ಯೋಗ ದಿನದಂದು ಎಲ್ಲಾ ಇಲಾಖೆ ಅಧಿಕಾರಿಗಳ ಹಾಜರಾತಿ ಕಡ್ಡಾಯ

KannadaprabhaNewsNetwork |  
Published : Jun 13, 2025, 03:31 AM IST
11ಎಚ್ಎಸ್ಎನ್18 : ಚನ್ನಕೇಶವ ಸ್ವಾಮಿ ದೇಗುಲದ ದಾಸೋಹ ಭವನದಲ್ಲಿ ಜೂ  21  ರಂದು ನಡೆಯುವ ವಿಶ್ವ ಯೋಗಾದಿನಾಚರಣೆಯ ಪೂರ್ವ ಭಾವಿ ಸಭೆಯಲ್ಲಿ ಶಾಸಕ ಹೆಚ್ ಕೆ ಸುರೇಶ್  ಮಾತನಾಡಿದರು. | Kannada Prabha

ಸಾರಾಂಶ

ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ದಾಸೋಹ ಭವನದಲ್ಲಿ ಜೂ. 21ರಂದು ನಡೆಯಲಿರುವ ವಿಶ್ವ ಯೋಗಾದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚನ್ನಕೇಶವ ದೇವಾಲಯದ ಆವರಣದಲ್ಲಿ ಯೊಗದಿನಾಚರಣೆ ಆಚರಿಸಲಾಗುತ್ತದೆ. ಈಗಾಗಲೇ ರಾಘವೇಂದ್ರ ಹಾಗೂ ಪತಂಜಲಿ ಯೋಗಾಕೇಂದ್ರದ ಯೋಗಪಟುಗಳಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದ್ದು, ಪಟ್ಟಣದ ವಿವಿಧ ಶಾಲೆಗಳಿಂದ ಸುಮಾರು ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ‌. ಕೇವಲ ವಿದ್ಯಾರ್ಥಿಗಳು ಅಧಿಕಾರಿಗಳು ಮಾತ್ರ ಈ ಶಿಬಿರದಲ್ಲಿ ಭಾಗವಹಿಸಿದರೆ ಸಾಲದು, ಕಡ್ಡಾಯವಾಗಿ ಸಾರ್ವಜನಿಕರ ಪಾತ್ರ ಅತಿಮುಖ್ಯವಾಗಿದ್ದು, ತಾವುಗಳು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರೆ ಜಿಲ್ಲೆಯಲ್ಲೆ ಮಾದರಿ ಯೋಗ ಶಿಬಿರ ನಡೆಯಲಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರುಯೋಗ ದಿನಾಚರಣೆಯನ್ನು ಅದ್ಧೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲಾ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕೆಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು.ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ದಾಸೋಹ ಭವನದಲ್ಲಿ ಜೂ. 21ರಂದು ನಡೆಯಲಿರುವ ವಿಶ್ವ ಯೋಗಾದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚನ್ನಕೇಶವ ದೇವಾಲಯದ ಆವರಣದಲ್ಲಿ ಯೊಗದಿನಾಚರಣೆ ಆಚರಿಸಲಾಗುತ್ತದೆ. ಈಗಾಗಲೇ ರಾಘವೇಂದ್ರ ಹಾಗೂ ಪತಂಜಲಿ ಯೋಗಾಕೇಂದ್ರದ ಯೋಗಪಟುಗಳಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದ್ದು, ಪಟ್ಟಣದ ವಿವಿಧ ಶಾಲೆಗಳಿಂದ ಸುಮಾರು ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ‌. ಕೇವಲ ವಿದ್ಯಾರ್ಥಿಗಳು ಅಧಿಕಾರಿಗಳು ಮಾತ್ರ ಈ ಶಿಬಿರದಲ್ಲಿ ಭಾಗವಹಿಸಿದರೆ ಸಾಲದು, ಕಡ್ಡಾಯವಾಗಿ ಸಾರ್ವಜನಿಕರ ಪಾತ್ರ ಅತಿಮುಖ್ಯವಾಗಿದ್ದು, ತಾವುಗಳು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರೆ ಜಿಲ್ಲೆಯಲ್ಲೆ ಮಾದರಿ ಯೋಗ ಶಿಬಿರ ನಡೆಯಲಿದೆ ಎಂದರು.ಪಟ್ಟಣದ ಎಲ್ಲಾ ಶಾಲೆಗಳಿಗೆ ಮುಂಜಾನೆ ತರಗತಿ ಪ್ರಾರಂಭಿಸಲು ಸೂಚಿಸಲಾಗಿದೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಇರಬೇಕೆಂದು ತಹಸೀಲ್ದಾರ್ ಮಮತಾರವರಿಗೆ ಸೂಚಿಸಿದರು. ಬಂದಂತವರಿಗೆ ಬೆಳಗಿನ ಉಪಹಾರ, ಕುಡಿಯುವ ನೀರು, ಸ್ವಚ್ಛತೆ ಬಗ್ಗೆ ಮುಖ್ಯಾಧಿಕಾರಿ ಸುಜಯ್ ಹಾಗೂ ದೇಗಲದ ಇಒ ಯೋಗೇಶ್ ಅವರಿಗೆ ಸೂಚಿಸಿದರಲ್ಲದೆ ಆರೋಗ್ಯದಲ್ಲಿ ಮಕ್ಕಳಿಗೆ ಏರುಪೇರಾದರೆ ಸೂಕ್ತ ಚಿಕಿತ್ಸೆ ನೀಡಲು ಡಾ. ಸುಧಾ ಹಾಗೂ ವಿಜಯ್ ಅವರಿಗೆ ಪೂರ್ವ ಸಿದ್ಧತೆ ಮಾಡುವಂತೆ ತಿಳಿಸಿದರು.ಪೊಲೀಸ್ ಇಲಾಖೆ ವತಿಯಿಂದ ಪಾರ್ಕಿಂಗ್ ವ್ಯವಸ್ಥೆ ಹಾಗೂ ದೇಗುಲದ ಹೊರಭಾಗದಲ್ಲಿ ಎಲ್‌ಇಡಿ ವ್ಯವಸ್ಥೆ ಮಾಡಲಾಗುತ್ತದೆ. ಸರಳ ಆಸನಗಳನ್ನು ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ಹೇಳಿಕೊಡುವಂತೆ ಮನವಿ ಮಾಡಿದರು.ಈ ಬಾರಿಯ ಯೋಗ ದಿನಾಚರಣೆ ಸಂದರ್ಭದಲ್ಲಿ ಹೆಚ್ಚಿನ ಭಾಷಣಕ್ಕೆ ನೀಡದೆ ಸರಳ ಭಾಷಣ ಮಾಡಿಸಿ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು. ಗರಂ ಆದ ಶಾಸಕ:

ಯೋಗ ದಿನಾಚರಣೆ ಸಂದರ್ಭದಲ್ಲಿ ಬರುವ ವಿದ್ಯಾರ್ಥಿಗಳಿಗೆ ದೇಗುಲದ ವತಿಯಿಂದ ಉಪಹಾರ ವ್ಯವಸ್ಥೆ ಮಾಡುವಂತೆ ಸೂಚಿಸಿದಾಗ ಆಡಿಟಿಂಗ್ ತೊಂದರೆಯಾಗುತ್ತದೆ ಎಂದು ಇಒ ಹೇಳಿದರು. ಆಗ ನೀನು ನಿನ್ನ ಜೇಬಿನಿಂದ ಹಾಕುವುದು ಬೇಡ. ಸರ್ಕಾರದ ಸುತ್ತೋಲೆ ಏನಿದೆ ಆ ರೀತಿಯಾಗಿ ಮಾಡಿ ಇದರ ಬಗ್ಗೆ ನಾನು ವಿಧಾನಸೌದದಲ್ಲಿ ಚರ್ಚೆ ಮಾಡುತ್ತೇನೆ. ಯಾವುದೇ ರೀತಿಯ ಲೋಪದೋಷವಾಗದಂತೆ ಎಲ್ಲಾ ಅಧಿಲಾರಿಗಳು ತಮ್ಮ ಕಾರ್ಯಕ್ರಮ ಎಂದು ತಿಳಿದು ಯಶಸ್ವಿ ಗೊಳಿಸಬೇಕು ಎಂದರು.ಇದೇ ವೇಳೆ ಎಲ್ಲಾ ಇಲಾಖೆಯ ಅಧಿಕಾರಿಗಳ ಹಾಜರಾತಿ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವಂತೆ ತಿಳಿಸಿದರು. ಸಭೆಯಲ್ಲಿ ತಹಸೀಲ್ದಾರ್ ಎಂ ಮಮತಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಸಂತ್ ಕುಮಾರ್, ಬಿಇಒ ರಾಜೇಗೌಡ, ಎಸೈ ಜಿ ಪಾಟೀಲ್, ಮುಖ್ಯಾಧಿಕಾರಿ ಸುಜಯ್ ಕುಮಾರ್, ನಿಮಾನ್ಸ್ ಆಸ್ಪತ್ರೆಯ ಅಧಿಕಾರಿಗಳು ಹಾಗೂ ಯೋಗ ಶಿಕ್ಷಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ