ಇಂದು ಮಾಲೂರು ವಿಧಾನಸಭಾ ಕ್ಷೇತ್ರ ಮತ ಮರುಎಣಿಕೆ

KannadaprabhaNewsNetwork |  
Published : Nov 11, 2025, 01:15 AM IST
೧೦ಕೆಎಲ್‌ಆರ್-೪ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಮಂಗಳವಾರ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಕಾರ್ಯದ ಹಿನ್ನಲೆಯಲ್ಲಿ ಕೋಲಾರದ ಜಿಲ್ಲಾಧಿಕಾರಿ ಆವರಣದ ಸ್ಟ್ರಾಂಗ್ ರೂಮ್‌ನಿಂದ ಹೊರಬರುತ್ತಿರುವ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಹಾಗೂ ಬಿಜೆಪಿ ಪಕ್ಷದ ಮುಖಂಡರು. | Kannada Prabha

ಸಾರಾಂಶ

ಇಡೀ ದೇಶ ಮಾಲೂರು ಮರುಎಣಿಕೆ ನೋಡುತ್ತಿದೆ, ವಿವಿ ಪ್ಯಾಟ್ ಎಣಿಕೆ ಆಗಲಿ ಅನ್ನೋದು ನಮ್ಮ ಬೇಡಿಕೆ. ಆದರೆ ಕೇವಲ ಇವಿಎಂ ಎಣಿಕೆ ಮಾಡಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ, ಇದೆ ರೀತಿ ಎಣಿಕೆ ಮಾಡಿ ಅಂತ ಇವರಿಗೆ ಕೋರ್ಟ್ ಸೂಚನೆ ನೀಡಿಲ್ಲ, ಯಾರಿಗೆ ಎಷ್ಟು ಮತ ಅಂತ ಖಚಿತವಾಗಲು ವಿವಿ ಪ್ಯಾಟ್ ಹಾಗೂ ೧೭ ಎಣಿಕೆ ಆಗಲಿ, ಭದ್ರತಾ ಕೊಠಡಿಯಲ್ಲಿರುವ ನ್ಯೂನತೆಯಿಂದ ಅನುಮಾನ ಮತ್ತೆ ಹೆಚ್ಚಾಗಿದೆ,

ಕನ್ನಡಪ್ರಭ ವಾರ್ತೆ ಕೋಲಾರಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಮಂಗಳವಾರ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಕಾರ್ಯದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸ್ಟ್ರಾಂಗ್ ರೂಮ್ ಅನ್ನು ಸೋಮವಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನೇತೃತ್ವದಲ್ಲಿ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಹಾಗೂ ಪಕ್ಷದ ಅಭ್ಯರ್ಥಿಗಳ ಸಮ್ಮುಖದಲ್ಲಿ ತೆರೆಯಲಾಯಿತು. ನಗರದ ಹೊರವಲಯದ ತೋಟಗಾರಿಕೆ ವಿವಿಯಲ್ಲಿರುವ ಮತ ಎಣಿಕೆ ಕೇಂದ್ರಕ್ಕೆ ಇವಿಎಂ ಯಂತ್ರಗಳನ್ನು ಸ್ಥಳಾಂತರಿಸಲಾಯಿತು. ವಿವಿ ಪ್ಯಾಟ್‌ಗೆ ಸೀಲ್‌ ಮಾಡಿಲ್ಲ

ಸ್ಟ್ರಾಂಗ್ ರೂಮ್‌ನಿಂದ ಹೊರ ಬಂದ ಬಳಿಕ ಬಿಜೆಪಿ ಪರಾರ್ಜಿತ ಅಭ್ಯರ್ಥಿ ಹಾಗೂ ದೂರುದಾರ ಮಾಜಿ ಶಾಸಕ ಮಂಜುನಾಥ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ೨೫೨ ಇವಿಯಂ ಯಂತ್ರಗಳು, ೪೨ ವಿವಿ ಪ್ಯಾಟ್‌ಗಳಿಗೆ ಸರಿಯಾಗಿ ಸೀಲ್ ಮಾಡಿಲ್ಲ. ಪೋಸ್ಟಲ್ ಬ್ಯಾಲೆಟ್ ಸಹ ಓಪನ್ ಆಗಿದೆ. ಅದಕ್ಕೂ ಸೀಲ್ ಹಾಕಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇಡೀ ದೇಶ ಮಾಲೂರು ಮರುಎಣಿಕೆ ನೋಡುತ್ತಿದೆ, ವಿವಿ ಪ್ಯಾಟ್ ಎಣಿಕೆ ಆಗಲಿ ಅನ್ನೋದು ನಮ್ಮ ಬೇಡಿಕೆ. ಆದರೆ ಕೇವಲ ಇವಿಎಂ ಎಣಿಕೆ ಮಾಡಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ, ಇದೆ ರೀತಿ ಎಣಿಕೆ ಮಾಡಿ ಅಂತ ಇವರಿಗೆ ಕೋರ್ಟ್ ಸೂಚನೆ ನೀಡಿಲ್ಲ, ಯಾರಿಗೆ ಎಷ್ಟು ಮತ ಅಂತ ಖಚಿತವಾಗಲು ವಿವಿ ಪ್ಯಾಟ್ ಹಾಗೂ ೧೭ ಎಣಿಕೆ ಆಗಲಿ, ಭದ್ರತಾ ಕೊಠಡಿಯಲ್ಲಿರುವ ನ್ಯೂನತೆಯಿಂದ ಅನುಮಾನ ಮತ್ತೆ ಹೆಚ್ಚಾಗಿದೆ, ಈ ಬಗ್ಗೆ ನಾನು ಕೋರ್ಟ್ ಗಮನಕ್ಕೂ ತರುತ್ತೇನೆ ಎಂದು ವಿವರಿಸಿದರು.

ವಿವಿ ಪ್ಯಾಟ್‌ಗಳ ಮತ ಎಣಿಸಲಿ

ಚುನಾವಣೆ ನಿಯಮ ಪ್ರಕಾರ ಎಲ್ಲಾ ವಿವಿ ಪ್ಯಾಟ್‌ಗಳ ಮತಗಳ ಎಣಿಕೆ ಮಾಡಲು ಅವಕಾಶ ಇರುವುದನ್ನು ಪಾಲಿಸಬೇಕು, ಒಂದೆರೆಡು ಗಂಟೆಗಳ ಕಾಲ ಮತ ಎಣಿಕೆ ಪ್ರಕ್ರಿಯೆ ವಿಳಂಬವಾಗಬಹುದು ಈ ಕ್ರಮ ಅನುಸರಿಸದಿದ್ದರೆ ನಾನು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇನೆ. ಮತಎಣಿಕೆ ಏಜೆಂಟರುಗಳಾಗಿ ಮಾಲೂರು ಕ್ಷೇತ್ರದವರಷ್ಟೇ ನೇಮಕವಾಗ ಬೇಕು ಎಂದು ಮಂಜುನಾಥಗೌಡ ಕರಾರು ವಿಧಿಸಿದರು.ಮತ ಎಣಿಕೆಯಲ್ಲಿ ಏನಾದರೂ ಕಳವು ಕಂಡು ಬಂದಲ್ಲಿ ಸತ್ಯಾಂಶ ಬಹಿರಂಗವಾಗಲಿದೆ ಶಾಸಕ ನಂಜೇಗೌಡರು ನೈಜವಾಗಿ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರೆ ಮುಂದಿನ ಎರಡು ವರ್ಷ ಮುಂದುವರೆಯಲಿ ಅದರೆ ದುರಾಂಹಕಾರದ ಮಾತು ಬಿಡಲಿ ಎಂದು ಕಿವಿ ಮಾತು ತಿಳಿಸಿದರು. ಕಾಂಗ್ರೆಸ್‌ ಒತ್ತಡ ಸಾಧ್ಯತೆ

ಬಿಜೆಪಿ ಪರಿಷತ್ ಸದಸ್ಯ ಕೇಶವ್ ಪ್ರಸಾದ್ ಮಾತನಾಡಿ, ವಿವಿ ಪ್ಯಾಟ್ ಹಾಗೂ ೧೭ರಲ್ಲಿರೋದು ಮರು ಎಣಿಕೆಯಗೆ ಸಾಮ್ಯತೆ ಇರಬೇಕು, ೨೦೨೩ ಎಣಿಕೆ ವೇಳೆ ಅಧಿಕಾರಿಗಳ ಮೇಲೆ ಕಾಂಗ್ರೆಸ್ ಒತ್ತಡ ಹೇರುವ ಕೆಲಸ ಮಾಡಿತ್ತು, ಈಗಲೂ ಸರ್ಕಾರ ಒತ್ತಡ ಏರುವ ಭಯ ನಮಗಿದೆ, ಅಧಿಕಾರಿಗಳು ನಿಸ್ಪಕ್ಷಪಾತವಾಗಿ ಮರು ಎಣಿಕೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ