- ಗಾಂಧಿ ಬಜಾರ್‌ನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ವಾಸವಿ ಮಾತೆ ಮೆರವಣಿಗೆ - ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಬಾಂಧವರು ಭಾಗಿ - ಭಜನೆ, ಕನ್ನಡ ರಾಜ್ಯೋತ್ಸವದ ವಿಶೇಷ ಬಾವುಟಗಳ ಪ್ರದರ್ಶನದೊಂದಿಗೆ ಮೆರವಣಿಗೆ - ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಉದ್ಘಾಟಿಸಲಿರುವ ಶಾಸಕ ಎಸ್.ಎನ್. ಚನ್ನಬಸಪ್ಪ - ವಿಪ ಸದಸ್ಯ ಡಿ.ಎಸ್.ಅರಣ್‌ರಿಂದ ಸಮಾಜದ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಕಿರುಪತ್ರ ಬಿಡುಗಡೆ - ಬೆಂಗಳೂರು ಮಹಾರಾಣಿ ಕಾಲೇಜಿನ ಪ್ರೊ. ಶೋಭಾ ಭೀಮಸೇನ್ ಅವರಿಂದ ವಿಶೇಷ ಉಪನ್ಯಾಸ - - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ಅಖಿಲ ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾ ಹಾಗೂ ಶಿವಮೊಗ್ಗ ವಾಸವಿ ಮಹಿಳಾ ಸಂಘಗಳ ಸಹಯೋಗದಲ್ಲಿ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ನ.1ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಚಿತ್ರದುರ್ಗ ಮತ್ತು ದಾವಣಗೆರೆ ಈ 5 ಜಿಲ್ಲೆಗಳ ಆರ್ಯವೈಶ್ಯ ಮಹಿಳಾ ಸಮಾವೇಶ ನಡೆಯಲಿದೆ. ಪ್ರೆಸ್ ಟ್ರಸ್ಟ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ರಾಧಿಕಾ ಜಗದೀಶ್ ಮಾತನಾಡಿ, ಸಮಾವೇಶ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಗಾಂಧಿ ಬಜಾರ್‌ನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ವಾಸವಿ ಮಾತೆ ಮೆರವಣಿಗೆ ಆರಂಭಗೊಂಡು ಶಿವಪ್ಪ ನಾಯಕ ವೃತ್ತ ಮೂಲಕ ಅಂಬೇಡ್ಕರ್ ಭವನ ತಲುಪಲಿದೆ. ಈ ಮೆರವಣಿಗೆಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡುವರು. ವಿಶೇಷವಾಗಿ ಭಜನೆ ಹಾಗೂ ಕನ್ನಡ ರಾಜ್ಯೋತ್ಸವದ ವಿಶೇಷ ಬಾವುಟಗಳ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ವಿವರಿಸಿದರು. ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣ್ ಆರ್ಯವೈಶ್ಯ ಸಮಾಜದ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಕಿರುಪತ್ರವನ್ನು ಬಿಡುಗಡೆ ಮಾಡುವರು. ಆರ್ಯವೈಶ್ಯ ಮಹಾಜನ ಸಮಿತಿ ಅಧ್ಯಕ್ಷ ಎಸ್.ಕೆ. ಶೇಷಾಚಲ, ಅರಸಿಕೆರೆ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಅರುಣಕುಮಾರ್ ಭಾಗವಹಿಸಿದ್ದಾರೆ ಎಂದು ತಿಳಿಸಿದರು. ಸಮಾವೇಶದಲ್ಲಿ ಬೆಂಗಳೂರು ಮಹಾರಾಣಿ ಕಾಲೇಜಿನ ಪ್ರೊ. ಶೋಭಾ ಭೀಮಸೇನ್ ವಿಶೇಷ ಉಪನ್ಯಾಸ ನೀಡುವರು. ಧನ್ವಂತ್ರಿ ಯೋಜನೆ ಬಗ್ಗೆ ಆರ್ಯವೈಶ್ಯ ಮಹಿಳಾ ಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣಾ ಸಿರಿಗೆರೆ, ಆರೋಗ್ಯ ಸಿರಿ ಯೋಜನೆ ಬಗ್ಗೆ ರಾಜ್ಯ ಖಜಾಂಚಿ ವಿದ್ಯಾ, ಉದ್ಯೋಗ ಮಿತ್ರದ ಬಗ್ಗೆ ಮಹಾಸಭಾ ಪ್ರಧಾನ ಸಂಪಾದಕಿ ಶಕುಂತಲಾ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಯೋಜನೆಗಳ ಬಗ್ಗೆ ರಾಜ್ಯ ಉಪಾಧ್ಯಕ್ಷೆ ಉಮಾ ಸಾಯಿರಾಮ್, ನಮ್ಮ ಯುವಪೀಳಿಗೆಯ ಬಗ್ಗೆ ಶಿವಮೊಗ್ಗದ ಪ್ರತಿಭಾ ಅರುಣ್ ಮತ್ತು ಶಾರದಾ ಗೋಪಾಲ್ ಮಾಹಿತಿ ನೀಡುವರು ಎಂದು ವಿವರಿಸಿದರು. ಇದೇ ಸಂದರ್ಭ ರಸಪ್ರಶ್ನೆ ಕಾರ್ಯಕ್ರಮ, ಮಹಿಳಾ ಸಂಘದ ಅಧ್ಯಕ್ಷರಿಗೆ ಸನ್ಮಾನ ಸಹ ಜರುಗಲಿದೆ. ಕಾರ್ಯಕ್ರಮದಲ್ಲಿ ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಅಧ್ಯಕ್ಷ ಡಿ.ಎಂ ಅರವಿಂದ, ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿ ನಿರತರ ಸಂಘದ ಅಧ್ಯಕ್ಷ ಎಚ್.ಜಿ. ದತ್ತಕುಮಾರ್, ವಾಸವಿ ಯುವಜನ ಸಂಘದ ಅಧ್ಯಕ್ಷ ಈಶ್ವರ ಬೂದಾಳ್ ಉಪಸ್ಥಿತರಿರುವರು ಎಂದರು. ಸುದ್ದಿಗೋಷ್ಟಿಯಲ್ಲಿ ವಾಸವಿ ಮಹಿಳಾ ಸಂಘ ಕಾರ್ಯದರ್ಶಿ ರಂಜನಾ ಶ್ರೀರಾಮ್, ಖಜಾಂಚಿ ವಿಜಯಾ ದತ್ತಕುಮಾರ್ ಮತ್ತಿತರರು ಇದ್ದರು. - - - (-ಸಾಂದರ್ಭಿಕ ಚಿತ್ರ)