ರಾಮನಗರ: ಭಾರತ್ ವರ್ಚುಯಲ್ ಯೂನಿವರ್‌ಸಿಟಿ ಫಾರ್ ಪೀಸ್ ಅಂಡ್ ಎಜ್ಯುಕೇಷನ್ ಸಂಸ್ಥೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್‌ಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಕೆ.ಸತೀಶ್, ಎಲ್ಲ ಸರ್ಕಾರಿ ನೌಕರರ ಶ್ರಮದ ಫಲವಾಗಿ ನನಗೆ ಗೌರವ ಡಾಕ್ಟರೇಟ್ ಲಭಿಸಿದೆ. ಸಂಘಟನೆಯಲ್ಲಿ ನಿರ್ದೆಶಕನಾಗಿ, ಉಪಾಧ್ಯಕ್ಷನಾಗಿ, ಖಜಾಂಚಿಯಾಗಿ, ರಾಜ್ಯ ಪರಿಷತ್ತು ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ ಎಂದರು.
ಸಮಾಜದಲ್ಲಿ ಪ್ರಶಸ್ತಿ ಪುರಸ್ಕಾರಗಳು ವ್ಯಕ್ತಿಯ ಗೌರವವನ್ನು ಹೆಚ್ಚಿಸುತ್ತವೆ. ಹಾಗೆಯೇ ಮತ್ತಷ್ಟು ಜವಬ್ದಾರಿಗಳನ್ನೂ ಹೆಚ್ಚಿಸುತ್ತದೆ. ಅದನ್ನರಿತು ಎಲ್ಲರ ಸಹಕಾರದಿಂದ ಹೆಚ್ಚು ಸಾಮಾಜಿಕ ಕಾರ್ಯಗಳನ್ನು ಮಾಡುತ್ತೇನೆ ಎಂದರು.ಈ ವೇಳೆ ಜಿಲ್ಲಾ ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ಪಾದ್ರಳ್ಳಿ ಸತೀಶ್, ಗೌರವ ಕಾರ್ಯದರ್ಶಿ ಪ್ರದೀಪ್, ಉಪಾಧ್ಯಕ್ಷ ಶಂಕರಾನಂದ್, ಕ್ರೀಡಾ ಕಾರ್ಯದರ್ಶಿ ಪ್ರಭು, ಸಹ ಕಾರ್ಯದರ್ಶಿ ಗಿರೀಶ್, ಜಂಟಿ ಕಾರ್ಯಧರ್ಶಿ ಗಣೇಶ್, ಬೆಸ್ಕಾಂ ಎಂಜಿನಿಯರ್ ಪ್ರಭಾಕರ್ ಮತ್ತಿತರರು ಹಾಜರಿದ್ದರು.
25ಕೆಆರ್ ಎಂಎನ್ 3.ಜೆಪಿಜಿಭಾರತ್ ವರ್ಚುಯಲ್ ಯೂನಿವರ್‌ಸಿಟಿ ಫಾರ್ ಪೀಸ್ ಅಂಡ್ ಎಜ್ಯುಕೇಷನ್ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪಡೆದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಅವರನ್ನು ಸಂಘದ ಪದಾಧಿಕಾರಿಗಳು ಅಭಿನಂದಿಸಿದರು.