- ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಕನ್ನಡಪ್ರಭ ವಾರ್ತೆ, ಅಜ್ಜಂಪುರಅಪರಿಮಿತ ಶಕ್ತಿ ಸಾಮರ್ಥ್ಯ ಹೊಂದಿರುವ ಯುವಕರಿಗೆ ಸೂಕ್ತ ಮಾರ್ಗ ತೋರಿಸಿ ಅವರನ್ನು ಪೂರ್ಣತ್ವದ ಕಡೆ ಕರೆ ದೊಯ್ಯುವುದೇ ಶಿಕ್ಷಣ ಎಂದು ಪ್ರಾಚಾರ್ಯ ಎಸ್.ಎಂ ನಾಗರಾಜರಾವ್ ಕಲ್ಕಟ್ಟೆ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025- 26 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿಸಿ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ, ಯುವಕರಲ್ಲಿ ಭೂಮಿ ತಾಳ್ಮೆ, ಆಕಾಶದ ವೈಶಾಲ್ಯತೆ, ಗಾಳಿಯ ಚಲನಶೀಲತೆ, ನೀರಿನ ಸಮುದ್ರ ಸೇರುವ ತವಕ, ಅಗ್ನಿಯ ಕರ್ತವ್ಯ ನಿಷ್ಠೆ ಹೊಂದಿದ್ದು ಜೀವನದಲ್ಲಿ ಒಳ್ಳೆಯ ಗುರು, ತಂದೆ ತಾಯಿ ವಾತಾವರಣ ಹಾಗೂ ಸಕಾರಾತ್ಮಕ ಪ್ರಯತ್ನ ವೆಂಬ ಪೋಷಕಾಂಶಗಳು ಸರಿಯಾಗಿ ದೊರೆತರೆ ಉಜ್ವಲ ಜೀವನ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಆನಂದ್ ಮಾತನಾಡಿ ನಿಜ ಶಿಕ್ಷಣವೆಂದರೆ ಮಕ್ಕಳಲ್ಲಿ ಸೃಜನಶೀಲ ಮನೋಭಾವ ಉದ್ದೀಪಿಸುವ, ಸ್ವಾವಲಂಬನೆ ಉಂಟು ಮಾಡುವ ಸಹಜವಾಗಿ ಬದುಕುವ, ಜಾತ್ಯತೀತ ಸಮಾನತೆ, ಸಹ ಕಾರ, ಸಹಬಾಳ್ವೆ ಬೆಳೆಸುವ ಒಟ್ಟಾರೆ ಅಲ್ಪ ಮಾನವನನ್ನುವಿಶ್ವಮಾನವನನ್ನಾಗಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಅಡಕವಾದ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವಿಫಲ ಅವಕಾಶ ಒದಗಿಸಲಿದ್ದು ಅವುಗಳನ್ನು ಸದುಪಯೋಗ ಗೊಳಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ. ಎಚ್. ಶ್ರೀನಿವಾಸ್ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಅದರಲ್ಲೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಯಿಸಲು ನಿರಂತರ ಪರಿಶ್ರಮ ಮುಖ್ಯ, ಪ್ರತಿ ಯೊಬ್ಬರಲ್ಲೂ ಆ ಸಾಮರ್ಥ್ಯವಿದ್ದು ಸಿಗುವ ಅವಕಾಶ ಸಮರ್ಪಕವಾಗಿ ಬೆಳೆಸಿಕೊಂಡಾಗ ಮಾತ್ರ ಉತ್ತಮ ಪ್ರತಿಫಲ ಪಡೆಯಬಹುದೆಂದರು.
ಪತ್ರಾಂಕಿತ ವ್ಯವಸ್ಥಾಪಕ ಬಿ.ಎಲ್. ಶಿವಮೂರ್ತಿ ಮಾತನಾಡಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನದಲ್ಲಿ ತೊಡಗಿ ದಾಗ ಆಲೋಚನೆ, ದೃಷ್ಟಿಕೋನಗಳು ಬೆಳೆಯುತ್ತವೆ. ಮಾನಸಿಕವಾಗಿ ಸದೃಢ ಮತ್ತು ಸ್ವಚ್ಛವಾಗುತ್ತೇವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ರಾಜಣ್ಣ .ಕೆ ಶಿಕ್ಷಣದಲ್ಲಿ ಏಕಕಾಲಕ್ಕೆ ಜ್ಞಾನ ಸಂಪಾದನೆ, ಮೌಲ್ಯಗಳು ಮತ್ತು ಕೌಶಲ್ಯಗಳ ಸುಸಂಗತ ಬೆಳವಣಿಗೆತಯಾಗಿ ಜ್ಞಾನ ಅಂತಕರಣ-ಕೌಶಲ ದೊರೆತಾಗ ಮಾತ್ರ ವ್ಯಕ್ತಿಯ ಸರ್ವ ತೋಮುಖ ಬೆಳವಣಿಗೆ ಯಾಗುತ್ತದೆ . 4 ಗೋಡೆಗಳ ಒಳಗೆ ದೊರೆಯುವ ಶಿಕ್ಷಣದ ಜೊತೆಗೆ ಅನೌಪಚಾರಿಕ ಶಿಕ್ಷಣ ಬದುಕನ್ನು ಉತ್ತಮವಾಗಿ ಕಟ್ಟಿ ಕೊಳ್ಳಲು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಕಾಲೇಜಿನ 8 ವರ್ಷಗಳ ಸೇವೆ ಸಲ್ಲಿಸಿ ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಡೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಆನಂದ್ ಅವರಿಗೆ ಬಿಳ್ಕೊಡುಗೆ ಹಾಗೂ ಪಿ.ಎಚ್.ಡಿ ಪದವಿ ಪಡೆದ ಡಾ. ಅನಿಲ್ ವಿರ್ಜೆ ಅವರನ್ನು ಸನ್ಮಾನಿಸಲಾಯಿತು. ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ನಿರ್ವಹಣಾ ಕಾಲೇಜಿನಲ್ಲಿ ಎನ್.ಎಸ್.ಎಸ್ ಸ್ವಯಂಸೇವಕರಿಗೆ ಆಯೋಜಿಸಿದ್ದ ನಾಯಕತ್ವ ತರಬೇತಿ ಕಾರ್ಯಗಾರದಲ್ಲಿ ಉತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ತನುಶ್ರೀ ಜೆಎಂ ಮತ್ತು ಚಂದು .ಪಿ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪುಸ್ತಕಗಳ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಪ್ರಾಧ್ಯಾಪಕರಾದ ಸತೀಶ್ ಈ, ಉಮೇಶ್, ಆನಂದ್ .ಆರ್, ಸುಮ ಪಿ, ಮಂಜುನಾಥ ಬಿ, ಡಾ.ನಾಗೇಶ್ ಎಚ್.ವಿ, ಎಂ. ಬಿ. ಮುಂಡರಗಿ, ಮೋಹನ್ ಕುಮಾರ್ .ವಿ, ಸಂತೋಷ್ .ಜೆ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಕಾಲೇಜಿನ ಬೋಧಕೇತರ ಸಿಬ್ಬಂದಿ, ಹಿರಿಯ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.