ಪಾಂಡವಪುರ:
ತಾಲೂಕಿನ ಸಣದಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಯಾನ್ಸರ್ ಅರಿವು ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ತಂಬಾಕು, ಧೂಮಪಾನ, ಮದ್ಯಪಾನ ಹಾಗೂ ಇಂದಿನ ಬದಲಾದ ಪಾಶ್ಚಾತ್ಯ ಜೀವನ ಶೈಲಿಯ ಅನುಕರಣೆ ಮತ್ತು ದೋಷಪೂರಿತ ಆಹಾರ ಪದ್ಧತಿಯಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಎಲ್ಲರೂ ಆರೋಗ್ಯಕರ ಜೀವನ ಶೈಲಿ ರೂಡಿಸಿಕೊಳ್ಳಬೇಕು ಮತ್ತು ಕಾಯಿಲೆಗಳ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದರು.ಜನರು ಮೂಢನಂಬಿಕೆಗಳಿಗೆ ಕಿವಿಗೊಡದೆ ಆಧುನಿಕ ವೈದ್ಯಕೀಯ ಚಿಕಿತ್ಸೆಗಳ ಸೌಲಭ್ಯವನ್ನು ಬಳಸಿಕೊಳ್ಳಬೇಕು, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಲಿವರ್ ಕ್ಯಾನ್ಸರ್ ನ ಲಕ್ಷಣಗಳು ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ವಿವರವಾದ ಮಾಹಿತಿಗಳ ಕುರಿತು ಮಾಹಿತಿ ನೀಡಿದರು.
ತ್ಯಾಜ್ಯ ವಿಂಗಡಣೆ ಕುರಿತು ಶಾಲಾ ಮಕ್ಕಳಿಗೆ ಅರಿವುಪಾಂಡವಪುರ:ಪುರಸಭೆಯಿಂದ ಪಟ್ಟಣದ ನಿರ್ಮಲ ಕಾರ್ಮೆಂಟ್ ಶಾಲೆಯಲ್ಲಿ ಮಳೆ ನೀರು ಸಂಗ್ರಹಿಸೋಣ ಭವಿಷ್ಯವನ್ನು ಸುರಕ್ಷಿತ ಗೊಳಿಸೋಣ ಮತ್ತು ಘನ ತ್ಯಾಜ್ಯ ವಿಲೇವಾರಿ ನಿಯಮಗಳು, ನಾಲ್ಕು ವಿಧದ ತ್ಯಾಜ್ಯ ವಿಂಗಡಣೆ ಮಾಡಿ ವಾಹನಕ್ಕೆ ನೀಡುವ ಶೀರ್ಷಿಕೆ ಕುರಿತು ಮಕ್ಕಳಿಗೆ ಪುರಸಭೆ ಕಿರಿಯ ಅಭಿಯಂತರೆ ಯಶಸ್ವಿನಿ ಮತ್ತು ಆರೋಗ್ಯ ನಿರೀಕ್ಷಕ ಮಂಜುನಾಥ್ ರವರು ಅರಿವು ಮೂಡಿಸಿದರು.
ಈ ವೇಳೆ ನಿರ್ಮಲ ಶಾಲೆ ಶಿಕ್ಷಕರಾದ ಕನಿಕಾ ಮೇರಿ, ರೀಟಾ ಜೋಯ್, ಶಾಲೆ ಸಹ ಶಿಕ್ಷಕರು ಮತ್ತು ಪುರಸಭೆ ಸಿಬ್ಬಂದಿ ಶಿವರಾಜ್, ಜೋಯ್, ಹೆಲೆನ್, ಕೌಶಲ್ಯ, ಕಾವ್ಯ, ಸ್ನೇಹ ಸೇರಿದಂತೆ ಹಲವರು ಉಪಸ್ಥಿತಿ ಇದ್ದರು.