ಕನ್ನಡಪ್ರಭ ವಾರ್ತೆ ಸುರಪುರ
ಇದಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರೆಡ್ಡಿ ಪಾಟೀಲ್, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು, ಯಾವುದೇ ವೈಷ್ಯಮ್ಯವಿಲ್ಲದೆ ಸ್ನೇಹದಿಂದ ಆಟವಾಡಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದು ಕರೆ ನೀಡಿದರು.
ನಿವೃತ್ತ ಉಪನ್ಯಾಸಕ ವೇಣುಗೋಪಾಲ ನಾಯಕ ಜೇವರ್ಗಿ ಮಾತನಾಡಿ, ರಾಜಾ ಕುಮಾರ ಉತ್ತಮ ಕ್ರೀಡಾಪಟುವಾಗಿದ್ದರು. ಕ್ರೀಡೆಯೆಂದರೆ ಅಚ್ಚುಮೆಚ್ಚು. ರೂಪಕುಮಾರ ನಾಯಕ ಉತ್ತಮ ರಾಜಕೀಯ ಮತ್ತು ಕ್ರೀಡಾಸಕ್ತರಾಗಿದ್ದರು ಎಂದರು.ಕೆಪಿಸಿಸಿಯ ಮರಿಗೌಡ ಹುಲಿಕಲ್ ಮಾತನಾಡಿದರು. ಬಿಇಓ ಯಲ್ಲಪ್ಪ ಕಾಡ್ಲೂರು, ಪೌರಾಯುಕ್ತ ಜೀವನ ಕಟ್ಟಿಮನಿ, ರಾಜಾ ವೇಣುಗೋಪಾಲ ನಾಯಕ, ರಾಜಾ ಕುಮಾರ ನಾಯಕ, ರಾಜಾ ವಾಸುದೇವ ನಾಯಕ, ಪ್ರಕಾಶ ಗುತ್ತೇದಾರ, ಬಸವರಾಜ ಜಮದ್ರಖಾನಿ, ಅಬ್ದುಲ ಗಫೂರ ನಗನೂರಿ, ಸೂಗರೇಶ ವಾರದ ಸೇರಿ ಇತರರಿದ್ದರು.