ಕನ್ನಡಪ್ರಭ ವಾರ್ತೆ ವಿಜಯಪುರ
ಎಸ್‌ಪಿ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ನಾಗರಾಜ.ಜಿ, ಸಿಪಿಐಗಳಾದ ಎಸ್.ಎಸ್.ಬಳಿಗಾರ, ಪ್ರದೀಪ ತಳಕೇರಿ, ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡದಲ್ಲಿದ್ದ ಗಾಂಧಿಚೌಕ, ಗೋಲಗುಂಬಜ್, ಎಪಿಎಂಸಿ, ಆದರ್ಶನಗರ ಹಾಗೂ ಜಲನಗರ ಪೊಲೀಸ್ ಠಾಣೆ ಪಿಎಸ್‌ಐಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹಲವು ಪ್ರಕರಣಗಳನ್ನು ಬೇಧಿಸಿ, ಆರೋಪಿಗಳನ್ನು ಬಂಧಿಸಿ, ಅವರಿಂದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಬಂಗಾರ, ಬೆಳ್ಳಿ, ನಗದು ಹಣ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
2025ನೇ ಸಾಲಿನ ಒಟ್ಟು 17 ಪ್ರಕರಣಗಳಲ್ಲಿ 28 ಜನ ಆರೋಪಿಗಳನ್ನು ಮತ್ತು 2026ನೇ ಸಾಲಿನ ಒಟ್ಟು 13 ಪ್ರಕರಣಗಳಲ್ಲಿ 15 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 1,60,32,000 ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧ ಕಳ್ಳತನ ಪ್ರಕರಣಗಳಲ್ಲಿನ ಆರೋಪಿಗಳನ್ನು ಪತ್ತೆ ಮಾಡಿ, ಬಂಧಿಸಿ ಅವರಿಂದ ಬಂಗಾರ, ಬೆಳ್ಳಿಯ ಆಭರಣಗಳನ್ನು ಹಾಗೂ ವಿವಿಧ ಬಗೆಯ ದ್ವಿಚಕ್ರ ಹಾಗೂ ಕಾರ್‌ಗಳನ್ನು ವಶಪಡಿಸಿಕೊಂಡು ಉತ್ತಮ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಪ್ರಮುಖ ಪ್ರಕರಣಗಳ ವಿವರ:
ಗೋಲಗುಂಬಜ್ ಪೊಲೀಸ್ ಠಾಣೆಯ 07 ಪ್ರಕರಣಗಳಲ್ಲಿ 08 ಜನ ಆರೋಪಿಗಳನ್ನು ಬಂಧಿಸಿ, ಆರೋಪಿತರಿಂದ 100 ಗ್ರಾಂ 60 ಗುಂಜಿ ಚಿನ್ನಾಭರಣ, 10 ಗ್ರಾಂ ಬೆಳ್ಳಿ ಕೈಖಡಗ, 01 ಇನ್ನೋವಾ ಕ್ರೀಸ್ಟಾ ಕಾರು ಸೇರಿ ಒಟ್ಟು ಅಂದಾಜು 33,02,000 ರೂ. ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆದರ್ಶನಗರ ಪೊಲೀಸ್ ಠಾಣೆಯ 10 ಪ್ರಕರಣಗಳಲ್ಲಿ 21 ಜನ ಆರೋಪಿಗಳನ್ನು ಬಂಧಿಸಿ, ಆರೋಪಿತರಿಂದ 410 ಗ್ರಾಂ ಚಿನ್ನಾಭರಣ, 02 ದ್ವಿಚಕ್ರ ವಾಹನಗಳು, 01 ಹುಂಡೈ ಕಾರು ಸೇರಿದಂತೆ ಒಟ್ಟು ಅಂದಾಜು 74,55,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.