ಮಕ್ಕಳಲ್ಲಿನ ಆತ್ಮಸ್ಥೈರ್ಯ ಜಾಗೃತಗೊಳಿಸಿ

KannadaprabhaNewsNetwork |  
Published : Jan 08, 2025, 12:15 AM IST
ಕಾರ್ಯಕ್ರಮವನ್ನು ಆರ್.ಎಸ್.ನರೇಗಲ್ಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿಯೊಬ್ಬ ವಿದ್ಯಾರ್ಥಿಗಳು ವಿಷಯ ವಸ್ತು ಅತ್ಯಂತ ಮನಃ ಪೂರ್ವಕವಾಗಿ ಅಧ್ಯಯನ ಮಾಡಲು ತಾವು ಅಭ್ಯಸಿಸುವ ಸ್ಥಳದಲ್ಲಿ ವಿಷಯಕ್ಕೆ ಸಂಬಂಧಿಸಿದ ವಸ್ತು ಅಂಟಿಸಿ, ಅಧ್ಯಯನ ಮಾಡಲು ಅನುವಾಗುವಂತೆ ವಾತಾವರಣ ಸೃಷ್ಟಿಸಿಕೊಳ್ಳಿ

ನರೇಗಲ್ಲ: ಮಕ್ಕಳಲ್ಲಿ ಹುದುಗಿರುವ ಆತ್ಮ ಸ್ಥೈರ್ಯವನ್ನು ಜಾಗೃತಗೊಳಿಸುವ ಮೂಲಕ ಪರೀಕ್ಷಾ ಭಯ ಹೊಡೆದೋಡಿಸಿ ಅವರು ಸಂತೋಷದಿಂದ ಪರೀಕ್ಷೆ ಎದುರಿಸುವಂತೆ ಮಾಡುವ ಮಹತ್ಕಾರ್ಯವೇ ಸಾಮರ್ಥ್ಯ ಆಧಾರಿತ ತರಬೇತಿ ಶಿಬಿರ, ಇದನ್ನು ಪ್ರತಿಯೊಬ್ಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಆಲಿಸುವುದರಿಂದ ನಿಮ್ಮ ಪರೀಕ್ಷಾ ಭಯ ನಿವಾರಣೆಯಾಗಿ ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಬಹುದಾಗಿದೆ ಎಂದು ಮಂಗಳೂರಿನ ಯುನಿವರ್ಸಲ್ ನಾಲೇಡ್ಜ ಮತ್ತು ವಿಕಾಸ ಸೊಸೈಟಿಯ ಸಂಸ್ಥಾಪಕ ರೋಹಾನ್ ಷಿರಿ ಹೇಳಿದರು.

ಸ್ಥಳೀಯ ಮಹಾಶಿವಶರಣೆ ಅಕ್ಕ ನಾಗಮ್ಮ ಪ್ರಸಾದ ನಿಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರೋಣ, ಎಸ್.ಎ.ವಿ.ವಿ.ಪಿ ಸಮಿತಿ ಹಾಗೂ ಯುನಿವರ್ಸಲ್ ನಾಲೇಡ್ಜ ಮತ್ತು ಗ್ರಾಮ ವಿಕಾಸ ಸೊಸೈಟಿ ಮಂಗಳೂರು ಸಂಯುಕ್ತಾಶ್ರಯದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಸಾಮರ್ಥ್ಯ ಆಧಾರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ವಿಷಯ ವಸ್ತು ಅತ್ಯಂತ ಮನಃ ಪೂರ್ವಕವಾಗಿ ಅಧ್ಯಯನ ಮಾಡಲು ತಾವು ಅಭ್ಯಸಿಸುವ ಸ್ಥಳದಲ್ಲಿ ವಿಷಯಕ್ಕೆ ಸಂಬಂಧಿಸಿದ ವಸ್ತು ಅಂಟಿಸಿ, ಅಧ್ಯಯನ ಮಾಡಲು ಅನುವಾಗುವಂತೆ ವಾತಾವರಣ ಸೃಷ್ಟಿಸಿಕೊಳ್ಳಿ. ಪ್ರತಿಯೊಬ್ಬರು ತಮ್ಮಲ್ಲಿರುವ ಆಂತರಿಕ ದುಗುಡ ಹೊಡೆದೊಡಿಸಿ ಆತ್ಮಸ್ಥೈರ್ಯ ಹೊಂದಿ ಇತರರನ್ನು ಹೋಲಿಕೆ ಮಾಡಿಕೊಳ್ಳದೇ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳಿ ದಿನದಿಂದ ದಿನಕ್ಕೆ ನಿಮ್ಮ ಮನಸ್ಸಿನ ಮೇಲಿನ ಹಿಡಿತ ಬಿಗಿಗೊಳಿಸಿಕೊಳ್ಳುವ ಮೂಲಕ ಕೇಂದ್ರಿಕೃತ ಅಧ್ಯಯನ ಕೈಗೊಳ್ಳಿ ದಿನದಿಂದ ದಿನಕ್ಕೆ ನಿಮ್ಮ ಆತ್ಮವಿಶ್ವಾಸ ಇಮ್ಮುಡಿಗೊಳ್ಳುತ್ತದೆ. ಇದರಿಂದ ಪರೀಕ್ಷೆಯನ್ನು ನಿರ್ಭಿತಿಯಿಂದ ಎದುರಿಸಬಲ್ಲಿರಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಈ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳುವ ಮೂಲಕ ನಿರ್ಭಿತಿಯಿಂದ ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶ ಹೊಂದಬೇಕು ಎಂದರು.

ಕಾರ್ಯಾಗಾರದಲ್ಲಿ ನರೇಗಲ್ಲ, ಅಬ್ಬಿಗೇರಿ, ಜಕ್ಕಲಿ, ನಿಡಗುಂದಿ, ಹಾಲಕೆರೆ, ಮಾರನಬಸರಿಯಿಂದ ಒಟ್ಟು 11 ಶಾಲೆಯ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರತಿ ಶಾಲೆಯಿಂದ ಇಬ್ಬರು ಶಿಕ್ಷಕರು ಭಾಗವಹಿಸಿದ್ದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಸ್. ನರೇಗಲ್ಲ, ಎಸ್.ಎ.ವಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಯ ಎಸ್.ಎನ್. ಹೂಲಗೇರಿ, ಮುಖ್ಯೋಪಾದ್ಯಾಯ ಎಂ.ವಿ. ಸಜ್ಜನ, ಶಿಕ್ಷಕರಾದ ಬಿ.ಡಿ. ಯರಗೊಪ್ಪ, ಮಾಧವ ಭಂಡಾರಿ, ದೈಹಿಕ ಶಿಕ್ಷಕ ವಸಂತ ಈಟಿ, ಎಚ್.ಕೆ.ಕುರ್ಲಗೇರಿ, ಎಸ್.ಜಿ. ಕೇಶಣ್ಣವರ, ಎಂ.ವಿ. ಬಿಂಗಿ, ಎಫ್.ಎನ್. ಹುಡೇದ, ಎಂ.ವಿ. ವೀರಾಪೂರ, ಅನ್ನದಾನೇಶ ಮರಡಿಮಠ, ಅಕ್ಬರ ಇಬ್ರಾಹಿಮಪುರ, ಎಸ್.ವಿ. ಹಳ್ಳಿಕೇರಿ, ದೈಹಿಕ ಶಿಕ್ಷಕ ಆರ್.ವಿ. ಗೆದಗೇರಿ, ಆರ್.ವಿ. ಕಟ್ಟಿಮನಿ, ಬಿ.ಟಿ. ತಾಳಿ, ಎಸ್.ವಿ. ಉಣಕಲ್ಲ, ಶಿಕ್ಷಕಿ ಧರ್ಮಾಯತ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ : ಶ್ರೀ ಶ್ರೀ
ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ