ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ದ್ವಿತೀಯ ವರ್ಷದ ಹನುಮೋತ್ಸವ ಬೆಳಿಗ್ಗೆ ೮ ಗಂಟೆಯ ಶುಭಲಗ್ನದಲ್ಲಿ ಶ್ರೀಯವರಿಗೆ ಪೂಜೆ ಹಾಗೂ ಉತ್ಸವ ಪ್ರಾರಂಭಗೊಳ್ಳಲಿದ್ದು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವೈಭವದ ಬೃಹತ್ ಮೆರವಣಿಗೆ ನಡೆಯಲಿದೆ ಹಾಗೂ ತಾಲೂಕು ಕಚೇರಿ ಮುಂಭಾಗದ ಗಣಪತಿ ಪೆಂಡಾಲಿನಲ್ಲಿ ಮಧ್ಯಾಹ್ನ ೧ ಗಂಟೆಯಿಂದ ಪ್ರಸಾದ ವಿತರಣೆ ಇರುತ್ತದೆ.
ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಮುಂಬಾಗದ ವಿಶೇಷ ವೇದಿಕೆಯಲ್ಲಿ ಸಂಜೆ ೪ ಗಂಟೆಯಿಂದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಏರ್ಪಡಿಸಿದ್ದು, ಪ್ರಥಮ ಬಹುಮಾನ ೩೦ ಸಾವಿರ ರು., ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ೨೦ ಸಾವಿರ ರು., ಆಕರ್ಷಕ ಟ್ರೋಫಿ, ತೃತೀಯ ಬಹುಮಾನ ೧೦ ಸಾವಿರ ರು., ಆಕರ್ಷಕ ಟ್ರೋಫಿ, ನಾಲ್ಕನೇ ಬಹುಮಾನ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಪ್ರವೇಶ ಶುಲ್ಕ ಐನೂರು ರು. ನಿಗದಿಪಡಿಸಿರುವ ಜತೆಗೆ ಸ್ಪರ್ಧೆಗೆ ನಿಯಮಗಳನ್ನು ರೂಪಿಸಿದ್ದು, ಹೆಚ್ಚಿನ ಮಾಹಿತಿಗೆ ೯೬೩೨೫೨೬೬೬೦ ಹಾಗೂ ೮೯೭೧೯೯೩೩೬೯ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.