ನವಲಿ ಹೋಬಳಿಯ ಪ್ರತಿಯೊಂದು ರಸ್ತೆಯಲ್ಲಿ ಮರಳು ಆಕ್ರಮ ಸಾಗಾಟ ರಾಜಾರೋಷವಾಗಿ ನಡೆಯುತ್ತಿದೆ. ಹಗಲು-ರಾತ್ರಿಯನ್ನದೆ ನೂರಾರು ಲಾರಿ ಮರಳು ತುಂಬಿಕೊಂಡು ಹೋಗುತ್ತಿದ್ದರೂ ಆರ್‌ಟಿಒ ಅಥವಾ ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಅಕ್ರಮಕ್ಕೆ ಕಡಿವಾಣ ಹಾಕುತ್ತಿಲ್ಲ. ಹೀಗಾಗಿ ಮರಳು ದಂಧೆಕೋರರಿಗೆ ಭಯವಿಲ್ಲದಂತೆ ಆಗಿದೆ.
ನವಲಿ:
ನವಲಿ ಹೋಬಳಿಯಾದ್ಯಂತ ಮರಳು ಅಕ್ರಮ ಸಾಗಾಟ ಎಗ್ಗಿಲ್ಲದೆ ಸಾಗಿದ್ದರೂ ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.
ನವಲಿ ಹೋಬಳಿಯ ಪ್ರತಿಯೊಂದು ರಸ್ತೆಯಲ್ಲಿ ಮರಳು ಆಕ್ರಮ ಸಾಗಾಟ ರಾಜಾರೋಷವಾಗಿ ನಡೆಯುತ್ತಿದೆ. ಹಗಲು-ರಾತ್ರಿಯನ್ನದೆ ನೂರಾರು ಲಾರಿ ಮರಳು ತುಂಬಿಕೊಂಡು ಹೋಗುತ್ತಿದ್ದರೂ ಆರ್‌ಟಿಒ ಅಥವಾ ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಅಕ್ರಮಕ್ಕೆ ಕಡಿವಾಣ ಹಾಕುತ್ತಿಲ್ಲ. ಹೀಗಾಗಿ ಮರಳು ದಂಧೆಕೋರರಿಗೆ ಭಯವಿಲ್ಲದಂತೆ ಆಗಿದೆ. ಎಲ್ಲಿಗೆ ಸಾಗಾಟ:
ನವಲಿಯಿಂದ ಮರಳು ತುಂಬಿಕೊಂಡು ಹೋಗುವ ದಂಧೆಕೋರರು ಆ ಮರಳನ್ನು ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಹೊಸಪೇಟೆ ಸೇರಿದಂತೆ ವಿವಿಧ ನಗರಗಳಿಗೆ ಟಿಪ್ಪರ್, ಲಾರಿ, ಟ್ರಕ್ ಗಳ ಮೂಲಕ ಸಾಗಿಸುತ್ತಾರೆ.
ಅಧಿಕಾರಿಗಳದ್ದೇ ಕುಮ್ಮಕ್ಕು?:
ಕಾನೂನು ಬಾಹಿರವಾಗಿ ಮರಳು ಸಾಗಾಟ ನಿರಾಂತಕವಾಗಿ ನಡೆಯುತ್ತಿದ್ದರೂ, ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ, ನವಲಿ ಹೋಬಳಿಯಾದ್ಯಂತಹ ಪ್ರತಿ ದಿನ ಹಗಲು -ರಾತ್ರಿ ಎನ್ನದೇ 150ಕ್ಕೂ ಹೆಚ್ಚು ಲಾರಿಗಳು ಮರಳು ಸಾಗಾಟ ನಡೆಸುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ. ರಾಜಕೀಯ ಹಾಗೂ ಅಧಿಕಾರಿ ವರ್ಗದ ಪ್ರಭಾವವು ಅಕ್ರಮ ದಂಧೆಯ ಬೆನ್ನೆಲುಬಾಗಿ ನಿಂತಿವೆಯೇ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮನೆ ಮಾಡಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.