ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ

KannadaprabhaNewsNetwork |  
Published : Jul 05, 2026, 01:15 AM IST
9 | Kannada Prabha

ಸಾರಾಂಶ

ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಆಗಬೇಕು. ಮಸೀದಿ, ಚೌಲ್ಟ್ರಿಯಲ್ಲಿ ಕುಳಿತು ಎಸ್ಐಆರ್ ಪ್ರಕ್ರಿಯೆ ಏಕೆ ಮಾಡುತ್ತಿದ್ದಾರೆ? ಮನೆ ಮನೆಗೆ ಹೋಗಿ ಏಕೆ ಪರಿಶೀಲನೆ ಮಾಡುತ್ತಿಲ್ಲ‌

ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಬಾಂಗ್ಲಾ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಹುನ್ನಾರ ನಡೆದಿದೆ ಎಂದು ದೂರಿದರು.ರಾಮನಗರದಲ್ಲೂ ಅಕ್ರಮ ನಡೆದಿರುವ ಬಗ್ಗೆ ವೀಡಿಯೋ ಬಿಡುಗಡೆ ಮಾಡಲಾಗಿದೆ. ಮೈಸೂರಿನ ಎನ್.ಆರ್. ಕ್ಷೇತ್ರದಲ್ಲೂ ಅಕ್ರಮ ನಡೆಯುತ್ತಿದೆ. ವ್ಯವಸ್ಥೆಯ ದುರ್ಬಳಕೆ ಆಗುತ್ತಿದೆ. ಅಕ್ರಮ ವಲಸಿಗರು ಸಮಸ್ಯೆ ಆಗುತ್ತಿದ್ದಾರೆ. ಇದು ಜಾಗತಿಕ ಸಮಸ್ಯೆ ಆಗಿದೆ ಎಂದರು.ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಆಗಬೇಕು. ಮಸೀದಿ, ಚೌಲ್ಟ್ರಿಯಲ್ಲಿ ಕುಳಿತು ಎಸ್ಐಆರ್ ಪ್ರಕ್ರಿಯೆ ಏಕೆ ಮಾಡುತ್ತಿದ್ದಾರೆ? ಮನೆ ಮನೆಗೆ ಹೋಗಿ ಏಕೆ ಪರಿಶೀಲನೆ ಮಾಡುತ್ತಿಲ್ಲ‌ ಎಂದು ಅವರು ಪ್ರಶ್ನಿಸಿದರು.ಎನ್.ಆರ್. ಕ್ಷೇತ್ರದ ಇತಿಹಾಸ ಎಲ್ಲರಿಗೂ ತಿಳಿದೇ ಇದೆ. ಬಿಜೆಪಿಯವರು ಅಲ್ಲಿ ಬೂತ್ ಏಜೆಂಟರನ್ನು ನೇಮಿಸಲಾಗದ ಪರಿಸ್ಥಿತಿ ಇದೆ. ಕೆಲವು ಬೂತ್ ಗಳಿಗೆ ನಮ್ಮ ಏಜೆಂಟರು ಬರದಂತೆ ಬೆದರಿಕೆ ಹಾಕಲಾಗುತ್ತಿದೆ. ಅರ್ಹ ಮತದಾರರನ್ನು ಮಾತ್ರ ಮತದಾರರ ಪಟ್ಟಿಗೆ ಸೇರಿಸಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿಲ್ಲ ಎಂದರು. 1 ಲಕ್ಷ ಅನರ್ಹರ ಸೇರ್ಪಡೆ ಗುಮಾನಿಎನ್.ಆರ್. ಕ್ಷೇತ್ರ ಒಂದರಲ್ಲೇ ಸುಮಾರು ಒಂದು ಲಕ್ಷದಷ್ಟು ಅನರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಿರುವ ಗುಮಾನಿ ಇದೆ. ಹೀಗಾಗಿ, ಎನ್.ಆರ್. ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವ ಅನಿವಾರ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮಾಡಿದ್ದ ಕೆಲಸವನ್ನೇ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಎನ್.ಆರ್. ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಪೊಲೀಸ್ ಭದ್ರತೆಯ ಅಗತ್ಯವಿದೆ. ಎನ್.ಆರ್. ಕ್ಷೇತ್ರದಲ್ಲಿ ಸುಮಾರು 150 ಬೂತ್ ಗಳಿಗೆ ನಮ್ಮ ಏಜೆಂಟರು ಹೋಗಲಾಗುತ್ತಿಲ್ಲ‌. ಈ ಬಗ್ಗೆ ಶೀಘ್ರದಲ್ಲೇ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುತ್ತೇವೆ ಎಂದರು.ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡರಾದ ಮೋಹನ್, ಮಹೇಶ್ ರಾಜೇ ಅರಸ್ ಮೊದಲಾದವರು ಇದ್ದರು.----ಬಾಕ್ಸ್... ದಸರಾದಲ್ಲಿ ಕಂಬಳ ವಾಣಿಜ್ಯೀಕರಣ ಮಾಡೋದು ಸರಿಯಲ್ಲ- ಯದುವೀರ್ಈ ಬಾರಿಯ ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ದಸರಾ ಸಮಯದಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲ ಇರುತ್ತದೆ. ಅಂತಹದನ್ನು ಮೊದಲು ನಿವಾರಿಸಬೇಕು. ಕಂಬಳ ಒಂದು ಆಚರಣೆ, ಅದಕ್ಕೆ ಅದರದೇ ಆದ ನಂಬಿಕೆಯಿದೆ, ಧಾರ್ಮಿಕ ಹಿನ್ನೆಲೆಯಿದೆ. ಅದನ್ನು ಇಲ್ಲಿಗೆ ತಂದು ವಾಣಿಜ್ಯೀಕರಣ ಮಾಡೋದು ಸರಿಯಲ್ಲ ಎಂದರು.ಈಗ ಬರ ಪರಿಸ್ಥಿತಿ ಎದುರಾಗಿದೆ. ಸಿಎಂ ಅವರೇ ಅಣೆಕಟ್ಟು ನೀರು ನಂಬ್ಕೊಂಡು ಬೆಳೆ ಬೆಳೀಬೇಡಿ. ಡ್ಯಾಮ್ ನೀರು ನಂಬಿಕೊಳ್ಳಬೇಡಿ ಅಂತ ಹೇಳಿದ್ದಾರೆ. ಇಂತಹ ಸಮಯದಲ್ಲಿ ಕಂಬಳಕ್ಕೆ 8 ಕೋಟಿ ಖರ್ಚು ಮಾಡೋದು ಎಷ್ಟು ಸರಿ.ಇದು ಅವರಿಗೆ ಬಿಟ್ಟಿರುವ ವಿಚಾರ. ಈ ಹಿಂದೆ ಬರ ಬಂದಂತಹ ಸಂದರ್ಭದಲ್ಲಿ ಸರಳ ಹಾಗೂ ಸಂಪ್ರದಾಯಕವಾಗಿ ದಸರಾ ಆಚರಣೆ ಮಾಡುತ್ತಾ ಬಂದಿದ್ದಾರೆ. ಈ ಬಾರಿ ಬರ ಎದುರಾದರೆ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚರಿಸಲಿ ಎಂದು ಅವರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್ ಡಿಎನಿಂದ SIR ಅಧಿಕಾರಿಗಳಿಗೆ ಆತಂಕ: ಕಾಂಗ್ರೆಸ್ ಆರೋಪ
ಬಸ್ -ಟಿಪ್ಪರ್ ನಡುವೆ ಡಿಕ್ಕಿ: ಹಲವರಿಗೆ ಗಾಯ