ಅ.5 ರಂದು ಕುರುಬ ಸಮಾಜದ ಸಾಧಕರಿಗೆ ಪುರಸ್ಕಾರ

KannadaprabhaNewsNetwork |  
Published : Sep 17, 2025, 01:06 AM IST
15ಕೆಕೆಡಿಯು2. | Kannada Prabha

ಸಾರಾಂಶ

ಕಡೂರು, ಕನಕ ನೌಕರರ ಸಂಘದಿಂದ ಪ್ರಥಮ ಬಾರಿಗೆ ಅ.5 ರಂದು ಕುರುಬ ಸಮಾಜದ ಸಾಧಕರನ್ನು ಪುರಸ್ಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಕೆ. ತಿಪ್ಪೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಕನಕ ನೌಕರರ ಸಂಘದಿಂದ ಪ್ರಥಮ ಬಾರಿಗೆ ಅ.5 ರಂದು ಕುರುಬ ಸಮಾಜದ ಸಾಧಕರನ್ನು ಪುರಸ್ಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಕೆ. ತಿಪ್ಪೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಕನಕ ನೌಕರರ ಬಳಗದ ಸಮಾಜದ ವಿದ್ಯಾರ್ಥಿಗಳಿಗೆ ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಅ 5ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಮಾರಂಭ ಆಯೋಜಿಸಲಾಗಿದೆ. ತಾಲೂಕಿನ ಕುರುಬ ಸಮಾಜದ ಮಕ್ಕಳು ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 90ಕ್ಕಿಂತ ಮತ್ತು ಪಿಯುಸಿಯಲ್ಲಿ ತಲಾ ಶೇ.85 ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು, ಪದವಿ ವಿಭಾಗದಲ್ಲಿ ಶೇ. 85ರಷ್ಟು ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಶೇ. 65 ರಷ್ಟು ಸರಕಾರಿ ಕೋಟಾದಡಿ ವೈದ್ಯಕೀಯ ಪ್ರವೇಶ ಪಡೆದ ವಿದ್ಯಾರ್ಥಿ ಗಳಿಗೆ ಹಾಗೂ ಪಿಎಚ್‌ಡಿ ಪಡೆದವರನ್ನು ಪುರಸ್ಕರಿಸ ಲಾಗುತ್ತಿದೆ ಎಂದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಸರ್ಕಾರಿ ನೌಕರರಿಗೆ, ಹೋಬಳಿಗೆ ಒಬ್ಬರಂತೆ ಆದರ್ಶ ರೈತರಿಗೆ ಹಾಗೂ ಉತ್ತಮ ಕುರಿಗಾಹಿಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ಕಡೂರು ತಾಲೂಕು ಕುರುಬ ಸಮಾಜದ ಸಾಧಕರು ತಮ್ಮ ಸ್ವವಿವರ ಮತ್ತು ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿಯನ್ನು ಸೆ.30 ರೊಳಗೆ ನೋಂದಾಯಿಸಲು ಕೋರಿದೆ. ಹೆಚ್ಚಿನ ಮಾಹಿತಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜಪ್ಪ 9482121868, ಸಂಘಟನಾ ಕಾರ್ಯದರ್ಶಿ ಎಚ್.ವಿ. ರಾಜಣ್ಣ, 9741 478718, ವೈ.ಎಚ್. ಹನುಮಂತಪ್ಪ, 9449414652, ರಾಧಮ್ಮ 9482900748 ಸಂಖ್ಯೆಗೆ ಸಂಪರ್ಕಿಸಬಹುದು ಎಂದರು.

ಇದೇ ಸಂದರ್ಭದಲ್ಲಿ ಖಜಾಂಚಿ ಕೆ.ಆರ್ ಸುರೇಶ್, ನಿರ್ದೇಶಕರಾದ ಗಿರಿರಾಜಪ್ಪ, ಆನಂದಪ್ಪ, ಕುಸುಮ, ರಾಜುಒಡೆಯರ್, ಕೆಂಪಸಿದ್ದಯ್ಯ ಮತ್ತಿತರಿದ್ದರು.14ಕೆಕೆೆಡಿಯು2..

ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಕೆ. ತಿಪ್ಪೇಶ್ ಜೊತೆಗೆ ಸಂಘದ ಪದಾಧಿಕಾರಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ