ಕನ್ನಡಪ್ರಭ ವಾರ್ತೆ ಹಾಸನ
ಕಾರ್ಯಕ್ರಮಕ್ಕೆ ಹೆಸರಾಂತ ಕಲಾವಿದ ಬಿ.ಎಸ್. ದೇಸಾಯಿ ವಿಶೇಷ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಮಕ್ಕಳ ಚಿತ್ರಗಳನ್ನು ನಿಜವಾದ ಕಲಾವಿದನ ದೃಷ್ಟಿಯಿಂದ ಪರಿಶೀಲಿಸಿದ ಅವರು, ಕಲೆ ಮಕ್ಕಳ ಅಂತರಂಗದ ಭಾಷೆ. ಬಣ್ಣಗಳ ಮೂಲಕ ಅವರು ತಮ್ಮ ಕಲ್ಪನೆ, ಭಾವನೆ ಮತ್ತು ಸಂವೇದನೆಗಳನ್ನು ಅದ್ಭುತವಾಗಿ ಹೊರಹಾಕುತ್ತಾರೆ. ಇಂತಹ ಸ್ಪರ್ಧೆಗಳು ಅವರ ಚಿಂತನೆಗೆ ಚೈತನ್ಯ ತುಂಬುತ್ತವೆ ಎಂದು ಪ್ರಶಂಸಿಸಿದರು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಬಣ್ಣ ಸಮತೋಲನ, ವಿಷಯಾಭಿವ್ಯಕ್ತಿ, ನವೀನ ಕಲ್ಪನೆ ಮತ್ತು ನಿಪುಣ ಚಿತ್ರಣ ವಿಶೇಷ ಗಮನ ಸೆಳೆಯಿತು. ದೇಸಾಯಿ ಅವರು ಭಾರತೀಯ ಕಲೆಯ ಪರಂಪರೆ, ಅದರ ಸೌಂದರ್ಯ ಮತ್ತು ಇಂದಿನ ಪೀಳಿಗೆಗೆ ಕಲೆಯ ಅಗತ್ಯತೆಯ ಬಗ್ಗೆ ಮಕ್ಕಳಿಗೆ ಪ್ರೇರಣಾದಾಯಕ ಸಲಹೆಗಳನ್ನು ನೀಡಿದರು.
ಅತ್ಯುತ್ತಮ ಚಿತ್ರಗಳನ್ನು ರಚಿಸಿದ ಕುಮಾರಿ ಲಿಮಾ ಗೌಡರವರಿಗೆ ವಿಶೇಷ ಟ್ರೋಫಿ ಮತ್ತು ನಗದು ಬಹುಮಾನ ಪ್ರದಾನ ಮಾಡಲಾಯಿತು. ಇತರೆ ಹಲವು ವಿಭಾಗಗಳಲ್ಲಿ ಮಿಂಚಿದ ಮಕ್ಕಳಿಗೂ ಪ್ರಶಸ್ತಿ, ಪ್ರಮಾಣಪತ್ರ ಮತ್ತು ಅಭಿನಂದನೆ ಸಲ್ಲಿಸಲಾಯಿತು. ಶಾಲೆಯ ನಿರ್ದೇಶಕಿ ಆಯಿಷಾ ಜಹರ, ಅಧ್ಯಕ್ಷ ಸೈಯದ್ ಜಲೀಲ್, ಕಾರ್ಯದರ್ಶಿ ನದೀಮ್ ಪಾಷ, ಮತ್ತು ಸಂಪೂರ್ಣ ಶಿಕ್ಷಕ ವೃಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದಕ್ಕಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೃತಜ್ಞತೆ ತಿಳಿಸಿದರು.