ಧಾರವಾಡ: ಎಂಜನೀಯರ್‌ಗಳು ಸ್ಥಳೀಯ ಮತ್ತು ಜಾಗತಿಕ ಸುಸ್ಥಿರತೆಯ ಸವಾಲುಗಳನ್ನು ಪರಿಹರಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಕೆಎಲ್‌ಇ ತಾಂತ್ರಿಕ ವಿವಿ ಕುಲಸಚಿವ ಡಾ. ಬಸವರಾಜ ಅನಾಮಿ ಹೇಳಿದರು. ದಿ ಇನ್ನಿಟಿಟ್ಯೂಶನ್ ಆಫ್ ಎಂಜಿನೀಯರ್ಸ್ ಸ್ಥಾನಿಕ ಕೇಂದ್ರ ಆಯೋಜಿಸಿದ್ದ ವಿಶ್ವ ಎಂಜನೀಯರಿಂಗ್ ದಿನಾಚರಣೆಯಲ್ಲಿ ಮಾತನಾಡಿದರು.
ಎಂಜಿನಿಯರ್ಸ್ ಕೇಂದ್ರದಗ ಅಧ್ಯಕ್ಷ ಡಾ. ವಿ.ಎಸ್. ಹವಾಲ್ಧಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವ ಎಂಜಿನೀಯರಿಂಗ್ ದಿನಾಚರಣೆ ನಮ್ಮ ಪ್ರಪಂಚವನ್ನು ನಿರ್ಮಿಸಿದ ಹಾಗೂ ಸುಧಾರಿಸಿದ ಎಂಜಿನೀಯರ್‌ಗಳನ್ನು ಗೌರವಿಸಲು ಮತ್ತು ನೆನಪಿಸಲು ಉದ್ದೇಶಿಸಲಾಗಿದೆ. ಇದು ಹಿಂದಿನ ಮತ್ತು ಪ್ರಸ್ತುತ ಎಂಜಿನೀಯರ್‌ಗಳಿಗೆ ಗೌರವ ಸಲ್ಲಿಸುವ ಜೊತೆಗೆ ಶಾಶ್ವತ ಅಭಿವೃದ್ಧಿಯ ಗುರಿಯನ್ನು ಸಾಧಿಸುವ ಪರಂಪರೆ ಮುಂದುವರಿಯಲು ಸಹಕಾರಿ. ಇಂದಿನ ಸಂಪತ್ತುಗಳನ್ನು ಜವಾಬ್ಧಾರಿಯುತವಾಗಿ ಬಳಸುವುದರ ಜೊತೆಗೆ ಇದೇ ಸಂಪತ್ತುಗಳು ಮುಂದಿನ ಜನಾಂಗಗಕ್ಕೆ ಸಿಗುವಂತಾಬೇಕು ಎಂದರು.
ಗೌರವ ಕಾರ್ಯದರ್ಶಿ ಶ್ರೀಹರಿ ಕೆ.ಎಚ್. ವಂದಿಸಿದರು. ಡಾ. ಕೆ.ಎನ್. ಪಾಟೀಲ ಪರಿಚಯಿಸಿದರು. ವಿಜಯ ತೋಟಗೇರ ಸ್ವಾಗತಿಸಿದರು.