ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ಚಿತ್ರಕಲಾ ಪ್ರದರ್ಶನ

KannadaprabhaNewsNetwork |  
Published : Mar 16, 2025, 01:49 AM IST
ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ  ಚಿತ್ರಕಲಾ ಪ್ರದರ್ಶನ | Kannada Prabha

ಸಾರಾಂಶ

ತರೀಕೆರೆ, ಜಿಲ್ಲಾ ಕಸಾಪದಿಂದ ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗವಾಗಿ ಪ್ರಪ್ರಥಮ ಬಾರಿಗೆ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕನ್ನಡಪ್ರಭ ವಾರ್ತೆ, ತರೀಕೆರೆ

ಜಿಲ್ಲಾ ಕಸಾಪದಿಂದ ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗವಾಗಿ ಪ್ರಪ್ರಥಮ ಬಾರಿಗೆ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು..

ಜಿಪಂ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಇದರಲ್ಲಿ ಜಿಲ್ಲೆಯ ಸುಮಾರು 25 ಚಿತ್ರ ಕಲಾವಿದರು ತಮ್ಮ ಕಲಾ ಕೃತಿಗಳನ್ನು ಪ್ರದರ್ಶಿಸಿದರು. ಈ ಕಲಾಕೃತಿಗಳಲ್ಲಿ ತರೀಕೆರೆ ಕಲಾವಿದ ಟಿ.ಡಿ.ಸುರೇಶ್ ಅವರ ಜ್ಞಾನಪೀಠ ಪುರಸ್ಕೃತ ಸಾಹಿತಿಗಳಾದ ಕುವೆಂಪು, ದ. ರಾ. ಬೇಂದ್ರೆ, ಮಾಸ್ತಿ , ವಿ.ಕೃ.ಗೋಕಾಕ, ಯು.ಆರ್ ಅನಂತ ಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ್ ಕಂಬಾರರ ಕಲಾಕೃತಿಗಳು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ,ರು.ಚ., 20ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಚ್. ಎಮ್. ಮರುಳಸಿದ್ದಯ್ಯ ಪಟೇಲ್ ಅವರ ಕಲಾ ಕೃತಿಗಳು ಜನರನ್ನು ವಿಶೇಷವಾಗಿ ಆಕರ್ಷಿಸಿತು.

ಸುರೇಶ್ ಮತ್ತು ತಂಡ ಅಭಿವೃದ್ಧಿಪಡಿಸಿರುವ ವಿಭಿನ್ನ ಕನ್ನಡ ಅಕ್ಷರ ಮಾದರಿ, ಕನ್ನಡ ಸಾಹಿತಿಗಳ, ನಾಡು-ನುಡಿಯ ಮಹತ್ವ ಸಾರುವ ವಿಭಿನ್ನ ರೀತಿ ಕಲಾಕೃತಿಗಳ ಪ್ರದರ್ಶನ ಜನಸಾಮಾನ್ಯರಿಗೆ ಮನಮುಟ್ಟುವಂತಿತ್ತು.

ಟಿ.ಡಿ ಸುರೇಶ್, ಮೋಹನ್ ಈರಪ್ಪ, ನಯನಾಮೃತ, ನಾಗರಾಜು, ಸತ್ಯಪ್ರಕಾಶ್, ಲಿಂಗರಾಜು, ತೋಟಪ್ಪ ಗೌಡ, ಕೃಷ್ಣ ಮೂರ್ತಿ,ಪೂರ್ಣಚಂದ್ರ, ಶೋಯೂಬ್ ಮೊಹಮ್ಮದ್, ಲಕ್ಷ್ಮಿ,ಉಮಾ ಪ್ರಕಾಶ್ ಮತ್ತಿತರರ ಅನೇಕ ಕಲಾವಿದರು ಈ ಒಂದು ಪ್ರದರ್ಶನದಲ್ಲಿ ತಮ್ಮಕಲಾಕೃತಿಗಳೊಂದಿಗೆ ಭಾಗವಹಿಸಿದ್ದರು.

ಕನ್ನಡದ ಬಗ್ಗೆ ಅಪಾರ ಅಭಿಮಾನ ಮೂಡಿಸುವಲ್ಲಿ ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಇವರ ಕಾರ್ಯ ಶ್ಲಾಘನೀಯ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ. ಎಚ್.ಎಂ. ಮರುಳಸಿದ್ದಯ್ಯ ಪಟೇಲ್ ಹೇಳಿದರು. ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ. ಎಲ್. ಶಂಕರ್, ಶಾಸಕ ಜಿ. ಎಚ್. ಶ್ರೀನಿವಾಸ್, ಮಾಜಿ ಸಂಸದ ಬಿ, ಎನ್. ಚಂದ್ರಪ್ಪ. ಉಪ ವಿಭಾಗಾಧಿಕಾರಿ ಡಾ.ಕೆ.ಜಿ. ಕಾಂತರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಸಾಹಿತಿ ನಾಗಶ್ರೀ ತ್ಯಾಗರಾಜು, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಕನ್ನಡಶ್ರೀ ಬಿ. ಎಸ್. ಭಗವಾನ್, ಕೆ.ಎಸ್. ಶಿವಣ್ಣ ಇಮ್ರಾನ್ ಅಹಮದ್ ಬೇಗ್, ನವೀನ್ ಪೆನ್ನಯ್ಯ, ವಿವಿಧ ಶಾಲಾ ಮಕ್ಕಳು, ಸಾರ್ವಜನಿಕರು ಈ ಪ್ರದರ್ಶನ ವೀಕ್ಷಿಸಿದರು.14ಕೆಟಿಆರ್.ಕೆ.20ಃ

ತರೀಕೆರೆಯಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿತ್ತಕಲಾ ಪ್ರದರ್ಶನ ನಡೆಯಿತು. ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್.ಶಂಕರ್, ಕಲಾವಿದ ಟಿ.ಡಿ.ಸುರೇಶ್, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ನವೀನ್ ಪೆನ್ನಯ್ಟ, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮತ್ತಿತರರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ