ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಕೀಲ ಡಿ.ಬಿ. ಪೂಜಾರ ಅವರು ತಮ್ಮ ಪತ್ನಿ ಭುವನೇಶ್ವರಿ ಪೂಜಾರ ಹೆಸರಿನಲ್ಲಿ ಜಮೀನು ಹೊಂದಿದ್ದರು. ಸರ್ಕಾರಕ್ಕೆ ಭೂಮಿ ಬಿಟ್ಟುಕೊಡಲು ಒಪ್ಪದಿದ್ದಾಗ ಸರ್ಕಾರ ವಿಶೇಷ ಅಧಿಕಾರ ಬಳಸಿಕೊಂಡು ಎಕರೆಗೆ ₹6 ಲಕ್ಷ ನೀಡಿ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಅವೈಜ್ಞಾನಿಕ ಪರಿಹಾರ ಮೊತ್ತ ನೀಡಿದೆ ಎಂದು ಡಿ.ಬಿ. ಪೂಜಾರ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ 3.31 ಎಕರೆಗೆ ಸಂಬಂಧಿಸಿದಂತೆ ಪ್ರತಿ ಚದರ ಅಡಿಗೆ ₹789 ನೀಡಬೇಕೆಂದು ಆದೇಶ ಮಾಡಿತ್ತು. 2024ರ ಏಪ್ರಿಲ್ ತಿಂಗಳಿನಲ್ಲೇ ಆದೇಶ ಮಾಡಿದ್ದರೂ ಭೂಸ್ವಾಧೀನಾಧಿಕಾರಿ ಕಚೇರಿ ಪರಿಹಾರ ನೀಡದ ಕಾರಣ ಪೂಜಾರ ಅವರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಂಗ ಇಲಾಖೆ ಭೂಸ್ವಾಧೀನಾಧಿಕಾರಿ ತಂಡ ಕಚೇರಿಯ ಸಾಮಗ್ರಿಗಳನ್ನು ಜಪ್ತಿ ಮಾಡಿದರು.