ಧಾರವಾಡ: ಔಷಧಿಗಳ ಬಳಕೆಯ ಬಗ್ಗೆ ಕ್ರೀಡಾಪಟುಗಳು ಮತ್ತು ಕ್ರೀಡಾ ತರಬೇತುದಾರರು ಜಾಗರೂಕತೆಯಿಂದ ವರ್ತಿಸಬೇಕು ಎಂದು ಕ್ರೀಡಾ ವೈದ್ಯ ಡಾ. ಕಿರಣಕುಮಾರ್ ಕುಲಕರ್ಣಿ ಹೇಳಿದರು.
ಪ್ರಸ್ತುತ ಕ್ರೀಡಾ ಔಷಧಗಳ ತುರ್ತು ಬಳಕೆಯಾಗುತ್ತಿದೆ. ಹೀಗಾಗಿ ಕ್ರೀಡೆಗಳಲ್ಲಿ ಕೆಲವು ಔಷಧಿಗಳ ದುರುಪಯೋಗ, ಕ್ರೀಡಾಪಟುಗಳು, ತರಬೇತುದಾರರು ಮತ್ತು ಕ್ರೀಡಾ ವೈದ್ಯರ ನಿರ್ಲಕ್ಷ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ತಪ್ಪಾಗುವ ಸಂದರ್ಭಗಳಾಗುತ್ತಿವೆ. ಆದ್ದರಿಂದ ಔಷಧಗಳ ಬಳಕೆಯಲ್ಲಿ ಅರಿವು ಹೆಚ್ಚು ಅಗತ್ಯ ಎಂದರು.
ದೇಹದ ಮೇಲೆ ಅಡ್ಡಪರಿಣಾಮ: ಅವೈಜ್ಞಾನಿಕ ವಾಗಿ ಔಷಧಿಗಳ ಬಳಕೆಯಿಂದ ದೇಹದ ಮೇಲೆ ಅಡ್ಡಪರಿಣಾಮ ಬೀರಬಹುದು ಎಂದ ಅವರು, ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಲ್ಲಿ ಡೋಪಿಂಗ್‌ನಲ್ಲಿ ಭಾರತ ಮುಂಚೂಣಿ ಸ್ಥಾನದಲ್ಲಿದೆ. ಅದಕ್ಕಾಗಿ ಔಷಧಿಗಳ ಬಳಕೆ ಬಗ್ಗೆ ಕ್ರೀಡಾಪಟು, ತರಬೇತುದಾರ ಮತ್ತು ಕ್ರೀಡಾ ವೈದ್ಯನಿಗೆ ಜ್ಞಾನ ಅಗತ್ಯವಿದೆ ಎಂದರು.ಕ್ರೀಡಾಪಟುಗಳಿಗೆ ನಿಷೇಧಿತ ಪದಾರ್ಥಗಳೊಂದಿಗೆ ಸರಳ ಔಷಧಿಗಳನ್ನು ಸೇವಿಸಬೇಕು. ಆಗಲ ಡೋಪಿಂಗ್‌ಗೆ ಬಲಿಯಾಗುವುದು ತಪ್ಪಲಿದೆ. ಕ್ರೀಡಾಪಟುಗಳಿಗೆ ನಿಷೇಧಿಸಲಾದ ಔಷಧಿಗಳ ಬಳಕೆಯ ಬಗ್ಗೆ ಮಾಹಿತಿ ಇರಬೇಕು. ಅವುಗಳಿಂದ ದೂರವಿರುವುದೊಂದೇ ಕ್ರೀಡಾಪಟುವಿನ ಏಕೈಕ ಜವಾಬ್ದಾರಿ. ಪ್ರಸ್ತುತ ಭಾರತ ಸರ್ಕಾರ ಕ್ರೀಡಾಪಟುಗಳಿಗೆ ವಿಶೇಷ ತಂತ್ರಾಂಶ ರೂಪಿಸಿದ್ದು, ಕ್ರೀಡಾಪಟುಗಳು ಬಳಕೆ ಮಾಡುವ ಔಷಧಿಗಳ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ ಎಂದರು.
ಸಿ.ಎಂ.ಡಿ.ಆರ್ ಪ್ರಾಧ್ಯಾಪಕ ಡಾ. ಜೈ ಪ್ರಭಾಕರ್, ಪ್ರವಾಸೋದ್ಯಮ ವಿಭಾಗದ ಸಂಯೋಜಕ ಡಾ. ಜಗದೀಶ್ ಕೆ, ಭಾರತೀಯ ಕ್ರೀಡಾ ಪ್ರಾಧಿಕಾರದ ಉಸ್ತುವಾರಿ ರಾಮ್ ಬುಡಕಿ, ಡಾ. ಪ್ರತೀಕ್ ಮಾಲಿ, ದತ್ತ ನಿರಂಜನ, ಕ್ರೀಡಾ ತರಬೇತುದಾರರಾದ ಶಿವಪ್ಪ ಪಾಟೀಲ, ಶಾಮ್ಲಾ ಪಾಟೀಲ ಸೇರಿದಂತೆ ಹಲವರಿದ್ದರು.