ಜಂಪ್ ರೋಪ್‌ನಲ್ಲಿ ಕ್ರೀಡಾಪಟುಗಳ ಸಾಧನೆ

KannadaprabhaNewsNetwork | Published : Jan 20, 2025 1:30 AM

ಸಾರಾಂಶ

ತಾಲೂಕಿನ ಜಂಪ್ ರೋಪ್ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಜಂಪ್ ರೋಪ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಹನುಮಸಾಗರ:

ತಾಲೂಕಿನ ಜಂಪ್ ರೋಪ್ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಜಂಪ್ ರೋಪ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಇಂಡೋ ನೇಪಾಳ ಜಂಪ್ ರೋಪ್ ಚಾಂಪಿಯನ್‌ಶಿಪ್ ೨೦೨೫ ಕ್ರೀಡಾಕೂಟವು ನೇಪಾಳದ ಪೋಖರಾದಲ್ಲಿ ಜ. ೫ರಿಂದ ೮ ರವರೆಗೆ ನಡೆಯಿತು. ನಮ್ಮ ದೇಶದಿಂದ ೧೫೦ ಕ್ರೀಡಾಪಟುಗಳು ಭಾಗವಹಿಸಿದ್ದರು. ಅದರಲ್ಲಿ ಕರ್ನಾಟಕ ತಂಡವನ್ನು ೯ ಕ್ರೀಡಾಪಟುಗಳು ಪ್ರತಿನಿಧಿಸಿ ನಾಲ್ಕು ಬಂಗಾರ, ೮ ಬೆಳ್ಳಿ ಹಾಗೂ ೩ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

೧೮ ವರ್ಷದೊಳಗಿನ ಡಬಲ್ ಡಚ್ ಸ್ಪೀಡ್ ಸ್ಪ್ರಿಂಟ್‌ನಲ್ಲಿ, ಮೊಹಮ್ಮದ್ ಇರ್ಫಾನ್, ಕಿಶನ್ ಆರ್. ಪವಾರ್, ಉಲ್ಲಾಸ್ ಜಿ.ಎಂ. ಬೆಳ್ಳಿ ಪದಕ ಗೆದ್ದಿದ್ದಾರೆ. ಸಿಂಗಲ್ ರೋಪ್ ೩೦ ಡಬಲ್ ಅಂಡರ್‌ನಲ್ಲಿ ಸಾನ್ವಿ ಎಂ. ಹೆಗಡೆ (ಬೆಳ್ಳಿ ಪದಕ), ಸಿಂಗಲ್ ರೋಪ್ ೩ ನಿಮಿಷ ಎಂಡೋರೆನ್ಸ್‌ನಲ್ಲಿ ಸಾನ್ವಿ ಎಂ. ಹೆಗಡೆ (ಬೆಳ್ಳಿ ಪದಕ), ಸಿಂಗಲ್ ರೋಪ್ ೩ ನಿಮಿಷ ಎಂಡೋರೆನ್ಸ್‌ನಲ್ಲಿ ದೀಪಕ್ ಪಾಟೀಲ್ (ಬಂಗರಾದ ಪದಕ), ಸಿಂಗಲ್ ರೋಪ್ ೩೦ ಡಬಲ್ ಅಂಡರ್‌ನಲ್ಲಿ ಶ್ರೀಚೈತನ್ಯ (ಕಂಚಿನ ಪದಕ), ಸಿಂಗಲ್ ರೋಪ್ ಫೇರ್ ಫ್ರೀ ಸ್ಟೈಲ್‌ನಲ್ಲಿ ದೀಪಕ್ ಪಾಟೀಲ್, ಉಲ್ಲಾಸ್ ಜಿ.ಎಂ. (ಬೆಳ್ಳಿ ಪದಕ) ಗೆದ್ದಿದ್ದಾರೆ. ಇನ್ನೂ ೨೦ ವರ್ಷದ ಮೇಲಿನ ವಯೋಮಿತಿಯಲ್ಲಿ ಸಿಂಗಲ್ ರೋಪ್ ೩೦ ಸೆಕೆಂಡ್ ಡಬಲ್ ಅಂಡರ್‌ನಲ್ಲಿ ರವಿ ಮಡಿವಾಳ (ಬಂಗಾರ), ಸಿಂಗಲ್ ರೋಪ್ ೩೦ ಸೆಕೆಂಡ್ ಸ್ಪೀಡ್‌ನಲ್ಲಿ ಮಂಜುನಾಥ ಚೌಡಕಿ (ಬೆಳ್ಳಿ ಪದಕ), ಸಿಂಗಲ್ ರೋಪ್ ಫೇರ್ ಫ್ರೀ ಸ್ಟೈಲ್ ನಲ್ಲಿ ಮಂಜುನಾಥ ಚೌಡಕಿ, ರವಿ ಮಡಿವಾಳ ಬಂಗಾರ ಪದಕ ಗೆದ್ದಿದ್ದಾರೆ. ಸಿಂಗಲ್ ರೋಪ್ ೩೦ ಸೆಕೆಂಡ್ ಸ್ಪೀಡ್‌ನಲ್ಲಿ ಮಹಾರಾಜ (ಕಂಚು)ಗೆದ್ದಿದ್ದಾರೆ.

ತಂಡದ ವ್ಯವಸ್ಥಾಪಕರಾಗಿ ಮಹೇಶ್ ಹೆಗ್ಡೆ, ಕರ್ನಾಟಕ ರಾಜ್ಯ ಜಂಪ್ ರೋಪ್ ಸಂಸ್ಥೆಯ ನಿರ್ದೇಶಕ ಅನಂತ ಜೋಶಿ, ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ಕರೀಂ ಒಂಟೆಳ್ಳಿ, ಕರ್ನಾಟಕ ರಾಜ್ಯ ಜಂಪ್ ರೋಪ್ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ರಜಾಕ್ ಟೇಲರ್ ಇದ್ದರು.

--

19 ಎಚ್,ಎನ್,ಎಮ್, 01: ಹನುಮಸಾಗರದ ಜಂಪ್ ರೋಪ್ ಸಂಸ್ಥೆಯ ಕ್ರೀಡಾಪಟುಗಳು ನಾನಾ ರೀತಿಯ ಪ್ರಶಸ್ತಿ ಪಡೆದಿರುವುದು.

Share this article