ಕನ್ನಡಪ್ರಭ ವಾರ್ತೆ ಮೈಸೂರು ಗಳಿಸಿದ ಜ್ಞಾನವನ್ನು ದೇಶಸೇವೆಗೆ ಬಳಸದಿದ್ದರೆ ಅವನೇ ಪ್ರಥಮ ದೇಶದ್ರೋಹಿ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಹೇಳಿದರು.ಶರಣು ವಿಶ್ವವಚನ ಫೌಂಡೇಶನ್ ನಿಂದ ಬೋಗಾದಿಯ ದೀಪನಗರದ ದೀಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಹಾರನಹಳ್ಳಿ ಬಸವಣ್ಣ ಮತ್ತು ಗುರುಸಿದ್ಧಮ್ಮ ಅವರ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ 127ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಾಧ್ಯವಾಯಿತು ಎಂದರು.ನಿವೃತ್ತ ಪ್ರಾಂಶುಪಾಲ ಎಚ್.ಬಿ. ಓಂಕಾರಯ್ಯ ಅವರು ಸಮಾಜದಲ್ಲಿ ಸುಧಾರಕರು ಕೆಲವರಿದ್ದರೆ, ದಾರಿ ತಪ್ಪುತ್ತಿರುವವರು ಅನೇಕರಿದ್ದಾರೆ. ಇಂತಹ ಅನೇಕರನ್ನು ಸುಧಾರಣೆ ಮಾಡಲು ಬಸವಾದಿ ಶರಣರು ಈ ಭೂಮಿಯಲ್ಲಿ ಅವತರಿಸಿ, ವಚನಗಳ ಮೂಲಕವೇ ಕ್ರಾಂತಿಕಾರಿ ಸುಧಾರಣೆಯನ್ನು ತಂದರು ಎಂದು ತಿಳಿಸಿದರು.ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಮಾತನಾಡಿ, ಬಸವಣ್ಣನವರ ಸಪ್ತ ಸೂತ್ರಗಳನ್ನು ಮಕ್ಕಳಿಗೆ ಸಾಮೂಹಿಕವಾಗಿ ಹೇಳಿಕೊಟ್ಟು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನಗಳನ್ನುಬದುಕಿಗೆ ದಾರಿ ತೋರುವ ದೀಪಸ್ತಂಭಕ್ಕೆ ಹೋಲಿಸಿ, ಏಕಾಗ್ರತೆಯನ್ನು ರೂಡಿಸಿಕೊಳ್ಳಲು ಶರಣರ ವಚನಗಳನ್ನುಅಭ್ಯಸಿಸಲು ತಿಳಿಸಿದರು.ವಚನ ದೀವಿಗೆ ಪ್ರಮಾಣಪತ್ರ ಹಾಗೂ ವಚನ ಶಾಲೆ, ; ಪುಸ್ತಕವನ್ನು ವಿತರಿಸಲಾಯಿತು.ಶಾಲೆಯ ಮುಖ್ಯ ಶಿಕ್ಷಕ ಬಾಬು ಅವರು ಸ್ವಾಗತಿಸಿದರು, ಶಿಕ್ಷಕಿ ಅಶ್ವಿನಿ ನಿರೂಪಿಸಿದರು. ಪೂರ್ಣಿಮಾ ವಂದಿಸಿದರು. ಪೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಶಿಕ್ಷಕರುಗಳಾದ ಜಿ. ಸರ್ವೇಶ್, ಮಹದೇವಯ್ಯ, ಉಮಾಮಹೇಶ್ವರಿ, ಚಂದ್ರಿಕಾ, ನೇತ್ರಾವತಿ, ಪ್ರತಿಭಾ, ರಾಧಿಕಾ, ಚೈತ್ರ, ಸೌಮ್ಯ ಇದ್ದರು.