ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಭಾನುವಾರ ರಾತ್ರಿ ಸಿಂಸೆಯ ಕನ್ಯಕುಮಾರಿ ಕಂಪರ್ಟ್ ಹಾಲ್‌ನಲ್ಲಿ ನಡೆದ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ನೂತನ ಅಧ್ಯಕ್ಷ ಆದರ್ಶ ಬಿ ಗೌಡ, ಕಾರ್ಯದರ್ಶಿ ರಜಿತ್ ವಗ್ಗಡೆ ಹಾಗೂ ನೂತನ ಪದಾಧಿಕಾರಿಗಳು, ನಿರ್ದೇಶಕರಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು.
ಜೇಸಿ ಸಂಸ್ಥೆಯಲ್ಲಿ ಹೊಸ ಚಿಂತನೆಗಳು ಪ್ರಾರಂಭವಾಗಿದ್ದು ಅನೇಕ ಬದಲಾವಣೆ ತರುತ್ತಿದ್ದೇವೆ. 115 ವರ್ಷದಿಂದ ಇದ್ದ ಜೇಸಿ ಲೋಗೋ ಬದಲಾಯಿಸಿದ್ದೇವೆ. ಜೇಸಿ ಸಂಸ್ಥೆಯ ಸದಸ್ಯರಿಗೆ ಅಂತಾರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಲು ಒಳ್ಳೆಯ ಅವಕಾಶ ಸಿಗಲಿದೆ. ಜೇಸಿ ಸಂಸ್ಥೆಯು ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿದೆ. ಜೇಸಿ ಸಂಸ್ಥೆಯು ಸದಸ್ಯರಿಗೆ ಜೀವನದ ಮೌಲ್ಯ ಕಲಿಸುತ್ತದೆ. ನಾಯಕತ್ವ ಗುಣ ಕಲಿಸುತ್ತದೆ. ಜೀವನ ಎಂಬುದು ಒಂದೇ ಬಾರಿ ಸಿಗುತ್ತದೆ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.ಮಂಡಗದ್ದೆಯ ಅರೆಕಾ ಟೀ ಸಂಸ್ಥಾಪಕ ನಿವೇದನ್ ನೆಂಪೆ ಮಾತನಾಡಿ, ಅನ್ನಕ್ಕೆ, ಹಸಿವಿಗೆ ಜಾತಿ, ಧರ್ಮಗಳಿರುವುದಿಲ್ಲ. ಮಾನವೀಯತೆಯೇ ಧರ್ಮವಾಗಿದೆ.ಜೀವನದಲ್ಲಿ ಸಾಧನೆ ಮಾಡಲು ಹೋರಟಾಗ ಟೀಕೆ, ಟಿಪ್ಪಣಿಗಳು ಸಹಜವಾಗಿ ಬರುತ್ತದೆ.ಅದನ್ನು ಮೀರಿ ದೊಡ್ಡ ಕನಸು ಕಂಡು ಅದನ್ನು ಸಾಕಾರಗೊಳಿಸಲು ಪ್ರಯತ್ನ ಮಾಡಬೇಕು.ಗುರಿ ಇಟ್ಟುಕೊಂಡು ಜೀವನದಲ್ಲಿ ಮುನ್ನೆಡೆಯಬೇಕು.ಅಡೆ,ತಡೆಗಳನ್ನು ಮೆಟ್ಟಿ ನಿಂತು ಆತ್ಮ ವಿಶ್ವಾಸ ಬೆಳೆಸಿಕೊಂಡು ಮುಂದುವರಿಯಬೇಕು. ಜೀವನದಲ್ಲಿ ಸೋಲೇ ಗೆಲುವಿನ ಮೆಟ್ಟಲುಗಳು. ಯಾವ ರಂಗದಲ್ಲಿ ನಾವು ಸೋಲುತ್ತೇವೋ ಅಲ್ಲೇ ಮತ್ತೆ ಹುಡುಕಿ ಪ್ರಯತ್ನ ಮಾಡಿದರೆ ಗೆಲುವು ನಮ್ಮದಾಗಲಿದೆ ಎಂದರು.
ಜೇಸಿ ಸಂಸ್ಥೆಯ 2023ರ ವಲಯಾಧ್ಯಕ್ಷೆ, 2026ರ ರಾಷ್ಟೀಯ ಸಂಯೋಜಕಿ ಯಶಸ್ವಿನಿ ಮಾತನಾಡಿ, ಜೇಸಿ ಸಂಸ್ಥೆಗೆ ಸೇರಿದರೆ ಜೀವನದಲ್ಲಿ ಬೆಳೆಯಲು ಸಾದ್ಯವಾಗುತ್ತದೆ. ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ.ಸದಸ್ಯರ ಸರ್ವತೋಮುಖ ಬೆಳವಣಿಗೆಯಾಗಲಿದೆ.ನಿರಂತರವಾಗಿ ಕಲಿಕೆಗೆ ಅವಕಾಶ ಸಿಗಲಿದೆ.ಜೇಸಿ ಸಂಸ್ಥೆಗಳಲ್ಲಿ ಹೊಸಬರಿಗೆ ಸದಾ ಅವಕಾಶ ನೀಡುತ್ತೇವೆ ಎಂದರು. ಜೇಸಿ ಸಂಸ್ಥೆಯ ಅಧ್ಯಕ್ಷ ಸಾರ್ಥಕ ಗೌಡ ಮಾತನಾಡಿದರು.ಕಾರ್ಯದರ್ಶಿ ಮಿಥುನ್ ಗೌಡ ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ಸುಬೇದಾರ್ ಪ್ಯಾಟ್ರಿಕ್ ಪ್ರದೀಪ್, ಪ್ರಗತಿಪರ ಮಹಿಳಾ ಕೃಷಿಕರಾದ ಕೆ.ಸಿ.ಭಾರತಿ ಅವರನ್ನು ಸನ್ಮಾನಿಸಲಾಯಿತು. ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಮಾನ್ಯ ಕಾರ್ಯಕ್ರಮ ನಿರೂಪಿಸಿದರು.
ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆದರ್ಶ ಬಿ.ಗೌಡ ಹಾಗೂ ಕಾರ್ಯದರ್ಶಿಯಾಗಿ ರಜಿತ್ ವಗ್ಗಡೆ ಅಧಿಕಾರಿ ಸ್ವೀಕಾರ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಜೇಸಿ ನಿಕಟಪೂರ್ವ ಅಧ್ಯಕ್ಷ ಮನು ಎಂ.ಪಿ. ವಹಿಸಿದ್ದರು. ಅತಿಥಿಗಳಾಗಿ ಜೇಸಿ ಸಂಸ್ಥೆಯ ವಲಯ 14 ರ ಪ್ರಾಂತ್ಯ ಎ ವಲಯ ಉಪಾಧ್ಯಕ್ಷ ವಿ.ಎಸ್.ಅಶೋಕ್,ಜೇಸಿ ಕಾರ್ಯದರ್ಶಿ ಮಿಥುನ್ ಗೌಡ, ಕಾರ್ಯಕ್ರಮ ನಿರ್ದೇಶಕ ಜೆ.ಎನ್.ವಿನಯ, ಜೇಸಿ ರೆಟ್ ಅಧ್ಯಕ್ಷೆ ನಿಶ್ಮಿತಾ,ಜೂನಿಯರ್ ಜೇಸಿ ಅಧ್ಯಕ್ಷೆ ಆಶ್ಮಿತ ಎ.ಗೌಡ ಇದ್ದರು.