ಲವ್ ಜಿಹಾದ್ ವಿರುದ್ದ ಜಾಗೃತಿ ಮೂಡಿಸಬೇಕು: ಗಣರಾಜ್ ಭಟ್‌

KannadaprabhaNewsNetwork |  
Published : Jan 29, 2026, 02:45 AM IST
ಲವ್ ಜಿಹಾದ್ ವಿರುದ್ದದ ಜನಾಕ್ರೋಶ  | Kannada Prabha

ಸಾರಾಂಶ

ಮುಸ್ಲಿಂ ಮತಾಂಧ ಜಿಹಾದಿಗಳು ಲವ್ ಜಿಹಾದ್ ಮೂಲಕ ಸನಾತನ ಧರ್ಮವನ್ನು ಮುಗಿಸುವ ಹುನ್ನಾರಕ್ಕೆ ಮುಂದಾಗಿದ್ದು, ಹಿಂದೂ ಸಮಾಜ ತಮ್ಮ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಪೂತ್ತೂರಿನ ಗಣರಾಜ್ ಭಟ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಮುಸ್ಲಿಂ ಮತಾಂಧ ಜಿಹಾದಿಗಳು ಲವ್ ಜಿಹಾದ್ ಮೂಲಕ ಸನಾತನ ಧರ್ಮವನ್ನು ಮುಗಿಸುವ ಹುನ್ನಾರಕ್ಕೆ ಮುಂದಾಗಿದ್ದು, ಹಿಂದೂ ಸಮಾಜ ತಮ್ಮ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಪೂತ್ತೂರಿನ ಗಣರಾಜ್ ಭಟ್‌ ಹೇಳಿದರು.ಸಿದ್ದಾಪುರ ಬಸ್‌ ನಿಲ್ಲಾಣದಲ್ಲಿ ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಆಯೋಜಿಸಿದ್ದ ಲವ್ ಜಿಹಾದ್ ವಿರುದ್ದದ ಜನಾಕ್ರೋಶ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಲವ್ ಜಿಹಾದ್ ನಿಂದ ದೇಶದ ಭದ್ರತೆಗೆ ಧಕ್ಕೆಯಾಗುತ್ತಿದ್ದು, ಬಹುಸಂಖ್ಯಾತರನ್ನು ಟಾರ್ಗೆಟ್ ಮಾಡಿ, ಪ್ರೀತಿಯ ನಾಟಕವಾಡಿ ನಂತರ ನಮ್ಮ ಹೆಣ್ಣು ಮಕ್ಕಳನ್ನು ಕೇರಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮತಾಂತರ ಮಾಡಲಾಗುತ್ತಿದೆ.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದೂ ಸುರಕ್ಷಾ ಸಮಿತಿ ಸಂಚಾಲಕ ಕುಕ್ಕೆರ ಅಜಿತ್, ಮತಾಂಧರು ಹಿಂದೂ ಮಕ್ಕಳನ್ನು ಮತಾಂತರ ಮಾಡಿ ಭಯೋತ್ಪಾದಕ ಚಟುವಟಿಕೆಗೆ ಬಳಸುತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಕುತಂತ್ರಕ್ಕೆ ಬಲಿಯಾಗಬಾರದು ಹಾಗೂ

ಲ್ಯಾಂಡ್ ಜಿಹಾದ್ ಎಂದು ಹಿಂದೂಗಳ ಭೂಮಿಯನ್ನು ಖರೀದಿಸಿ ನಮ್ಮವರ ಸಂಖ್ಯೆ ಕಡಿಮೆ ಮಾಡಲು ಹೊರಟಿದೆ. ಹಾಗಾಗಿ ಹಿಂದೂಗಳು ಮತಾಂಧ ಶಕ್ತಿಗಳಿಗೆ ತಮ್ಮ ಜಾಗಗಳನ್ನು ಮಾರಾಟ ಮಾಡದಂತೆ ಎಚ್ಚರ ವಹಿಸಬೇಕು ಎಂದರು.

ಹಿಂದೂ ಮಹಿಳಾ ಪ್ರಮುಖರಾದ ಅನಿತಾ ಪೂವಯ್ಯ ಮಾತನಾಡಿ, ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಬಲೆಗೆ ಬೀಳಿಸಿ ಅವರಿಂದ ಅಕ್ರಮ ಚಟುವಟಿಕೆ ಮಾಡಿಸುತ್ತಿದ್ದು, ಹಲವರು ಇಂದು ಅವರ ಬಲೆಗೆ ಬಿದ್ದು ಪರಿತಪಿಸುತಿದ್ದಾರೆ. ಈ ಬಗ್ಗೆ ಪ್ರತಿ ಮನೆಗಳಲ್ಲಿ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಬುಡಕಟ್ಟು ಸಮಾಜದ ಮುಖ್ಯಸ್ಥ ಆರ್.ಕೆ. ಚಂದ್ರು, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ರಮೇಶ್ ಪುದಿಯಂಗಡ, ಕರ್ನಲ್‌ ಕನ್ನಂಡ ಉತ್ತಪ್ಪ ಇದ್ದರು.

ಸಭೆಗೂ ಮುಂಚೆ ಸಿದ್ದಾಪುರದ ಅಯ್ಯಪ್ಪ ದೇವಾಲಯ ಮುಂಭಾಗದಿಂದ ಮೆರವಣಿಗೆ ಮೂಲಕ ಸಿದ್ದಾಪುರ ಬಸ್‌ ನಿಲ್ದಾಣಕ್ಕೆ ಆಗಮಿಸಿದ ಪ್ರತಿಭಟನಾಕಾರರು ಲವ ಜಿಹಾದ್ ನಡೆಸುವ ಮತಾಂಧ ಶಕ್ತಿಗಳ ವಿರುದ್ದ ಘೋಷಣೆ ಕೂಗಿದರು. ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಹಿಂದೂ ಕಾರ್ಯಕತ್ರರು‌ ಸಭೆಗೆ ಆಗಮಿಸಿದ್ದು, ಜಿಲ್ಲಾ ಪೊಲೀಸರು

ಬಂದೋಬಸ್ತ್ ನಡೆಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮತ್ತೊಂದು ಖಾಸಗಿ ಸ್ಲೀಪರ್‌ ಬಸ್‌ ಬೆಂಕಿಗೆ ಆಹುತಿ!
ಸರ್ಕಾರಿ ಅಧಿಕಾರಿ, ನೌಕರರಿಗೆ ಖಾದಿ ದಿರಿಸು ಕಡ್ಡಾಯ ?