ಯಕ್ಷನಾದಾಗಿನಿಂದಲೂ ನಮ್ಮ ಜಿಲ್ಲೆಯವರೇ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡುತ್ತಲೇ ಬಂದಿದ್ದೇನೆ. ಅವರು ಅನುದಾನ ನೀಡುವುದಾಗಿ ಭರವಸೆ ನೀಡುತ್ತಲೇ ಬಂದಿದ್ದಾರೆ. ಅವರು ಮುಖ್ಯಮಂತ್ರಿಯಾದರೆ ಯುಜಿಡಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ಬರುತ್ತದೆ. ಅಲ್ಲಿವರೆಗೆ ಕಾಯಬೇಕಿದೆ ಎಂದು ಹೇಳಿದರು.ನಗರಸಭೆಗೆ ಬಂದಿದ್ದ ಎನ್ ಜಿಟಿಯ 33 ಕೋಟಿ ಅನುದಾನದಲ್ಲಿ ವಾರ್ಡ್-1 ಮತ್ತು 2ರಲ್ಲಿ ಯುಜಿಡಿಗೆ ಯೋಜನೆ ರೂಪಿಸಲಾಗಿದೆ. ಅನುದಾನ ಆಧರಿಸಿ ಮುಂದೆಯೂ ಹಂತ ಹಂತವಾಗಿ ವಿಸ್ತರಿಸಲಾಗುವುದು. ಈ ಮೊದಲು
ಆಯುಕ್ತ ಡಾ.ಜಯಣ್ಣ ಮಾತನಾಡಿ, ಉದ್ಯಾನ ನಿರ್ವಹಣೆಗೆ ಸ್ವಯಂ ಪ್ರೇರಣೆಯಿಂದ ಸ್ವಾಭಿಮಾನಿ ಸೇವಾ ಸಮಿತಿ ಮುಂದೆ ಬಂದಿರುವುದು ಶ್ಲಾಘನೀಯ. ಒಳ್ಳೆಯ ಸಾಂಪ್ರದಾಯಕ್ಕೆ ಸಾಕ್ಷಿಯಾಗಿದ್ದೀರಿ. ನಗರದಲ್ಲಿ ಖಾಸಗಿ ನಿರ್ವಹಣೆಗೆ ವಹಿಸಿರುವ ಎರಡನೇ ಉದ್ಯಾನ ಇದಾಗಿದೆ. ಈಗಾಗಲೇ ಕುವೆಂಪು ಉದ್ಯಾನವನ್ನು ಸ್ಥಳೀಯರಿಗೆ ವಹಿಸಲಾಗಿದೆ. ಇದು ಪ್ರೇರಣದಾಯಕ ಕೆಲಸ ಎಂದರು.
ನಗರಸಭೆ ಸದಸ್ಯ ಕೆ. ರಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಮುಖಂಡರಾದ ಆನಂದ್, ಆರ್. ನಾಗರಾಜು, ಚಂದ್ರು ಮಾತನಾಡಿದರು.
ಬಸವರಾಜು, ಮರಿಸ್ವಾಮಿ, ಆರ್. ನಾಗರಾಜು, ಲಕ್ಷ್ಮಿ ಕುಮಾರ್, ನಾಗವೀರಯ್ಯ, ಶಿವಲಿಂಗಯ್ಯ, ರಾಮು, ವೆಂಕಟೇಶ್, ಹೋಬಯ್ಯ, ಸುರೇಂದ್ರಕುಮಾರ್, ಜವರಯ್ಯ, ಗಂಗಾಧರ್, ಪುರುಷೋತ್ತಮ್, ಜೈಪ್ರಕಾಶ್, ಮಿಲಿಟರಿ ವೆಂಕಟೇಶ್, ಸಿದ್ದಪ್ಪಾಜಿ ಮತ್ತಿತರರು ಉಪಸ್ಥಿತರಿದ್ದರು.
ಸ್ವಾಭಿಮಾನಿ ಸೇವಾ ಸಮಿತಿಯವರು ಉದ್ಯಾನವನ ನಿರ್ವಹಣೆಗೆ ಮುಂದೆ ಬಂದಿರುವುದು ಮಾದರಿ ನಡೆ. ಸಾರ್ವಜನಿಕ ಸ್ವತ್ತನ್ನು ರಕ್ಷಿಸಿ ನಿರ್ವಹಿಸುವ ಪ್ರಜ್ಞೆಯು ಜನರಲ್ಲಿ ಬಂದಾಗ ಮಾತ್ರ ಬದಲಾವಣೆ ಸಾಧ್ಯ. ಆ ನಿಟ್ಟಿನಲ್ಲಿ ನಾಗರಿಕರು ನಗರಸಭೆಗೆ ಸಹಕರಿಸಬೇಕು. ಸ್ವಚ್ಛ ರಾಮನಗರ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು.
16ಕೆಆರ್ ಎಂಎನ್ 3.ಜೆಪಿಜಿ