ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶ್ರೀ ಮಂಜುನಾಥ ಕಲಾ ಸಂಘದ ವತಿಯಿಂದ ಏರ್ಪಡಿಸಿದ್ದ ದಾನ ವೀರ ಶೂರ ಕರ್ಣ ಪೌರಾಣಿಕ ನಾಟಕ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಹಾಗೂ ಜಿಲ್ಲೆಯ 35 ಮಂದಿ ಕಲಾ ಸಾಧಕರನ್ನು ಗೌರವಿಸಿ ಅವರು ಮಾತನಾಡಿದರು.
ಹಲವಾರು ಕಲಾವಿದರ ಹುಟ್ಟು ಹಾಕಿ ನಾಡಿಗೆ ಕೊಡುಗೆಯಾಗಿ ನೀಡಿದ ಡಾ. ಗುಬ್ಬಿ ವೀರಣ್ಣನವರ ಹೆಸರು ಎಷ್ಟು ವರ್ಷ ಕಳೆದರೂ ಜನಮನದಲ್ಲಿ ಹಚ್ಚ ಹಸಿರಾಗಿ ಉಳಿದಿರುತ್ತದೆ. ಕಲಾವಿದನಿಗೆ ದೈಹಿಕವಾಗಿ ಸಾವಿದ್ದರೂ ಕಲೆಗೆ ಎಂದೂ ಸಾವಿಲ್ಲ ಎಂದರು.ಕಲಾವಿದರಿಗೆ ಜೀವಮಾನದುದ್ದಕ್ಕೂ ಸಾಧನೆ ಮಾಡಲು ಅವಕಾಶ ಇರುತ್ತದೆ. ಆದರೆ ರಾಜಕಾರಣಿಗಳಿಗೆ ಅಧಿಕಾರದಲ್ಲಿದ್ದಾಗ ಮಾತ್ರ ತೂಕ ಇರುತ್ತದೆ. ಇದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಕಲಾವಿದ ಎಂ.ವಿ. ನಾಗಣ್ಣ ಮಾತನಾಡಿ, ಕಲಾವಿದರನ್ನು ಹೆಚ್ಚಿನ ರೀತಿಯಲ್ಲಿ ಗುರುತಿಸಿ ಸನ್ಮಾನ ಮಾಡಿರುವ ಕಾರ್ಯ ಉತ್ತಮವಾಗಿದೆ. ಇದು ಮಂಜುನಾಥ ಕಲಾ ಸಂಸ್ಥೆಗೆ ಕಲಾವಿದರ ಮೇಲಿರುವ ಗೌರವವನ್ನು ತೋರಿಸುತ್ತದೆ ಎಂದರು.
ಮುಖಂಡರಾದ ಹೊನ್ನಗಿರಿಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಪೌರಾಣಿಕ ನಾಟಕಗಳ ಪರಿಚಯ ಮಾಡಿಕೊಡಬೇಕು. ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯುವ ಸ್ಥಳಕ್ಕೆ ಮಕ್ಕಳನ್ನು ಕರೆದೊಯ್ದು ತೋರಿಸಬೇಕು ಎಂದು ಸಲಹೆ ನೀಡಿದರು.
ಇಂದಿಗೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳನ್ನು ಅಭಿನಯಿಸುತ್ತಾರೆ. ವರ್ಷಕ್ಕೊಮ್ಮೆ ಹಾಗೂ ಊರಿನ ಹಬ್ಬದ ಸಮಯದಲ್ಲಿ ನಾಟಕವನ್ನು ಕಲಿತು ಪ್ರದರ್ಶಿಸುವ ಕಾರ್ಯವನ್ನು ಗ್ರಾಮೀಣ ಜನತೆ ಮಾಡುತ್ತಿದ್ದಾರೆ. ಅದೇ ರೀತಿಯ ನಗರ ಪ್ರದೇಶಗಳಲ್ಲೂ ಸಹ ಜನತೆ ನಾಟಕ ಕಲೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊನ್ನಗಿರಿಗೌಡ, ವೈ.ಎನ್. ಶಿವಣ್ಣ, ಯೋಗಾನಂದಕುಮಾರ್, ಶೆಟ್ಟಳ್ಳಯ್ಯ, ಮಂಜುಳ, ನಾಗಣ್ಣ, ವಸಂತಕುಮಾರ್, ಮಹದೇವಣ್ಣ, ವೆಂಕಟೇಶ್, ನಂಜಪ್ಪಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.