ಕನ್ನಡಪ್ರಭ ವಾರ್ತೆ ಹುಣಸೂರು
ತಹಸೀಲ್ದಾರ್ ಜೆ. ಮಂಜುನಾಥ್ ಮಾತನಾಡಿ, ನೇರ ನಡೆ, ನುಡಿಯಂತಹ ವ್ಯಕ್ತಿತ್ವದೊಂದಿಗೆ ಅರಸು ರಾಜ್ಯದ ಬಡ, ಶೋಷಿತರ ಬಾಳಿಗೆ ಬೆಳಕಾದರು. ಚುನಾವಣಾ ರಾಜಕಾರಣದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆದರು ಎಂದು ಸ್ಮರಿಸಿದರು.
ಕಲ್ಲಹಳ್ಳಿ ಗ್ರಾಪಂ ಅದ್ಯಕ್ಷ ರಾಜಶೇಖರ್ ಮಾತನಾಡಿ, ಅರಸು ಜನ್ಮಜಯಂತಿ ಕಾರ್ಯಕ್ರಮದ ಕುರಿತು ಗ್ರಾಪಂಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಊರಿನಲ್ಲಿ ಕಾರುಗಳು ಬಂದು ನಿಂತಾಗಲಷ್ಟೇ ಇಂದು ಅರಸು ಕಾರ್ಯಕ್ರಮ ಎನ್ನುವ ಅರಿವು ನಮಗೆ ಉಂಟಾಗುತ್ತಿದೆ. ತಾಲೂಕು ಆಡಳಿತ ಒಂದು ದಿನದ ಕಾರ್ಯಕ್ರಮಕ್ಕೆ ಅರಸು ಜಯಂತಿ ಸೀಮಿತಗೊಳಿಸಿರುವುದು ಸರಿಯಲ್ಲ. ಮುಂದಿನ ವರ್ಷದಿಂದ ಪೂರ್ವಭಾವಿ ಸಭೆ ನಡೆಸಿ ನಮ್ಮೆಲ್ಲರ ಅಭಿಪ್ರಾಯ ಪಡೆದು ಕಾರ್ಯಕ್ರಮ ನಡಸಬೇಕೆಂದು ಒತ್ತಾಯಿಸಿದರು.ಅರಸು ಪುತ್ಥಳಿ ಆವರಣದಲ್ಲಿ:
ಪಟ್ಟಣದ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಕುಮಾರ್ ಮಾತನಾಡಿ, ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಸಮುದಾಯಗಳಿಗ ರಾಜಕೀಯ ಅಧಿಕಾರ ನೀಡುವ ಮೂಲಕ ದೇವರಾಜ ಅರಸು ಸಮಾಜದಲ್ಲಿ ಸಮಾನತೆಯ ಕನಸು ಕಂಡರು. ಸಾಮಾಜಿಕ ನ್ಯಾಯ ಅವರ ರಾಜಕೀಯ ಮಂತ್ರವಾಗಿತ್ತು. ಬುದ್ಧ, ಬಸವ, ಅಂಬೇಡ್ಕರ್‌ರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಆಡಳಿತ ನಡಸಿದರು ಎಂದು ಸ್ಮರಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರತಿಭಾ ಪುರಸ್ಕಾರ ನಡೆಯಿತು. ಎಸಿ ಎಚ್.ಬಿ. ವಿಜಯಕುಮಾರ್, ತಹಸೀಲ್ದಾರ್ ಜೆ. ಮಂಜುನಾಥ್, ಮುಖಂಡರಾದ ಹೊನ್ನಪ್ಪ, ಚಿಕ್ಕಣ್ಣ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹದೇವ್, ಎ.ಪಿ. ಸ್ವಾಮಿ ಇದ್ದರು.