ಸೇನೆ ಭಾರತದ ಶಕ್ತಿಯನ್ನು ಇಡೀ ವಿಶ್ವಕ್ಕೆ ತೋರಿಸಿದೆ: ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್

KannadaprabhaNewsNetwork |  
Published : May 22, 2025, 01:12 AM IST
21ಕೆಪಿಎಂಎಸ್ಕೆ01: | Kannada Prabha

ಸಾರಾಂಶ

‘ಅಪರೇಷನ ಸಿಂದೂರ’ ಮೂಲಕ ಪಾಕಿಸ್ತಾನಕ್ಕೆ ನುಗ್ಗಿ 9ಕ್ಕೂ ಹೆಚ್ಚು ಉಗ್ರ ನೆಲೆಗಳನ್ನು ಧ್ವಂಸ ಮಾಡುವ ಮೂಲಕ ನಮ್ಮ ದೇಶದ ವೀರಯೋಧರು ಇಡೀ ವಿಶ್ವಕ್ಕೆ ಭಾರತದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.

ತಿರಂಗಾ ಯಾತ್ರೆ । ಮಸ್ಕಿ ನಾಗರಿಕ ಸಮಿತಿಯಿಂದ ಬೃಹತ್ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮಸ್ಕಿ

‘ಅಪರೇಷನ ಸಿಂದೂರ’ ಮೂಲಕ ಪಾಕಿಸ್ತಾನಕ್ಕೆ ನುಗ್ಗಿ 9ಕ್ಕೂ ಹೆಚ್ಚು ಉಗ್ರ ನೆಲೆಗಳನ್ನು ಧ್ವಂಸ ಮಾಡುವ ಮೂಲಕ ನಮ್ಮ ದೇಶದ ವೀರಯೋಧರು ಇಡೀ ವಿಶ್ವಕ್ಕೆ ಭಾರತದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ‘ಅಪರೇಷನ ಸಿಂದೂರ’ ಯಶಸ್ವಿ ಹಿನ್ನೆಲೆಯಲ್ಲಿ ನಾಗರಿಕ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ತಿರಂಗ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಶ್ಮೀರದ ಪಾಲ್ಗಗವ್ ನಲ್ಲಿ 26 ಜನ ಅಮಾಯಕರನ್ನು ಉಗ್ರರು ಹತ್ಯೆ ಮಾಡಿದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಪ್ರತಿಕಾರ ತೆಗೆದುಕೊಳ್ಳುವಂತೆ ಸೂಚಿಸಿದರು. ನಮ್ಮ ಯೋಧರು ಫಾಕಿಸ್ಥಾನದಲ್ಲಿನ ಜನ ಸಾಮಾನ್ಯರ ಸಾವು ನೋವು ಆಗದಂತೆ ಉಗ್ರತಾಣಗಳನ್ನು ಗುರುತಿಸಿ ಅವುಗಳನ್ನು ದ್ಚಂಸ ಮಾಡಿ ಪ್ರತಿಕಾರ ತೆಗೆದುಕೊಂಡಿದ್ದಾರೆ. ಇಡೀ ದೇಶವೇ ಇವತ್ತು ನಮ್ಮ ಯೋಧರ ಜೊತೆ ಇದೆ ಎಂದರು.

ಅಶೋಕ ವೃತ್ತದ ಬಳಿ ಗಚ್ಚಿನಮಠದ ವರರುದ್ರಸ್ವಾಮೀಜಿ, ಜಿಲಾನಿಖಾಜಿ ತಿರಂಗ ಯಾತ್ರೆಗೆ ಚಾಲನೆ ನೀಡಿದರು.

ಅಶೋಕ ವೃತ್ತದಿಂದ ಆರಂಭವಾದ ಯಾತ್ರೆ ಪ್ರಮುಖ ಬೀದಿಗಳಲ್ಲಿ ಸಾಗಿ ದೈವದಕಟ್ಟೆಗೆ ಆಗಮಿಸಿತು.

ಮಾಜಿ ಸೈನಿಕ ಶಂಕ್ರಪ್ಪ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಾ ಶಿವರಾಜ, ಮುಖಂಡರಾದ ಡಾ. ಶಿವಶರಣಪ್ಪ ಇತ್ಲಿ, ಡಾ. ಬಿ. ಎಚ್. ದಿವಟರ್, ಅಂದಾನಪ್ಪ ಗುಂಡಳ್ಳಿ, ಬಸನಗೌಡ ಪೊಲೀಸ ಪಾಟೀಲ, ಸಿದ್ದಣ್ಣ ಹೂವಿನಭಾವಿ, ಶಿವಶಂಕ್ರಪ್ಪ ಹಳ್ಳಿ, ಪಂಪಣ್ಣ ಗುಂಡಳ್ಳಿ, ಮಲ್ಲಪ್ಪ ಅಂಕಶದೊಡ್ಡಿ, ಶರಣಯ್ಯ ಸೊಪ್ಪಿಮಠ, ಮೌನೇಶ ಮುರಾರಿ, ಜಿಲಾನಿ ಖಾಜಿ, ಚಂದ್ರಕಾಂತ ಪಾಟೀಲ, ಜಿ. ವೆಂಕಟೇಶ ನಾಯಕ, ರಮೇಶ ಉದ್ಬಾಳ, ಬಸವರಾಜ ಗುಡಿಹಾಳ, ಗೌಸ್ ಪಾಶ, ಚಂದ್ರಕಲಾ ದೇಶಮುಖ ಸೇರಿದಂತೆ ಅನೇಕಮುಖಂಡರು, ಮಹಿಳೆಯರು ಹಾಗೂ ಶಾಲೆ, ಕಾಲೇಜುಗಳನೂರಾರು ವಿದ್ಯಾರ್ಥಿಗಳು ರಾಷ್ಟ್ರ ಧ್ವಜ ಹಿಡಿದು ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’