ಕನ್ನಡಪ್ರಭ ವಾರ್ತೆ ಬೆಂಗಳೂರು
ಬನ್ನೇರುಘಟ್ಟದಲ್ಲಿರುವ ಸುಕಿನೋ ಕೇಂದ್ರದಲ್ಲಿ ಪ್ರಥಮ ಬಾರಿಗೆ ಹೈಡ್ರೋಥೆರಪಿ ಪರಿಚಯಿಸಲಾಗುತ್ತಿದ್ದು, ನರರೋಗ ಮತ್ತು ಮಾಂಸಖಂಡಗಳ ಸಮಸ್ಯೆ ಇರುವ ರೋಗಿಗಳ ಆರೈಕೆಯಲ್ಲಿ ಜನಪ್ರಿಯವಾಗಿದೆ. ಅಕ್ವಾಥೆರಪಿ ಎಂದೂ ಕರೆಯಲಾಗುವ ಈ ಚಿಕಿತ್ಸೆಯು ಬೆಚ್ಚಗಿನ ನೀರಿನಲ್ಲಿ ನಡೆಸುವ ಒಂದು ಬಗೆಯ ವ್ಯಾಯಾಮವಾಗಿದೆ.
ಹೈಡ್ರೋಥೆರಪಿಯ ಮೂಲಕ ಸುಲಭವಾಗಿ ದೈಹಿಕ ಚಲನೆಯ ಮೂಲಕ ಸಮತೋಲನ ಕಾಯ್ದುಕೊಳ್ಳಬಹುದು. ಸುಕಿನೋದ ಹೈಡ್ರೋಥೆರಪಿ ನೀರಿನಲ್ಲಿರುವ ಗುಣಪಡಿಸುವ ಶಕ್ತಿಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಒತ್ತಡ ಮತ್ತು ಮಾನಸಿಕ ಖಿನ್ನತೆಯನ್ನೂ ಹೋಗಲಾಡಿಸುತ್ತದೆ.ಸುಕಿನೋ ಹೈಡ್ರೋಥೆರಪಿ ಸೇವೆಗಳು ನೀರಿನ ಗುಣಪಡಿಸುವ ಶಕ್ತಿಯನ್ನು ಬಳಸಿಕೊಂಡು ಆರೋಗ್ಯ ಸ್ಥಿತಿಯನ್ನು ಪರಿಹರಿಸಲು ಹಾಗೂ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ನೆರವಾಗುತ್ತವೆ ಎಂದು ಸುಕಿನೋ ಹೆಲ್ತ್‌ಕೇರ್ ಸಲ್ಯೂಷನ್ಸ್ ಸಂಸ್ಥಾಪಕರು ಮತ್ತು ಸಿಇಒ ರಜನೀಶ್ ಮೆನನ್ ಹೇಳಿದರು.