ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ಕಾಯ್ದೆ ತಿದ್ದುಪಡಿ ಖಂಡಿಸಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡೆ ಖಂಡಿಸಿ ಏ.15ರಂದು ಪೂರ್ವಭಾವಿ ಸಭೆ ನಡೆಸಲಾಗುವುದು. ಅಂದು ಸಭೆಯಲ್ಲಿ ಏ.23, 24ರಂದು ಪ್ರತಿಭಟನೆ ನಡೆಸುವ ಕುರಿತು ಯೋಜನೆ ರೂಪಿಸಲಾಗುತ್ತದೆ. ಆದರೆ ಏ.15ರಂದೇ ಹೋರಾಟ ನಡೆಸುವ ಕುರಿತು ಆಡಿಯೋ ವೈರಲ್ ಆಗಿದ್ದು, ಆ ಕುರಿತು ನಾವು ಸಭೆಯನ್ನೇ ನಡೆಸಿಲ್ಲ. ಇನ್ನು ಈಗಾಗಲೇ ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋಗಳ ಬಗ್ಗೆ ತನಿಖೆಯಾಗಲಿ ಎಂದರು.
ಯತ್ನಾಳ ಮುಗಿಸುವ ಕುರಿತು ಯಾರೋ ಕಿಡಿಗೇಡಿಗಳು ಆಡಿಯೋ ವೈರಲ್ ಮಾಡುತ್ತಿದ್ದಾರೆ. ಆದರೆ ಅದಕ್ಕೂ ನಮಗೂ ಸಂಬಂಧವಿಲ್ಲ. ಪೊಲೀಸರು ತನಿಖೆ ನಡೆಸಿ ಆ ಆಡಿಯೋ ಯಾರದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದು ಕಂಡುಹಿಡಿಯಬೇಕು. ಇನ್ನು ಬಿಜೆಪಿಯಲ್ಲೂ ಒಂದಿಬ್ಬರು ಕಿಡಿಗೇಡಿಗಳು ಇದ್ದಾರೆ. ಅವರು ಯಾರೋ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಅದರ ಬಗ್ಗೆಯೂ ತನಿಖೆ ನಡೆಸಬೇಕಿದೆ ಎಂದು ಎಸ್‌ಪಿ ಹಾಗೂ ಡಿಸಿ ಅವರಿಗೆ ಒತ್ತಾಯಿಸಿದರು.ಯತ್ನಾಳಗೆ ಸವಾಲು:
ತಾಲೂಕಿನ ಕಗ್ಗೊಡನಲ್ಲಿರುವ ಯತ್ನಾಳ ಅವರ ಗೋಶಾಲೆಯಿಂದ ಕಲಬುರಗಿಗೆ ಜಾನುವಾರುಗಳನ್ನು ಕಳಿಸಿ, ಕಸಾಯಿಖಾನೆಗೆ ಮಾರುತ್ತಾರೆ. ಆಕಳುಗಳ ಪೋಸ್ಟ್ ಮಾರ್ಟಂ ಮಾಡ್ತಾರೆ, ಅದರಿಂದ ಅವರಿಗೆ ಹಣ ಬರುತ್ತದೆ ಎಂದು ಆರೋಪಿಸಿದರು.
ಮುಖಂಡ ಎಂ.ಸಿ.ಮುಲ್ಲಾ ಮಾತನಾಡಿ, ನಿನ್ನೆ ಆಡಿಯೋ ವೈರಲ್ ಆಗಿದೆ. ಆದರೆ ಆ ವ್ಯಕ್ತಿಗೂ ನಮಗೂ ಸಂಬಂಧವಿಲ್ಲ. ಯಾರೋ ಒಬ್ಬರು ಕುತಂತ್ರ ಮಾಡಿದ್ದಾರೆ. ನಮ್ಮ ಹೋರಾಟ ವಕ್ಫ್ ವಿರುದ್ಧ ನಡೆಯಲಿದೆ. ಈ ಆಡಿಯೋ ಕುತಂತ್ರವನ್ನು ಬಸನಗೌಡರು ಹಾಗೂ ಅವರ ಅನುಯಾಯಿಗಳು ಸೇರಿ ಮಾಡಿರಬಹುದು. ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಬಸನಗೌಡರು ಈ ರೀತಿ ಏನಾದರೂ ಕುತಂತ್ರ ಮಾಡಿದರೆ ತಮ್ಮನ್ನು ಬಿಜೆಪಿಯವರು ಮತ್ತೆ ವಾಪಸ್ ಬಿಜೆಪಿಗೆ ತೆಗೆದುಕೊಳ್ಳಬೇಕು ಎಂದು ಸಿಂಪತಿಗಾಗಿ ತಂತ್ರಗಾರಿಕೆ ಮಾಡಿರಬೇಕು. ಬಿಜೆಪಿ ಹೈಕಮಾಂಡ್‌ಗೆ ಗಮನ ಸೆಳೆಯಲು ಹೀಗೆ ಮಾಡಿರಬೇಕು ಎಂದರು.