ಅಂಬೇಡ್ಕರ್‌ ಆಶಯಗಳನ್ನು ಈಡೇರಿಸುವಲ್ಲಿ ಪಕ್ಷಗಳು ವಿಫಲ

KannadaprabhaNewsNetwork |  
Published : Dec 09, 2025, 12:45 AM IST
8ಎಚ್ಎಸ್ಎನ್19 : ಬೇಲೂರು ಪಟ್ಟಣದಲ್ಲಿ  ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ಅಂಬೇಡ್ಕರ್ ಅವರು ಬಯಸಿದಂತೆ ಈ ದೇಶದ ಆಡಳಿತ ನಡೆಯುತ್ತಿಲ್ಲ ಬದಲಾಗಿ ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಕೋಮುವಾದದ ಮೂಲಕ ಆಡಳಿತ ಯಂತ್ರವನ್ನು ದುಸ್ಥಿತಿಗೆ ತಳ್ಳಿವ ಮೂಲಕ ಈ ದೇಶದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಜನಸಾಮಾನ್ಯರ ಗಂಭೀರ ಸಮಸ್ಯಗಳಾದ ಬಡತನ, ನಿರುದ್ಯೋಗ, ವಸತಿ ಸಮಸ್ಯೆ, ರೈತರ ಸಮಸ್ಯೆ, ಕಾಡಾನೆ ಜೊತೆಗೆ ಇತರೆ ಸಮಸ್ಯೆ ಗಮನಹರಿಸದೇ ಕೇವಲ ಕುರ್ಚಿಗಾಗಿ ಕಿತ್ತಾಡುತ್ತಾ ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಆಶಯಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿ ಸಂವಿಧಾನದತ್ತವಾಗಿ ಕೊಡುವ ಹಕ್ಕು ಅವಕಾಶಗಳನ್ನು ಎಲ್ಲಾ ಸಮುದಾಯಗಳಿಗೂ ತಲುಪಿಸಿ ಶೋಷಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಮ್ಮ ದೇಶವನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಗಂಗಾಧರ್‌ ಬಹುಜನ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಬಯಸಿದಂತೆ ಈ ದೇಶದ ಆಡಳಿತ ನಡೆಯುತ್ತಿಲ್ಲ ಬದಲಾಗಿ ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಕೋಮುವಾದದ ಮೂಲಕ ಆಡಳಿತ ಯಂತ್ರವನ್ನು ದುಸ್ಥಿತಿಗೆ ತಳ್ಳಿವ ಮೂಲಕ ಈ ದೇಶದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಜನಸಾಮಾನ್ಯರ ಗಂಭೀರ ಸಮಸ್ಯಗಳಾದ ಬಡತನ, ನಿರುದ್ಯೋಗ, ವಸತಿ ಸಮಸ್ಯೆ, ರೈತರ ಸಮಸ್ಯೆ, ಕಾಡಾನೆ ಜೊತೆಗೆ ಇತರೆ ಸಮಸ್ಯೆ ಗಮನಹರಿಸದೇ ಕೇವಲ ಕುರ್ಚಿಗಾಗಿ ಕಿತ್ತಾಡುತ್ತಾ ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರು ಮಾಧ್ಯಮದವರೊಂದಿಗೆ ಮಾತಾಡುತ್ತಾ ಕರ್ನಾಟಕದ ರಾಜ್ಯದ ಸಿಎಂ ಬದಲಾವಣೆ ವಿಚಾರ ನನ್ನ ವ್ಯಾಪ್ತಿಯಲ್ಲಿ ಇಲ್ಲ, ಅದು ನಮ್ಮ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳುವ ಮೂಲಕ ನಾನು ನಾಮಮಾತ್ರ ರಾಷ್ಟ್ರೀಯ ಅಧ್ಯಕ್ಷ ಎಂದು ಅಸಹಾಯಕತೆ ತೋರಿದ್ದಾರೆ. ಇದರಿಂದ ಅರ್ಥವಾಗುದೇನೆಂದರೆ ಕಾಂಗ್ರೆಸ್ ಬಿಜೆಪಿ ಪಕ್ಷಗಳಲ್ಲಿ ಶೋಷಿತ ಸಮುದಾಯಗಳಿಗೆ ತಮ್ಮ ಪಕ್ಷಗಳಲ್ಲಿ ಹುದ್ದೆಗಳನ್ನು ನೀಡುತ್ತಾರೆಯೇ ವಿನಃ ಅಧಿಕಾರ ನೀಡುವುದಿಲ್ಲ ಎಂಬುದು ಖರ್ಗೆಯವರ ವಿಷಯದಲ್ಲಿ ನಿಜವಾಗಿದೆ ಎಂದು ವ್ಯಂಗ್ಯವಾಡಿದರು.

ಈ ಸಂಧರ್ಭದಲ್ಲಿ ಬಿಎಸ್ಪಿ ಜಿಲ್ಲಾ ಉಸ್ತುವಾರಿ ಎಚ್. ಬಿ. ಮಲ್ಲಯ್ಯ, ಜಿಲ್ಲಾ ಕಾರ್ಯದರ್ಶಿಗಳಾದ ರಾಜು ಬೆಳ್ಳೊಟ್ಟೆ, ಕಿರಣ್ ಕುಮಾರ್‌, ತಾಲೂಕು ಸಂಯೋಜಕ ಉಮೇಶ್, ತಾಲೂಕು ಉಪಾಧ್ಯಕ್ಷ ನಿಂಗರಾಜ್, ಜಿಲ್ಲಾ ಬಿವಿಎಫ್ ಸಂಯೋಜಕ ಹೇಮಂತ್ ನಿಟ್ಟೂರು, ರವಿಕುಮಾರ್ ಎಂ.ಕೆ. ತಾಲೂಕು ಮುಖಂಡರಾದ ಶ್ರೀನಾಥ್ ಮುದಿಗೆರೆ, ರವಿ ಮುದಿಗೆರೆ, ನಿರಂಜನ್, ನಾಗೇಂದ್ರ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಯೋಗಕ್ಕೆ ಸಲ್ಲಿಕೆಯಾದ ಅರ್ಜಿಗಳು ಜಿಲ್ಲಾ, ತಾಲೂಕುಗಳಿಗೆ ವಿಂಗಡಣೆ: ಡಾ.ಎಲ್.ಮೂರ್ತಿ
ಕಾಫಿ ಕುಡಿಯುತ್ತಾ ಜನರ ಸಮಸ್ಯೆ ಆಲಿಸಿದ ಮಂಜು